ಬಿಜೆಪಿಯ ರಚನೆಯೇ ಸುಳ್ಳಿನ ಸಂತೆ: ರಾಹುಲ್ ಗಾಂಧಿ

Subscribe to Oneindia Kannada

ನವದೆಹಲಿ, ಡಿಸೆಂಬರ್ 22: "ಬಿಜೆಪಿಯ ಸಂಪೂರ್ಣ ರಚನೆಯೇ ಸುಳ್ಳಿನಿಂದ ಕೂಡಿದೆ," ಎಂದು ಮೊದಲ ಕಾರ್ಯಕಾರಿ ಸಮಿತಿ ಸಭೆಯ ನಂತರ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಇಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.

 Rahul Gandhi

"ಎಲ್ಲರಿಗೂ 2ಜಿ ಬಗ್ಗೆ ಗೊತ್ತು. ಇದೀಗ ಸತ್ಯ ನಿಮ್ಮ ಮುಂದೆ ಬಂದಿದೆ. ನೀವೆಲ್ಲಾ 2ಜಿ ಬಗ್ಗೆ ಮಾತನಾಡುತ್ತೀರಿ. ನೀವು ಮೋದಿ ಮಾಡೆಲ್ ಬಗ್ಗೆ ಅಥವಾ ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎನ್ನುವುದರ ಬಗ್ಗೆ ನೋಡುತ್ತೀರೋ?," ಎಂದು ಪ್ರಶ್ನಿಸಿದ್ದಾರೆ. ಅಪನಗದೀಕರಣ, ಗಬ್ಬರ್ ಸಿಂಗ್ ಟ್ಯಾಕ್ಸ್ ಎಲ್ಲವೂ ಸುಳ್ಳು ಎಂದು ಅವರು ಕಿಡಿಕಾರಿದ್ದಾರೆ.

"ನೀವು ಗುಜರಾತ್ ನ ಮೋದಿ ಮಾದರಿ ಬಗ್ಗೆ ನೋಡಿದರೆ ಇದು ಸಂಪೂರ್ಣ ಸುಳ್ಳು ಎಂದು ತಿಳಿಯುತ್ತದೆ. ನಾವು ಗುಜರಾತಿಗೆ ಹೋದಾಗ ಅಲ್ಲಿನ ಜನರು ಇಲ್ಲಿ ಯಾವುದೇ ಮಾಡೆಲ್ ಇಲ್ಲ ಎಂದರು. ಅಲ್ಲಿರುವುದು ಒಂದೇ ಮಾಡೆಲ್ ಜನರ ದುಡ್ಡನ್ನು ದೋಚುವುದು," ಎಂದು ರಾಹುಲ್ ಟೀಕಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"The whole architecture of BJP is about lies, the whole structure is about lies,” said Congress President Rahul Gandhi after CWC meet in Delhi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ