ಪುಟಿನ್, ಜಿ ಪಿಂಗ್ ಗೂ ಮುನ್ನ ಮೋದಿಗೆ ಕರೆ ಮಾಡಿದ ಟ್ರಂಪ್ ಲೆಕ್ಕಾಚಾರವೇನು?

Posted By:
Subscribe to Oneindia Kannada

ವಾಷಿಂಗ್ಟನ್, ಜನವರಿ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ರಾತ್ರಿ (ಭಾರತೀಯ ಕಾಲಮಾನ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್ ಮಾಡಿ ಮಾತನಾಡಿದ್ದಾರೆ. ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರದ ಮೊದಲ ಫೋನ್ ಕರೆ ಇದಾಗಿದೆ. ಭಾರತ-ಅಮೆರಿಕ ಮಧ್ಯದ ಬಾಂಧವ್ಯವನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ವೈಟ್ ಹೌಸ್ ಪ್ರವೇಶಿಸಿದ ನಂತರ ಟ್ರಂಪ್ ಅವರು ಕರೆ ಮಾಡುತ್ತಿರುವ ವಿಶ್ವದ ನಾಯಕರ ಪೈಕಿ ಐದನೆಯವರು ಮೋದಿ. ಶನಿವಾರ ಕೆನಡಾ, ಮೆಕ್ಸಿಕೋ ನಾಯಕರ ಜತೆಗೆ, ಭಾನುವಾರ ಇಸ್ರೇಲ್ ಹಾಗೂ ಈಜಿಪ್ಟ್ ನಾಯಕರ ಜತೆಗೆ ದೂರವಾಣಿ ಸಂಭಾಷಣೆ ನಡೆಸಿದ್ದ ಟ್ರಂಪ್ ಅವರು ಐದನೇದಾಗಿ ಭಾರತದ ಪ್ರಧಾನಿ ಜತೆಗೆ ಮಾತನಾಡಿದ್ದಾರೆ.[ಎಚ್ 1ಬಿ ವೀಸಾ ಬಗ್ಗೆ ಮೋದಿಗೆ ಫೋನ್ ಮೂಲಕ ವಿವರಿಸಿದ ಟ್ರಂಪ್]

Why Donald Trump chose Modi over Putin, Xi Jinping and Abe

ಮಾಸ್ಕೋ, ಬೀಜಿಂಗ್, ಟೋಕಿಯೋ ಅಥವಾ ಯಾವುದೇ ಯುರೋಪ್ ರಾಷ್ಟ್ರಗಳಿಗಿಂತ ಮುಂಚೆ ಭಾರತದ ಜತೆಗೆ ಮಾತುಕತೆ ನಡೆಸಿದ್ದಾರೆ. ವಿವಾದರಹಿತವಾದ ಮತ್ತು ತೂಕದ ಬಾಂಧವ್ಯವನ್ನು ಅಮೆರಿಕವು ಭಾರತದ ಜತೆಗೆ ಹೊಂದಿದೆ ಎಂಬುದರ ಕಡೆಗೆ ಅದು ಬೊಟ್ಟು ಮಾಡುತ್ತದೆ. ಈ ಕರೆಯು ಎರಡೂ ದೇಶಗಳ ಮಧ್ಯದ ದ್ವಿಪಕ್ಷೀಯ ಸಂಬಂಧದ ಆಧಾರದ ಮೇಲಿನ ಆಯ್ಕೆಯಾಗಿದೆ.[ಮಾಧ್ಯಮಗಳ ಮೇಲೆ ಹರಿಹಾಯ್ದ ಯುಎಸ್ ಅಧ್ಯಕ್ಷ ಟ್ರಂಪ್]

ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ಮೊದಲನೆಯವರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ವಾಷಿಂಗ್ಟನ್ ಗೆ ಶುಕ್ರವಾರ ಭೇಟಿ ನೀಡುತ್ತಿದ್ದಾರೆ, ಯುಎಸ್ ಜತೆಗಿನ ಬಾಂಧವ್ಯದ ಬಗ್ಗೆ ಪ್ರಸ್ತಾವಿಸಲಿದ್ದಾರೆ. ಆದರೆ ಟ್ರಂಪ್ ಗೆಲುವಿನ ನಂತರ ಅವರನ್ನು ಅಭಿನಂದಿಸಿದ ಮೊದಲ ನಾಯಕ ನರೇಂದ್ರ ಮೋದಿ.

ರಾಷ್ಟ್ರೀಯತೆಯ ವಿಷಯವನ್ನಿಟ್ಟುಕೊಂಡು ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಹಾಗೂ ಟ್ರಂಪ್ ಮಧ್ಯೆ ಸಾಮ್ಯತೆಯಿದೆ ಎಂಬುದು ತಜ್ಞರ ಅಭಿಪ್ರಾಯ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆಯಲ್ಲೂ ಭಾರತದ ಜತೆಗೆ ಉತ್ತಮ ಸಂಬಂಧ ಹೊಂದುವುದಾಗಿ ಟ್ರಂಪ್ ಹೇಳಿದ್ದರು.[ಅಧ್ಯಕ್ಷರಾಗಿ 24 ಗಂಟೆ ಕಳೆಯುವುದರೊಳಗೆ ಟ್ರಂಪ್ ಗೆ ಉಗ್ರರ ಬೆದರಿಕೆ!]

ನನ್ನ ಆಡಳಿತದ ಅವಧಿಯಲ್ಲಿ ಉತ್ತಮ ಸ್ನೇಹಿತರಾಗಿರುತ್ತೇವೆ. ಮೋದಿ ತುಂಬ ಶಕ್ತಿಯುತ ನಾಯಕರು. ಅವರ ಜೊತೆಗೆ ಒಟ್ಟಾಗಿ ಸಾಗಲು ಎದುರು ನೋಡುತ್ತೇನೆ ಎಂದು ಸಹ ಹೇಳಿದ್ದರು. ಇನ್ನು ಸೋಮವಾರ ಭಾರತ ಮೂಲದ ಅಮೆರಿಕನ್ ಅಜಿತ್ ಪೈ ಅವರನ್ನು ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಟ್ರಂಪ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Trump White House chose to call India— Trump's fifth to world leaders — after the new President had conversations with leaders of Washington's two immediate neighbours, Canada and Mexico, on Saturday, and with leaders of Israel and Egypt on Sunday.
Please Wait while comments are loading...