ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಿಂತ ಕೊವ್ಯಾಕ್ಸಿನ್ ದುಬಾರಿ ಯಾಕೆ?

|
Google Oneindia Kannada News

ನವದೆಹಲಿ, ಜೂನ್ 10: ಭಾರತದಲ್ಲಿ ಕೊರೊನಾವೈರಸ್ ಲಸಿಕೆಯನ್ನು ಶೇ.75ರಷ್ಟು ಉಚಿತವಾಗಿ ನೀಡಲಾಗುತ್ತಿದೆ. ಇದರ ಹೊರತಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 780 ರೂಪಾಯಿ, ರಷ್ಯಾದ ಒಂದು ಡೋಸ್ ಸ್ಪುಟ್ನಿಕ್-ವಿ ಲಸಿಕೆಗೆ 1,145 ರೂಪಾಯಿ ಬೆಲೆ ನಿಗದಿಗೊಳಿಸಲಾಗಿದೆ. ಆದರೆ ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ ಸೇವಾ ಶುಲ್ಕ ಹಾಗೂ ಜಿಎಸ್ ಟಿ ಸೇರಿ 1,410 ರೂಪಾಯಿ ಆಗುತ್ತದೆ.

ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ದುಬಾರಿ ಎನಿಸಿರುವ ಕೊರೊನಾವೈರಸ್ ಲಸಿಕೆಯ ಪೈಕಿ ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕಯೂ ಸಹ ಒಂದಾಗಿದೆ. ಕೊವಿಶೀಲ್ಡ್ ಲಸಿಕೆಗಿಂತ ಎರಡು ಪಟ್ಟು ಹೆಚ್ಚು ಬೆಲೆಯನ್ನು ಹೊಂದಿದೆ. ವಿದೇಶಗಳಲ್ಲಿ ಫೈಜಸ್ ಕಂಪನಿಯ ಲಸಿಕೆಯಷ್ಟೇ ಹಣವನ್ನು ಭಾರತೀಯರು ಸ್ವದೇಶಿ ಲಸಿಕೆಗೆ ನೀಡಬೇಕಾಗಿದೆ.

Explained: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯೇ ಸವಾಲು!Explained: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯೇ ಸವಾಲು!

ದೇಶದಲ್ಲಿ ವಿತರಿಸುತ್ತಿರುವ ಕೊರೊನಾವೈರಸ್ ಲಸಿಕೆಗಳ ಬೆಲೆಯಲ್ಲಿ ಏಕೆ ಇಷ್ಟೊಂದು ವ್ಯತ್ಯಾಸವಾಗುತ್ತಿದೆ. ಭಾರತದಲ್ಲೇ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯ ಬೆಲೆಯು ಇತರೆ ಕಂಪನಿಯ ಲಸಿಕೆಯ ಬೆಲೆಗಿಂತ ಹೆಚ್ಚಾಗಿರುವುದಕ್ಕೆ ಕಾರಣವೇನು ಎಂಬುದಕ್ಕೆ ಉತ್ತರ ಈ ವರದಿಯಲ್ಲಿದೆ.

ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುವುದೇ ದುಬಾರಿ

ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುವುದೇ ದುಬಾರಿ

"ಕೊವಾಕ್ಸಿನ್‌ನ ತಂತ್ರಜ್ಞಾನವು ಕೋವಿಶೀಲ್ಡ್ ಲಸಿಕೆ ಮತ್ತು ಸ್ಪುಟ್ನಿಕ್-ವಿ ಗಿಂತ ಬಹಳ ಭಿನ್ನವಾಗಿದೆ. ಕೊವಾಕ್ಸಿನ್‌ಗಾಗಿ ನಿಷ್ಕ್ರಿಯಗೊಂಡ ಸಂಪೂರ್ಣ ರೋಗಾಣುವನ್ನು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೂರಾರು ಲೀಟರ್ ದುಬಾರಿ ಸೀರಮ್ ಅನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಬಿಎಸ್‌ಎಲ್ ಲ್ಯಾಬ್‌ಗಳಲ್ಲಿ ಈ ಸೀರಮ್‌ನಿಂದ ವೈರಸ್ ಉತ್ಪತ್ತಿ ಹೆಚ್ಚುತ್ತದೆ. ಈ ಹಂತದಲ್ಲಿ ಮುನ್ನೆಚ್ಚರಿಕೆ ವಹಿಸಿ ನಿಷ್ಕ್ರಿಯಗೊಳಿಸಲಾಗುವುದು" ಎಂದು ಅಣು ಜೀವಶಾಸ್ತ್ರ ಕೇಂದ್ರದ ಸಲಹೆಗಾರ ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆಗೆ ಕೊವಿಶೀಲ್ಡ್ ಗಿಂತ 2 ಪಟ್ಟು ಬೆಲೆ

ಕೊವ್ಯಾಕ್ಸಿನ್ ಲಸಿಕೆಗೆ ಕೊವಿಶೀಲ್ಡ್ ಗಿಂತ 2 ಪಟ್ಟು ಬೆಲೆ

"ಕೊವಿಶೀಲ್ಡ್ ಲಸಿಕೆಗಿಂತ ಕೊವ್ಯಾಕ್ಸಿನ್ ಲಸಿಕೆಯ ಬೆಲೆಯು ಎರಡು ಪಟ್ಟು ಹೆಚ್ಚಾಗಿದೆ ಎಂಬುದು ನನಗೆ ತಿಳಿದಿದೆ. ಆದರೆ ಕೊವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಳು ವಿಭಿನ್ನವಾಗಿದ್ದು, ವಾಣಿಜ್ಯೋದ್ಯಮದ ಉದ್ದೇಶದಿಂದಾಗಿ ಬೆಲೆ ನಿಗದಿಗೊಳಿಸಿವೆ. ತಂತ್ರಜ್ಞಾನದ ಪ್ರಕಾರ, mRNA ಲಸಿಕೆಗಳು ಸುಲಭ ಮತ್ತು ಕಡಿಮೆ ದರವನ್ನು ಹೊಂದಿರುತ್ತವೆಯೇ ವಿನಃ ಸುದೀರ್ಘ ಸೌಲಭ್ಯವನ್ನು ಒದಗಿಸುವುದಕ್ಕೆ ಸಾಧ್ಯವಾಗುವುದಿಲ್ಲ" ಎಂದು ರಾಕೇಶ್ ಮಿಶ್ರಾ ಹೇಳಿದ್ದಾರೆ.

ಮಾಡರ್ನಾ ಮತ್ತು ಫೈಜರ್ ಲಸಿಕೆ ಬಗ್ಗೆ ಉಲ್ಲೇಖ

ಮಾಡರ್ನಾ ಮತ್ತು ಫೈಜರ್ ಲಸಿಕೆ ಬಗ್ಗೆ ಉಲ್ಲೇಖ

ಫೈಜರ್ ಮತ್ತು ಮಾಡರ್ನಾ mRNA ಮಾದರಿಯ ಲಸಿಕೆಗಳಾಗಿವೆ. ಈ ಲಸಿಕೆಗಳನ್ನು ಉತ್ಪಾದಿಸುವುದಕ್ಕೆ ಜೀವಂತ ರೋಗಾಣುಗಳ್ನು ಬಳಸಿಕೊಳ್ಳುವುದಿಲ್ಲ. ಬದಲಿಗೆ ಮನುಷ್ಯದ ದೇಹದಲ್ಲಿ ಇರುವ ಜೀವ ಕೋಶದಲ್ಲಿರುವ ಪ್ರೋಟೀನ್ ಹೆಚ್ಚಿಸುವ ಮೂಲಕ ಕೊರೊನಾವೈರಸ್ ವಿರುದ್ಧ ಹೋರಾಟಬಲ್ಲ ಶಕ್ತಿಯನ್ನು ವೃದ್ಧಿಸುವುದಕ್ಕೆ ಈ ಲಸಿಕೆಗಳು ಸಹಕಾರಿಯಾಗಲಿವೆ.

ಕೊರೊನಾವೈರಸ್ ರೂಪಾಂತರ ವ್ಯವಸ್ಥೆ ಬಗ್ಗೆ ಉಲ್ಲೇಖ

ಕೊರೊನಾವೈರಸ್ ರೂಪಾಂತರ ವ್ಯವಸ್ಥೆ ಬಗ್ಗೆ ಉಲ್ಲೇಖ

"ಒಂದು ವೇಳೆ ಕೊರೊನಾವೈರಸ್ ರೂಪಾಂತರ ತಳಿಯ ಮೇಲೆ mRNA ಲಸಿಕೆಯು ಪರಿಣಾಮ ಬೀರಲಾರದು ಎಂದು ಗೊತ್ತಾದರೆ ಕ್ಷಿಪ್ರಗತಿಯಲ್ಲಿ ಬೇರೊಂದು ಮಾದರಿ ಲಸಿಕೆಯನ್ನು ಪುನರ್ ವ್ಯವಸ್ಥೆಗೊಳಿಸುವುದಕ್ಕೆ ಸಾಧ್ಯವಿದೆ. ಆದರೆ ಕೊವ್ಯಾಕ್ಸಿನ್ ಲಸಿಕೆಯು ನಿಷ್ಕ್ರಿಯ ರೋಗಾಣುಗಳ ಮೇಲೆ ನಡೆಸಿದ ಸುದೀರ್ಘ ಪರೀಕ್ಷೆ ಆಗಿರುವುದರಿಂದ ಹೊಸ ತಳಿಗಳ ಮೇಲೆ ಪರಿಣಾಮ ಬೀರಬಲ್ಲ ಮತ್ತೊಂದು ಮಾದರಿ ಲಸಿಕೆ ಉತ್ಪಾದಿಸುವುದು ಅಷ್ಟೊಂದು ಸುಲಭದ ಕೆಲಸ ಆಗಿರುವುದಿಲ್ಲ" ಎಂದು ತಜ್ಞರು ಹೇಳಿದ್ದಾರೆ.

ಕೊವ್ಯಾಕ್ಸಿನ್ ಉತ್ಪಾದನೆಯ ವೆಚ್ಚದ ರೀತಿ ಹೇಗಿರುತ್ತೆ?

ಕೊವ್ಯಾಕ್ಸಿನ್ ಉತ್ಪಾದನೆಯ ವೆಚ್ಚದ ರೀತಿ ಹೇಗಿರುತ್ತೆ?

ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯ ಹಂತಗಳಲ್ಲಿ ಹಲವು ರೀತಿಯ ವೆಚ್ಚ ಮಾಡಬೇಕಾಗುತ್ತದೆ. ಈ ಪೈಕಿ ಕಚ್ಚಾ ಉಪಕರಣ, ಪ್ಯಾಕಿಂಗ್, ಸಸ್ಯ ಕಾರ್ಯಾಚರಣೆ ಮತ್ತು ನಿರ್ವಹಣೆ, ಪರವಾನಗಿ ಪಡೆಯುವ ವೆಚ್ಚ, ವೈದ್ಯಕೀಯ ಪ್ರಯೋಗ ಹಾಗೂ ಉತ್ಪಾದನೆ ವೆಚ್ಚವು ಕ್ರೂಢೀಕರಣವಾಗಿರುತ್ತದೆ. ಅಂತಿಮವಾಗಿ ಕೊವಿಡ್-19 ಲಸಿಕೆ ಬೆಲೆಯು ಮೂರು ಪಟ್ಟು ಆಗುವುದಕ್ಕೆ ಕಾರಣವೂ ಇದೆ. ತೆರಿಗೆಗಳು ಮತ್ತು ವಿತರಕರು, ಸಂಗ್ರಹಣಕಾರರು ಮತ್ತು ರಸಾಯನ ಶಾಸ್ತ್ರಜ್ಞರ ಪೂರೈಕೆ ಸರಪಳಿಗೆ ಪಾವತಿಸುವ ಪಾಲನ್ನು ಸಹ ಸೇರಿಸಲಾಗಿದೆ.

ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್ ನಿಂದ 4 ರೂ. ಲಾಭ

ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್ ನಿಂದ 4 ರೂ. ಲಾಭ

ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುವ ಕಂಪನಿಯು ಈ ಎಲ್ಲ ಹಂತಗಳನ್ನು ದಾಟಿಕೊಂಡು ಅಂತಿಮವಾಗಿ ಹೊರ ಬಂದು ಮಾರಾಟವಾದಾಗ ಕಂಪನಿಗೆ ಅದರಿಂದ ಸಿಗುವುದು ಕೇವಲ ಒಂದು ಡೋಸ್ ಲಸಿಕೆಗೆ 3 ರಿಂದ 4 ರೂಪಾಯಿ ಲಾಭ ಎಂದು ಹೇಳಲಾಗುತ್ತಿದೆ. ಉತ್ಪನ್ನ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ತೊಡಗಿರುವವರು ಒಂದು ಡೋಸ್‌ಗೆ ₹ 10 ಲಾಭ ಗಳಿಸುತ್ತಾರೆ.

ದೇಶದಲ್ಲಿ ಕೊವಿಡ್-19 ಲಸಿಕೆಗಳು ಮತ್ತು ಅದರ ಬೆಲೆ

ದೇಶದಲ್ಲಿ ಕೊವಿಡ್-19 ಲಸಿಕೆಗಳು ಮತ್ತು ಅದರ ಬೆಲೆ

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯ ಒಂದು ಡೋಸ್ ಬೆಲೆ 600 ರೂಪಾಯಿ. ಆಗಿದೆ. ಹೈದ್ರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ 1 ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ 1200 ರೂಪಾಯಿ ನಿಗದಿಗೊಳಿಸಲಾಗಿದೆ. ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಗೆ 995 ರೂಪಾಯಿ ಆಗುತ್ತದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾವೈರಸ್ ಲಸಿಕೆ ಬೆಲೆ ಎಷ್ಟು?

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾವೈರಸ್ ಲಸಿಕೆ ಬೆಲೆ ಎಷ್ಟು?

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ 400 ರೂಪಾಯಿ, ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿಗೆ ನೀಡಲಾಗುತ್ತಿದೆ. ಹೈದ್ರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ 600 ರೂಪಾಯಿ, ಖಾಸಗಿ ಆಸ್ಪತ್ರೆಗಳಿಗೆ 1200 ರೂಪಾಯಿಗೆ ನೀಡಲಾಗುತ್ತಿದೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಲಸಿಕೆ ವಿತರಣೆಗೆ ಗರಿಷ್ಠ 150 ರೂಪಾಯಿ ಸೇವಾ ಶುಲ್ಕವನ್ನು ವಿಧಿಸುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

English summary
A Covishield cannot cost more than ₹ 780 a dose, Russia's Sputnik V will cost a maximum of ₹ 1,145 a dose and Covaxin cannot be costlier than ₹ 1,410 a shot. This includes ₹ 150 in GST or Goods and Services Tax
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X