• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ನಿತ್ಯ ಸೇವಿಸುವ 'ಅಕ್ಕಿ' ಬೆಲೆ ಏರಿಕೆ ಆಗುತ್ತಿರುವುದರ ಹಿಂದಿನ ಸೀಕ್ರೆಟ್!?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಭಾರತದಲ್ಲಿ ಖಾರಿಫ್ ಉತ್ಪಾದನೆಯ ಕಡಿಮೆಯಾದ ಮುನ್ಸೂಚನೆ ನಡುವೆ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನಲ್ಲಿ ಶೇಕಡಾ 11ರಷ್ಟು ಏರಿಕೆ ಆಗಿದೆ. ಇದರಿಂದಾಗಿ ದೇಶೀಯ ಅಕ್ಕಿ ಬೆಲೆಗಳು ಏರುಮುಖವಾಗುತ್ತಿದ್ದು, ಇದು ಮತ್ತಷ್ಟು ಹೆಚ್ಚಳಗೊಳ್ಳಬಹುದು ಎಂದು ಕೇಂದ್ರ ಆಹಾರ ಸಚಿವಾಲಯವು ತಿಳಿಸಿದೆ.

ಭಾರತದ ಅಕ್ಕಿ ರಫ್ತು ನೀತಿಗೆ ಇತ್ತೀಚಿನ ತಿದ್ದುಪಡಿಗಳ ಹಿಂದೆ ಸಚಿವಾಲಯವು ವಿವರವಾದ ತಾರ್ಕಿಕ ವಿವರಣೆಯನ್ನು ನೀಡಿದೆ. ಭಾರತದ ಅಕ್ಕಿ ರಫ್ತು ನಿಯಮಗಳಲ್ಲಿನ ಇತ್ತೀಚಿನ ಬದಲಾವಣೆಗಳು ರಫ್ತುಗಳ ಲಭ್ಯತೆಯನ್ನು ಕಡಿಮೆ ಮಾಡದೆಯೇ "ದೇಶೀಯ ಬೆಲೆಗಳನ್ನು ಪರಿಶೀಲಿಸಲು ಸಹಾಯ ಮಾಡಿದೆ," ಎಂದು ಸಚಿವಾಲಯ ಹೇಳಿದೆ.

ಸಂತೆಯ ಚಿಂತೆ: ಭಾರತದಲ್ಲಿ ಡಬಲ್-ತ್ರಿಬಲ್ ಆಗಿದ್ದು ಹೇಗೆ ದಿನಸಿ ಬೆಲೆ?ಸಂತೆಯ ಚಿಂತೆ: ಭಾರತದಲ್ಲಿ ಡಬಲ್-ತ್ರಿಬಲ್ ಆಗಿದ್ದು ಹೇಗೆ ದಿನಸಿ ಬೆಲೆ?

ಈ ತಿಂಗಳ ಆರಂಭದಲ್ಲಿ, ಸರ್ಕಾರವು ಪುಡಿ(ನುಚ್ಚಕ್ಕಿ) ಅಕ್ಕಿಯ ರಫ್ತು ನಿಷೇಧಿಸಿತು. ಈ ಖಾರಿಫ್ ಋತುವಿನಲ್ಲಿ ದೇಶೀಯ ಸರಬರಾಜು ಭತ್ತದ ಬೆಳೆ ವಿಸ್ತೀರ್ಣವನ್ನು ಹೆಚ್ಚಿಸಲು ಬಾಸ್ಮತಿ ಅಲ್ಲದ ಅಕ್ಕಿಗೆ ಶೇ.20ರಷ್ಟು ರಫ್ತು ಸುಂಕವನ್ನು ವಿಧಿಸಲಾಗುತ್ತಿದೆ.

ದೇಶದಲ್ಲಿ ಅಕ್ಕಿ ಬೆಲೆ ಏರಿಕೆ ಯಾಕೆ?

ದೇಶದಲ್ಲಿ ಅಕ್ಕಿ ಬೆಲೆ ಏರಿಕೆ ಯಾಕೆ?

"ಅಕ್ಕಿಯ ದೇಶೀಯ ಬೆಲೆಗಳು ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿವೆ. ಕಳೆದ ವರ್ಷದ ಅನುಗುಣವಾದ ಅವಧಿಗೆ ಹೋಲಿಸಿದರೆ ಸುಮಾರು 6 ಮಿಲಿಯನ್ ಟನ್ ಭತ್ತದ ಉತ್ಪಾದನೆ ಕಡಿಮೆಯಾಗಿರುವ ಮುನ್ಸೂಚನೆ ಮತ್ತು ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನಲ್ಲಿ ಶೇಕಡಾ 11ರಷ್ಟು ಹೆಚ್ಚಳವಾಗಿರುವುದೇ ಈ ದರ ಏರಿಕೆಗೆ ಕಾರಣವಾಗಿರಬಹುದು," ಎಂದು ಆಹಾರ ಸಚಿವಾಲಯ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಅದರ ಪ್ರಕಾರ, "ಅಕ್ಕಿಯ ಚಿಲ್ಲರೆ ದರವು ವಾರದಲ್ಲಿ ಶೇ.0.24, ಒಂದು ತಿಂಗಳಿನಲ್ಲಿ ಶೇ.2.46 ಮತ್ತು ಸೆಪ್ಟೆಂಬರ್ 19ಕ್ಕೆ ವರ್ಷದಲ್ಲಿ ಶೇಕಡಾ 8.67 ರಷ್ಟು ಹೆಚ್ಚಳವಾಗಿರುವುದನ್ನು ತೋರಿಸುತ್ತಿದೆ. ಐದು ವರ್ಷಗಳ ಸರಾಸರಿಯಲ್ಲಿ ಶೇಕಡಾ 15.14 ರಷ್ಟು ಹೆಚ್ಚಳವಾಗಿದೆ," ಎಂಬುದು ತಿಳಿದು ಬಂದಿದೆ.

ನುಚ್ಚಕ್ಕಿ ಬೆಲೆ ಏರಿಕೆಯ ಎಫೆಕ್ಟ್ ಹೇಗಿದೆ ಗೊತ್ತಾ?

ನುಚ್ಚಕ್ಕಿ ಬೆಲೆ ಏರಿಕೆಯ ಎಫೆಕ್ಟ್ ಹೇಗಿದೆ ಗೊತ್ತಾ?

ಭಾರತದ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 16 ರೂಪಾಯಿ ಆಗಿದ್ದ ದೇಶೀಯ ಒಡೆದ ಅಕ್ಕಿ ಬೆಲೆಯು 22 ರೂಪಾಯಿಗೆ ಏರಿಕೆಯಾಗಿದೆ. ಫೀಡ್ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಕೋಳಿ ಮತ್ತು ಪಶುಸಂಗೋಪನೆ ರೈತರ ಮೇಲೆ ಹೆಚ್ಚು ಪರಿಣಾಮ ಬೀರಿಲಿದೆ ಎಂದು ಸಚಿವಾಲಯ ಹೇಳಿದೆ. ಏಕೆಂದರೆ ಕೋಳಿ ಆಹಾರಕ್ಕಾಗಿ ಸುಮಾರು 60-65 ಪ್ರತಿಶತದಷ್ಟು ಆಹಾರವು ಇದೇ ಮುರಿದ ಅಕ್ಕಿಯಿಂದ ಬರುತ್ತದೆ.
"ಫೀಡ್‌ಸ್ಟಾಕ್‌ಗಳ ಬೆಲೆಗಳಲ್ಲಿನ ಯಾವುದೇ ಹೆಚ್ಚಳವು ಹಾಲು, ಮೊಟ್ಟೆ, ಮಾಂಸ ಮುಂತಾದ ಕೋಳಿ ಉತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ, ಅದರಿಂದ ಆಹಾರದ ಹಣದುಬ್ಬರವು ಹೆಚ್ಚಾಗುತ್ತದೆ," ಎಂದು ಸಚಿವಾಲಯವು ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಅಕ್ಕಿಯ ದರ ಎಷ್ಟಿದೆ ಗೊತ್ತೆ?

ಜಾಗತಿಕ ಮಟ್ಟದಲ್ಲಿ ಅಕ್ಕಿಯ ದರ ಎಷ್ಟಿದೆ ಗೊತ್ತೆ?

ಕೇಂದ್ರ ಆಹಾರ ಸಚಿವಾಲಯದ ಪ್ರಕಾರ, ಭಾರತೀಯ ಬಾಸ್ಮತಿ ಅಲ್ಲದ ಅಕ್ಕಿಯ ಅಂತಾರಾಷ್ಟ್ರೀಯ ಬೆಲೆ ಪ್ರತಿ ಕಿಲೋಗ್ರಾಂಗೆ 28 ರಿಂದ 29 ರೂಪಾಯಿ ಆಗಿದೆ. ಇದು ದೇಶೀಯ ಬೆಲೆಗಿಂತ ಹೆಚ್ಚಾಗಿದೆ. ಬಾಸ್ಮತಿ ಅಲ್ಲದ ಅಕ್ಕಿಯ ಮೇಲೆ ಶೇಕಡಾ 20ರಷ್ಟು ರಫ್ತು ಸುಂಕವನ್ನು ಹಾಕಲಾಗುತ್ತಿದ್ದು, ಅಕ್ಕಿ ಬೆಲೆಯನ್ನು ಕಡಿಮೆ ಮಾಡಲು ಕಾರಣವಾಗಿದೆ. 2002-23ರ ಖಾರಿಫ್ ಋತುವಿನಲ್ಲಿ ದೇಶೀಯ ಅಕ್ಕಿ ಉತ್ಪಾದನೆಯು 104.99 ಮಿಲಿಯನ್ ಟನ್‌ಗಳಾಗಿದ್ದು, ಶೇ.6ರಷ್ಟು ಕುಸಿದಿದೆ ಎಂದು ಸಚಿವಾಲಯ ಹೇಳಿದೆ.
ಇತ್ತೀಚಿನ ತಿಂಗಳುಗಳಲ್ಲಿ ಧಾನ್ಯಗಳ ರಫ್ತು ಹೆಚ್ಚಳದ ನಂತರ ದೇಶೀಯ ಮಾರುಕಟ್ಟೆಯ ಮೇಲೆ ಒತ್ತಡ ಹೇರಿದ ನಂತರ ಕೋಳಿ ಆಹಾರದಲ್ಲಿ ಬಳಸಲಾಗುವ ಮುರಿದ ಅಕ್ಕಿಯ ರಫ್ತಿನ ಮೇಲೆಯೂ ನಿಷೇಧ ಹೇರಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿಗಳ) ಸಾಧನೆಗೆ ಅನುಗುಣವಾಗಿ ದೇಶದ ಆಹಾರ ಭದ್ರತೆಯ ಕಾಳಜಿಗಾಗಿ ಕೈಗೊಳ್ಳಲಾಗಿದೆ.

ಕೋಳಿ ಸಾಕಾಣಿಕೆ ಮತ್ತು ಪಶುಸಂಗೋಪನೆಗೆ ಉತ್ತೇಜನ

ಕೋಳಿ ಸಾಕಾಣಿಕೆ ಮತ್ತು ಪಶುಸಂಗೋಪನೆಗೆ ಉತ್ತೇಜನ

ದುಬಾರಿ ತೈಲ ಆಮದನ್ನು ಉಳಿಸುವ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು ಬೆಂಬಲಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆಗಳನ್ನು ಮಾಡಲಾಗಿದೆ. ಹಾಲು, ಮಾಂಸದ ಬೆಲೆಯನ್ನು ಹೊಂದಿರುವ ಪಶು ಆಹಾರದ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಪಶುಸಂಗೋಪನೆ ಮತ್ತು ಕೋಳಿ ಸಾಕಾಣಿಕೆ ಮತ್ತು ಮೊಟ್ಟೆ ವಲಯಗಳಿಗೆ ಸಹಾಯ ಮಾಡುತ್ತದೆ. ಭೌಗೋಳಿಕ-ರಾಜಕೀಯ ಸನ್ನಿವೇಶದಿಂದಾಗಿ ಒಡೆದ ಅಕ್ಕಿಗೆ ಜಾಗತಿಕ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದೆ, ಇದು ಪಶು ಆಹಾರ ಸೇರಿದಂತೆ ಸರಕುಗಳ ಬೆಲೆ ಚಲನೆಯ ಮೇಲೆ ಪ್ರಭಾವ ಬೀರಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಮುರಿದ ಅಕ್ಕಿಯ ರಫ್ತು ಈ ವರ್ಷದ ಏಪ್ರಿಲ್-ಆಗಸ್ಟ್‌ನಲ್ಲಿ 21.31 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ, ಹಿಂದಿನ ವರ್ಷದ ಅವಧಿಯಲ್ಲಿ 0.51 ಲಕ್ಷ ಟನ್‌ಗಳಷ್ಟಿತ್ತು ಎಂದು ಸಚಿವಾಲಯ ತಿಳಿಸಿದೆ. ರೈತರಿಗೆ ಉತ್ತಮ ಲಾಭದಾಯಕ ಬೆಲೆ ಸಿಗುವಂತೆ ಮಾಡಲು ಸರ್ಕಾರವು ಬೇಯಿಸಿದ ಅಕ್ಕಿಗೆ ಸಂಬಂಧಿಸಿದ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಅದೇ ರೀತಿ ಬಾಸ್ಮತಿ ಅಕ್ಕಿ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

English summary
Why Domestic rice prices are showing an upward trend in India; food ministry Explained here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X