ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಭಾರತಕ್ಕೆ ಹೆಮ್ಮೆ ಏಕೆ?, ಮೇಲಿರುವ ವೈಜ್ಞಾನಿಕ ಸಂದೇಹವೇನು?

ನವದೆಹಲಿ, ಜನವರಿ 04: ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಭಾನುವಾರವಷ್ಟೇ ಡಿಸಿಜಿಐ ತುರ್ತು ಬಳಕೆಗೆ ಅನುಮತಿ ನೀಡಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಭಾರತಕ್ಕೊಂದು ಹೆಮ್ಮೆಯಾಗಿದೆ, ಯಾಕೆಂದರೆ ಈ ಲಸಿಕೆಯನ್ನು ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ, ಆದರೆ ಅದೇ ಲಸಿಕೆ ಕುರಿತು ವೈಜ್ಞಾನಿಕ ಸಂದೇಹಗಳು ಕೂಡ ಎದ್ದಿವೆ.

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು ಕ್ಲಿನಿಕಲ್ ಪ್ರಯೋಗದ ಮಾದರಿಯಲ್ಲಿಯೇ ಬಳಸಲಾಗುವುದು ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಲಸಿಕೆ ಭದ್ರತೆಯ ನಿಟ್ಟಿನಲ್ಲಿ ತುರ್ತು ಬಳಕೆಯ ಅನುಮೋದನೆ ಕಾರ್ಯತಂತ್ರ ನಿರ್ಧಾರ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆಯ ಮೊದಲ ಮತ್ತು ಎರಡನೆಯ ಹಂತದ ಪ್ರಯೋಗಗಳ ಫಲಿತಾಂಶಗಳು ಸ್ಫೂರ್ತಿದಾಯಕವಾಗಿದ್ದವು. ಆದರೆ ನವೆಂಬರ್‌ನಲ್ಲಿ ಆರಂಭವಾದ ಮೂರನ ಹಂತದ ಪ್ರಯೋಗದ ಪರಿಣಾಮದ ದತ್ತಾಂಶಗಳು ಇನ್ನೂ ಲಭ್ಯವಾಗದೆ ಇರುವಾಗ ಅನುಮೋದನೆ ನೀಡಲು ಹೇಗೆ ಸಾಧ್ಯ ಎಂದು ಅನೇಕ ಸ್ವತಂತ್ರ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ.

ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ರಡೆದಿರುವ ಭಾರತ್ ಬಯೊಟೆಕ್ ಪ್ರಾಯೋಗಿಕ ಹಂತದ ಮಾದರಿಯಲ್ಲಿ 12 ವರ್ಷಕ್ಕಿಂತ ಹೆಚ್ಚಿನ ಮಕ್ಕಳ ಮೇಲೆ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ.

12 ವರ್ಷಕ್ಕಿಂತ ಹೆಚ್ಚಿನ ಮಕ್ಕಳ ಮೇಲೆ ಮಾಡಿರುವ ಪ್ರಯೋಗದಿಂದ ಲಸಿಕೆ ಸುರಕ್ಷಿತ ಎಂದು ಕಂಡುಬಂದಿದ್ದು ಹೈದರಾಬಾದ್ ಮೂಲದ ಸಂಸ್ಥೆ ಮೂರನೇ ಹಂತದ ಪ್ರಯೋಗದಲ್ಲಿ ನಿರತವಾಗಿದೆ.

ಲಸಿಕೆ ಅಭಿಯಾನವನ್ನು ವಯಸ್ಕರಿಗೆ ಮಾತ್ರ ಸದ್ಯ ನಡೆಸಲಾಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ದತ್ತಾಂಶವಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಹ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸೆರಂ ಇನ್ಸ್ ಟಿಟ್ಯೂಟ್ ನ ಕೊವಿಶೀಲ್ಡ್ ಲಸಿಕೆಗೆ ನೀಡಲಾಗಿರುವ ಅನುಮೋದನೆಗೂ ಭಾರತ್ ಬಯೋಟೆಕ್ ನ ಕೊವಾಕ್ಸಿನ್ ತುರ್ತು ಬಳಕೆಗೂ ವ್ಯತ್ಯಾಸವಿದೆ. ಕೊವಾಕ್ಸಿನ್ ಬಳಕೆ ಪ್ರಾಯೋಗಿಕ ಹಂತದಲ್ಲಿದೆ. ಪ್ರಾಯೋಗಿಕ ಹಂತದಲ್ಲಿ ಭಾಗಿಯಾಗುವ ಜನರನ್ನು ಈ ಕೋವ್ಯಾಕ್ಸಿನ್ ಯಾಕೆ ಭಾರತದ ಹೆಮ್ಮೆ, ಲಸಿಕೆ ಮೇಲಿರುವ ಸಂದೇಹದ ಕುರಿತು 'ದಿ ಪ್ರಿಂಟ್‌' ವಿಶ್ಲೇಷಣೆ ಮಾಡಿದೆ.

Recommended Video

      ಭಾರತದ ವಿಜ್ಞಾನಿಗಳು ಇಡೀ ಪ್ರಪಂಚಕ್ಕೇ ಮಾದರಿ | Modi | Oneindia Kannada

      ಕೋವ್ಯಾಕ್ಸಿನ್ ಮೂರನೇ ಪ್ರಯೋಗಕ್ಕೂ ಮುನ್ನವೇ ಅನುಮತಿ

      ಕೋವ್ಯಾಕ್ಸಿನ್ ಮೂರನೇ ಪ್ರಯೋಗಕ್ಕೂ ಮುನ್ನವೇ ಅನುಮತಿ

      ಆದರೆ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಪ್ರಯೋಗಕ್ಕೂ ಮುನ್ನವೇ ಸರ್ಕಾರ ಈ ಲಸಿಕೆಗೆ ಅನುಮತಿ ನೀಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

      ಭಾರತ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದೆ

      ಭಾರತ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದೆ

      ಜಗತ್ತಿನ ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ, ಭಾರತದಲ್ಲಿ ಕೊರೊನಾ ಸೋಂಕನ್ನು ಕಡಿಮೆ ಮಾಡುವಲ್ಲಿ ಈ ಲಸಿಕೆಗಳು ಮುಂಚೂಣಿಯಲ್ಲಿರಲಿವೆ.

      ಲಸಿಕೆ ಆಯ್ಕೆಗೆ ರಾಜಕೀಯ ವಿರೋಧ

      ಲಸಿಕೆ ಆಯ್ಕೆಗೆ ರಾಜಕೀಯ ವಿರೋಧ

      ಲಸಿಕೆ ಆಯ್ಕೆ ಪ್ರಕ್ರಿಯೆ ಬಗ್ಗೆ ವಿರೋಧಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಂಪುಟದಲ್ಲಿ ಆ ಲಸಿಕೆಯನ್ನು ಸೈನಿಕರಿಗೆ ಹೋಲಿಕೆ ಮಾಡಿದ್ದಾರೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ 23 ಸ್ವಯಂಸೇವಕರನ್ನು ತನ್ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಸೇರಿಸಿಕೊಂಡಿದೆ. ಸ್ಥಳೀಯ ತಯಾರಕ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಕ್ರೆಮ್ಲಿನ್ ಬೆಂಬಲಿತ ಸ್ಪುಟ್ನಿಕ್ ವಿ ಭಾರತದಲ್ಲಿ ಪ್ರಯೋಗಗಳಿಗೆ ಒಳಪಟ್ಟಿದೆ. ಅಹಮದಾಬಾದ್ ಮೂಲದ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಕೂಡ ಸ್ಥಳೀಯ ಕೊವಿಡ್ 19 ಲಸಿಕೆ ಅಭಿವೃದ್ಧಿಪಡಿಸುವ ಸ್ಪರ್ಧೆಯಲ್ಲಿದೆ.

      70 ಮಿಲಿಯನ್ ಡೋಸ್ ಲಸಿಕೆ ಸಂಗ್ರಹಿಸಿದ ಸೆರಂ

      70 ಮಿಲಿಯನ್ ಡೋಸ್ ಲಸಿಕೆ ಸಂಗ್ರಹಿಸಿದ ಸೆರಂ

      ಸೆರಂ ಇನ್‌ಸ್ಟಿಟ್ಯೂಟ್ ಈಗಾಗಲೇ 70 ಮಿಲಿಯನ್ ಡೋಸ್ ಕೊವಿಶೀಲ್ಡ್ ಅನ್ನು ಸಂಗ್ರಹಿಸಿದೆ. ಕೈಗೆಟುಕುವ ಬೆಲೆಯಲ್ಲಿ ಜನರಿಗೆ ನೀಡಲು ನಿರ್ಧರಿಸಿದೆ. ದೇಶದಲ್ಲಿ ಎರಡು ಕೊರೊನಾ ವೈರಸ್ ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ. ಆದರೆ ಇದು ಆತುರದ ನಿರ್ಧಾರ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆಯ ಪರಿಣಾಮ ಮತ್ತು ದಕ್ಷತೆಯ ಬಗ್ಗೆ ಸಮರ್ಪಕ ದತ್ತಾಂಶಗಳಿಲ್ಲದೆ ಅನುಮೋದನೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+