ಪ್ರಧಾನಿ ಮೋದಿ ವಿಶ್ವ ನಾಯಕರನ್ನು ಅಪ್ಪಿಕೊಳ್ಳೋದೇಕೆ?

ನವದೆಹಲಿ, ಜನವರಿ 20: ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರುಗಳನ್ನು ಭೇಟಿಯಾಗುವ ಸಂದರ್ಭದಲ್ಲಿ ಅವರನ್ನು ತಬ್ಬಿಕೊಳ್ಳುವ ಕುರಿತಂತೆ ಇತ್ತೀಚೆಗೆ ತಾನೇ ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದು ನೆನಪಿರಬಹುದು.

ಈ ಕುರಿತಂತೆ ಚಾನೆಲ್ ವೊಂದರಲ್ಲಿ ಸಂದರ್ಶನ ನೀಡುತ್ತಿದ್ದ ಸಮಯದಲ್ಲಿ ಪ್ರತಿಕ್ರಿಯಿಸಿದ ಮೋದಿ, ನನಗೆ ಶಿಷ್ಟಾಚಾರಗಳ ಕುರಿತು ಗೊತ್ತಿಲ್ಲ, ಏಕೆಂದರೆ ನಾನೊಬ್ಬ ಸಾಮಾನ್ಯ ಮನುಷ್ಯ ಎಂದಿದ್ದಾರೆ.

Why does Narendra Modi hug world leaders? Hear it from ‘common man’ Modi himself

"ವಿಶ್ವ ನಾಯಕರೊಂದಿಗೆ ಹಸ್ತಲಾಘವ ಮಾಡುವ, ಅವರೊಂದಿಗೆ ನಿಂತು ಎಡಕ್ಕೆ ಬಲಕ್ಕೆ ನೋಡುವ ಶಿಷ್ಟಾಚಾರವನ್ನು ನಾನೂ ಪಾಲಿಸುತ್ತಿದ್ದೇನೆ. ಆದರೆ ನಾನು ಒಬ್ಬ ಸಾಮಾನ್ಯ ಮನುಷ್ಯ. ನಾನು ನನ್ನ ದೇಶಕ್ಕೆ ಯಾವುದೇ ಅವಮಾನವಾಗದಂತೆ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಬಲ್ಲೆ" ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಧಾನಿ ಮೋದಿ ಶಿಷ್ಟಾಚಾರಗಳನ್ನೆಲ್ಲ ಬದಿಗೊತ್ತುತ್ತಿದ್ದಾರೆ ಎಂದು ಇತ್ತೀಚೆಗೆ ತಾನೇ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದರು. ಕಾಂಗ್ರೆಸ್ಸಿನ ಈ ನಡೆಯನ್ನು ಅಪ್ರಬುದ್ಧ ನಡವಳಿಕೆ ಎಂದು ಬಿಜೆಪಿ ನಾಯಕರು ಜರೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+