ಭಾರತೀಯ ಜ್ಯೋತಿಷಿಗಳಿಂದ ಪಾಕ್ ನಲ್ಲಿನ ಉಗ್ರ ದಾಳಿ ಬಗ್ಗೆ ನಿಖರ ಭವಿಷ್ಯ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಪಾಕಿಸ್ತಾನದಲ್ಲೀಗ ಭಾರತದ ಜ್ಯೋತಿಷಿಗಳ ಬಗ್ಗೆ ಸಿಟ್ಟು ಹೆಚ್ಚಾಗಿದೆಯಂತೆ. ಕೇರಳದಿಂದ ಜ್ಯೋತಿಷಿಯೊಬ್ಬರು ಹೇಳಿರುವ ಭೂ ಕಂಪನದ ಬಗೆಗಿನ ಭವಿಷ್ಯವನ್ನೇ ಐಎಸ್ ಐ ಗಂಭೀರವಾಗಿ ತೆಗೆದುಕೊಂಡಿದ್ದು, ಇದೀಗ ನತ್ತೊಬ್ಬ ಜ್ಯೋತಿಷಿ ಹೇಳಿರುವ ಭವಿಷ್ಯ ಪಾಕಿಸ್ತಾನವನ್ನು ಚಿಂತೆಗೆ ಈಡು ಮಾಡಿದೆ.

ಕಳೆದ ಅಕ್ಟೋಬರ್ ನಲ್ಲಿ ಭಾರತದ ಜ್ಯೋತಿಷಿಯೊಬ್ಬರು, ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ದಾಳಿ ನಡೆಯುವ ಬಗ್ಗೆ ತಿಳಿಸಿದ್ದರು. ಪಾಕಿಸ್ತಾನ ತಲೆ ಕೆಡಿಸಿಕೊಂಡಿರುವುದು ಏಕೆಂದರೆ, ಮುಂದಿನ ಫೆಬ್ರವರಿಯಲ್ಲಿ ಐದು ಉಗ್ರ ದಾಳಿಗಳು ನಡೆಯುತ್ತವೆ ಎಂದು ಅದೇ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.

ಡಿ.31 ರೊಳಗೆ ಸುನಾಮಿ! ಅತೀಂದ್ರಿಯ ಶಕ್ತಿಯ ಬಾಬು ಕಳಾಯಿಲ್ ಎಚ್ಚರಿಕೆ!

ಕಳೆದ ಅಕ್ಟೋಬರ್ 13ರಂದು ಅನಿರುದ್ಧ್ ಕುಮಾರ್ ಎಂಬುವರು ಟ್ವೀಟ್ ಮಾಡಿ, ನವೆಂಬರ್ ನೊಳಗೆ ಪಾಕಿಸ್ತಾನದಲ್ಲಿ ಉಗ್ರಗಾಮಿಗಳಿಂದ ದಾಳಿ ಆಗುತ್ತದೆ ಎಂದಿದ್ದರು. ಆ ಟ್ವೀಟ್ ಅನ್ನು ಪಾಕಿಸ್ತಾನದ ಡಾನ್ ಪತ್ರಿಕೆಗೆ ಟ್ಯಾಗ್ ಕೂಡ ಮಾಡಿದ್ದರು. ಆದರೆ ಡಿಸೆಂಬರ್ 1ರಂದು ಪೇಶಾವರದ ಕೃಷಿ ತರಬೇತಿ ಕೇಂದ್ರದ ಮೇಲೆ ದಾಳಿ ನಡೆದು, 13 ಮಂದಿ ಮೃತಪಟ್ಟಿದ್ದರು.

Why have Indian astrologers left Pakistan spooks spooked

ಡಿಸೆಂಬರ್ 1ರಂದು ಬುರ್ಕಾ ಧರಿಸಿ ಬಂದ ಭಯೋತ್ಪಾದಕರು ಪೇಶಾವರದ ಕೃಷಿ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದ್ದರು. ಆ ನಂತರ ಭವಿಷ್ಯ ನಿಜವಾಗಿದೆ. ಆದರೆ ಒಂದು ದಿನ ತಡವಾಗಿದೆ ಎಂದು ಮಿಶ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಮುಂದಿನ ಫೆಬ್ರವರಿಯಲ್ಲಿ ಇನ್ನೂ ಐದು ಉಗ್ರ ದಾಳಿಗಳು ನಡೆಯುತ್ತವೆ ಎಂದಿದ್ದಾರೆ.

ಪೇಶಾವರ ಕೃಷಿ ವಿವಿಯಲ್ಲಿ ರಕ್ತದೋಕುಳಿ ಹರಿಸಿದ ತಾಲಿಬಾನ್ ಉಗ್ರರು

ಇದೀಗ ಪಾಕಿಸ್ತಾನದ ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಭಾರತೀಯನೊಬ್ಬ ಇಷ್ಟು ನಿಖರವಾಗಿ ಭಯೋತ್ಪಾದಕರ ದಾಳಿ ಬಗ್ಗೆ ತಿಳಿಸಲು ಹೇಗೆ ಸಾಧ್ಯ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಅಲ್ಲಿನ ಜನಪ್ರತಿನಿಧಿ ರೆಹಮಾನ್ ಮಲಿಕ್, ಪಾಕಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಭಾರತ ಕುಮ್ಮಕ್ಕು ನೀಡುತ್ತಿದೆ ಎಂದು ಕೂಡ ಆರೋಪ ಮಾಡಿದ್ದಾರೆ.

ಕಳೆದ ತಿಂಗಳು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ ಐ ಭೂಕಂಪನದ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಿತ್ತು. ಈ ಮಾಹಿತಿಯು ಕೇರಳದ ಸಂಸ್ಥೆಯೊಂದು ನುಡಿದಿದ್ದ ಭವಿಷ್ಯದ ಮೇಲೆ ಆಧಾರಪಟ್ಟಿತ್ತು. ಆ ಸಂಸ್ಥೆಯು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಭೂ ಕಂಪನದ ಬಗ್ಗೆ ಎಚ್ಚರಿಕೆಯ ಮಾತು ಹೇಳಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistan of late has been having an uncomfortable relationship with Indian astrologers. After the ISI put out an earthquake warning following a prediction from Kerala, now another astrologer has put the country in a spot of bother.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ