ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಧಿ ಹಿಟ್ಟಿಗೂ ಬಂಗಾರದ ಬೆಲೆ; ಭಾರತದಲ್ಲಿ 12 ವರ್ಷಗಳ ದಾಖಲೆ ಬರೆದ ಗೋಧಿ!

|
Google Oneindia Kannada News

ನವದೆಹಲಿ, ಮೇ 9: ಪೆಟ್ರೋಲ್, ಡೀಸೆಲ್ ಆಯ್ತು. ಅಡುಗೆ ಸಿಲಿಂಡರ್ ದರ ಮುಗೀತು. ಅಡುಗೆ ಎಣ್ಣೆ ದರವೂ ಆಕಾಶಕ್ಕೆ ಮುಟ್ಟಿದ್ದು ಆಯ್ತು. ಈಗ ದೇಶದಲ್ಲಿ ಗೋಧಿ ಹಿಟ್ಟಿನ ಸರದಿ ಬಂದಿದೆ. 12 ವರ್ಷಗಳಲ್ಲೇ ಗರಿಷ್ಠ ಬೆಲೆಗೆ ಗೋಧಿ ತಲುಪಿದೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಗೋಧಿ ಹಿಟ್ಟಿನ ಮಾಸಿಕ ಸರಾಸರಿ ಚಿಲ್ಲರೆ ಮಾರಾಟ ದರದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆಯು 32.38 ರೂಪಾಯಿ ಆಗಿರುವುದೇ ಹೊಸ ದಾಖಲೆಯಾಗಿದೆ.

 ಉಕ್ರೇನ್‌ ಯುದ್ಧ: ಹಲವು ದೇಶಗಳಿಗೆ ಗೋಧಿ ರಫ್ತಿನತ್ತ ಭಾರತದ ಚಿತ್ತ ಉಕ್ರೇನ್‌ ಯುದ್ಧ: ಹಲವು ದೇಶಗಳಿಗೆ ಗೋಧಿ ರಫ್ತಿನತ್ತ ಭಾರತದ ಚಿತ್ತ

ಭಾರತದಲ್ಲಿ ಗೋಧಿ ಹಿಟ್ಟಿನ ಬೆಲೆಯು ದಾಖಲೆ ಮಟ್ಟಕ್ಕೆ ಏರಿಕೆ ಆಗಿರುವುದಕ್ಕೆ ಕಾರಣವೇನು?, ಪ್ರಸ್ತುತ ಗೋಧಿ ಹಾಗೂ ಹಿಟ್ಟಿನ ದರ ಎಷ್ಟಿದೆ?, ಉತ್ತರ ಭಾರತದಲ್ಲಿ ಅತಿಹೆಚ್ಚಾಗಿ ಬಳಕೆ ಆಗುವ ಗೋಧಿ ದುಬಾರಿಯಾಗಿರುವುದರ ಹಿಂದಿನ ಗುಟ್ಟೇನು ಎಂಬುದನ್ನು ಈ ವರದಿಯಲ್ಲಿ ತಿಳಿಯಿರಿ.

ದೇಶದಲ್ಲಿ ಗೋಧಿ ಬೆಲೆ ಏರಿಕೆಗೆ ಕಾರಣವೇನು?

ದೇಶದಲ್ಲಿ ಗೋಧಿ ಬೆಲೆ ಏರಿಕೆಗೆ ಕಾರಣವೇನು?

ಭಾರತದಲ್ಲಿ ಅಟ್ಟಾ ಬೆಲೆಗಳು ಕಳೆದ ತಿಂಗಳು ಜನವರಿ 2010 ರಿಂದ ಅತ್ಯಧಿಕ ಏರಿಕೆ ಕಂಡಿತು, ಏಕೆಂದರೆ ದೇಶದಲ್ಲಿ ಗೋಧಿಯ ಉತ್ಪಾದನೆ ಮತ್ತು ದಾಸ್ತಾನುಗಳು ಪ್ರಮಾಣದಲ್ಲಿ ಅತಿಹೆಚ್ಚು ಕುಸಿತ ಕಂಡು ಬಂದಿದೆ. ಕಳೆದ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದಲ್ಲಿ ಭಾರತವು 70 LMT ಗೋಧಿಯನ್ನು ರಫ್ತು ಮಾಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ, ರಷ್ಯಾ-ಉಕ್ರೇನ್ ಸಂಘರ್ಷವು ಜಾಗತಿಕವಾಗಿ ಪೂರೈಕೆಯ ಕೊರತೆಯನ್ನು ಸೃಷ್ಟಿಸಿರುವುದರಿಂದ ರಫ್ತು ಹೆಚ್ಚಾಗುವ ಸಾಧ್ಯತೆಯಿದೆ.

ಕಳೆದೊಂದು ವರ್ಷದಲ್ಲಿ ಗೋಧಿ ಬೆಲೆಯಲ್ಲಿ ಏರಿಕೆ

ಕಳೆದೊಂದು ವರ್ಷದಲ್ಲಿ ಗೋಧಿ ಬೆಲೆಯಲ್ಲಿ ಏರಿಕೆ

ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆಯು ಏರಿಕೆ ಕಂಡಿದೆ. ಕಳೆದ ಏಪ್ರಿಲ್‌ನಲ್ಲಿ ಭಾರತದಲ್ಲೂ ಗೋಧಿಯ ಬೆಲೆಯು ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ. ಗೋಧಿಯ ಚಿಲ್ಲರೆ ಬೆಲೆಗಳು 2021ರ ಮಾರ್ಚ್ ತಿಂಗಳ ವೇಳೆಯಲ್ಲಿ 27.90 ರೂಪಾಯಿಯಿಂದ 2022ರ ಮಾರ್ಚ್ ವೇಳೆಗೆ ಕೆಜಿಗೆ 28.67 ರೂಪಾಯಿ ಆಗಿದೆ. ಗೋಧಿ ಚಿಲ್ಲರೆ ಬೆಲೆಗಳು ಮಾರ್ಚ್ 2021 ರಲ್ಲಿ ಪ್ರತಿ ಕೆಜಿಗೆ 31.77 ರೂಪಾಯಿಯಿದ್ದು, 2022ರ ಮಾರ್ಚ್ ವೇಳೆಗೆ ಅದು 32.03 ರೂಪಾಯಿಗೆ ಏರಿಕೆ ಆಗಿದೆ.

ಮುಕ್ತ ಮಾರುಕಟ್ಟೆಯಲ್ಲಿ ಕೊರತೆ ಆಗದಂತೆ ಪೂರೈಕೆ

ಮುಕ್ತ ಮಾರುಕಟ್ಟೆಯಲ್ಲಿ ಕೊರತೆ ಆಗದಂತೆ ಪೂರೈಕೆ

ಪ್ರಸಕ್ತ ತಿಂಗಳಿನಲ್ಲಿ ನಡೆಯುತ್ತಿರುವ ಸಂಗ್ರಹಣೆಯೊಂದಿಗೆ ಗೋಧಿಯ ದೇಶೀಯ ಬೆಲೆಗಳನ್ನು ಸರ್ಕಾರವೇ ನಿರಂತರವಾಗಿ ಪರಿಶೀಲನೆ ಮಾಡುತ್ತಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಯಾವುದೇ ಕೊರತೆ ಬಾರದ ರೀತಿಯಲ್ಲಿ ಗೋಧಿ ಮಾರಾಟವನ್ನು ನಿರ್ವಹಿಸಲಾಗುವುದು ಎಂದು ವರದಿಯಾಗಿದೆ.

ಗೋಧಿ ದಾಸ್ತಾನು ಮಾಡುವುದರಲ್ಲಿ ಸಮತೋಲನ

ಗೋಧಿ ದಾಸ್ತಾನು ಮಾಡುವುದರಲ್ಲಿ ಸಮತೋಲನ

2022-23ನೇ ಸಾಲಿನಲ್ಲಿ 100 LMT ಗೋಧಿಯನ್ನು ಸಂಗ್ರಹಿಸುವ ಮೂಲಕ ಪೂರೈಕೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರದ ಎಲ್ಲ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಗೋಧಿಯನ್ನು ಪೂರೈಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

English summary
India: Why Atta prices Have Touched Record High; The highest in over 12 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X