Jharkhand Election 2024: ಮೊದಲ ಬಾರಿಗೆ ಜಾರ್ಖಂಡ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಪೂರ್ಣಿಮಾ ದಾಸ್ ಸಾಹು ಯಾರು?
ಭಾರತೀಯ ಜನತಾ ಪಕ್ಷ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ 66 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಬಿಜೆಪಿ 12 ಮಹಿಳೆಯರನ್ನು ಕಣಕ್ಕಿಳಿಸಿದೆ. ಈ 12 ಮಹಿಳೆಯರ ಪೈಕಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಒರಿಸ್ಸಾ ರಾಜ್ಯಪಾಲ ರಘುವರ್ ದಾಸ್ ಅವರ ಸೊಸೆ ಪೂರ್ಣಿಮಾ ದಾಸ್ ಸಾಹು ಅವರಿಗೆ ಜೆಮ್‌ಶೆಡ್‌ಪುರ ಪೂರ್ವ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ರಘುವರ ದಾಸ್ ಅವರ ಸೊಸೆ ಪೂರ್ಣಿಮಾ ದಾಸ್ ಸಾಹು ಅವರು ಟಿಕೆಟ್ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ನನಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ಬಿಜೆಪಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. ರಘುವರ್ ದಾಸ್ ಅವರ ಸೊಸೆ ಪೂರ್ಣಿಮಾ ದಾಸ್ ಸಾಹು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿರುವ ಅಭ್ಯರ್ಥಿ. ಹಾಗಾದರೆ ಪೂರ್ಣಿಮಾ ದಾಸ್ ಸಾಹು ಯಾರು? ಇವರ ಹಿನ್ನೆಲೆ ಏನು ಎಂದು ತಿಳಿಯೋಣ.

ಯಾರು ಪೂರ್ಣಿಮಾ ದಾಸ್ ಸಾಹು?
ಪೂರ್ಣಿಮಾ ದಾಸ್ ಸಾಹು ಅವರು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಒರಿಸ್ಸಾ ರಾಜ್ಯಪಾಲ ರಘುವರ್ ದಾಸ್ ಅವರ ಸೊಸೆ. ರಘುವರ ದಾಸ್ ಅವರ ಪುತ್ರ ಲಲಿತ್ ದಾಸ್ ಮತ್ತು ಪೂರ್ಣಿಮಾ ದಾಸ್ ಸಾಹು 8 ಮಾರ್ಚ್ 2019 ರಂದು ವಿವಾಹವಾದರು. ಪೂರ್ಣಿಮಾ ದಾಸ್ ಸಾಹು ರಾಯ್‌ಪುರ (ಛತ್ತೀಸ್‌ಗಢ) ನಿವಾಸಿ. ರಾಯ್‌ಪುರದ ಪೂರ್ಣಿಮಾ ದಾಸ್ ಅವರು ಫೇಸ್‌ಬುಕ್ ಮೂಲಕ ಲಲಿತ್ ದಾಸ್ ಅವರಿಗೆ ಪರಿಚಯವಾದರು. ಪೂರ್ಣಿಮಾ ಸಾಮಾನ್ಯ ಕುಟುಂಬದಿಂದ ಬಂದವರು. ಪೂರ್ಣಿಮಾ ಅವರ ತಂದೆ ಭಾಗೀರಥಿ ಸಾಹು ಉದ್ಯಮಿ ಮತ್ತು ತಾಯಿ ಕೌಶಲ್ಯ ಸಾಹು ಶಿಕ್ಷಕಿ.
ಪೂರ್ಣಿಮಾ ದಾಸ್ ಸಾಹು ಅವರು ರಾಯ್‌ಪುರದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರು ಮಹಂತ್ ಲಕ್ಷ್ಮೀ ನಾರಾಯಣ ದಾಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಪ್ರಸ್ತುತ ಶಿಕ್ಷಕರಾಗಿದ್ದಾರೆ.
ಪೂರ್ಣಿಮಾ ದಾಸ್ ಸಾಹು ರಘುವರ ದಾಸ್ ಮನೆಗೆ ಸೊಸೆಯಾಗಿದ್ದು ಹೇಗೆ?
ಪೂರ್ಣಿಮಾ ದಾಸ್ ಅವರ ಸಂಬಂಧಿಕರ ಮಗಳ ಮದುವೆ ರಾಂಚಿಯಲ್ಲಿ ನಡೆಯಿತು. ಈ ಮದುವೆಯ ಫೋಟೋದಲ್ಲಿ ರಘುವರ್ ದಾಸ್ ಪೂರ್ಣಿಮಾರನ್ನು ನೋಡಿದರು. ಫೇಸ್ ಬುಕ್ ಮೂಲಕ ಪೂರ್ಣಿಮಾಳನ್ನು ನೋಡಿ ಸಂಬಂಧದ ವಿಷಯವನ್ನು ಮುಂದಿಟ್ಟಿಸಿದರು. ಮೊದಮೊದಲು ಇಷ್ಟು ದೊಡ್ಡ ಮನೆಯಲ್ಲಿದ್ದ ಸಂಬಂಧ ಕೇಳಿ ಪೂರ್ಣಿಮಾ ದಾಸ್ ಕುಟುಂಬಸ್ಥರು ಆತಂಕಗೊಂಡಿದ್ದರು. ಆದರೆ ನಂತರ ಮನೆಯವರು ಒಪ್ಪಿ ಲಲಿತ್ ಮತ್ತು ಪೂರ್ಣಿಮಾ ಅವರ ಮದುವೆಯನ್ನು ನಿಶ್ಚಯಿಸಿದರು.
'ನಾನು ನನ್ನ ಮಾವನ ಪರಂಪರೆಯನ್ನು ಮುಂದುವರಿಸುತ್ತೇನೆ'
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಜೆಮ್‌ಶೆಡ್‌ಪುರ ಪೂರ್ವದ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಸಾಹು ದಾಸ್ ಮಾತನಾಡಿ, "ನನ್ನ ಮಾವ (ರಘುವರ್ ದಾಸ್)ನವರ ಪರಂಪರೆಯನ್ನು ಮುಂದುವರಿಸಬೇಕು. ರಾಜಕೀಯದಲ್ಲಿ ಮುಂದುವರಿಯಬೇಕು ಎಂಬುದು ಅವರ ಯೋಚನೆಯಾಗಿತ್ತು. ಅವರು ತಮ್ಮು ಒಳ್ಳೆಯತನವನ್ನು ಕಳೆದುಕೊಳ್ಳದೆ ಪ್ರಾಮಾಣಿಕವಾಗಿದ್ದರು. ಅದೇ ರೀತಿ ನಾನು ರಾಜಕೀಯದಲ್ಲಿ ನನ್ನ ಮೊದಲ ಹೆಜ್ಜೆ ಇಡುತ್ತಿದ್ದೇನೆ'' ಎಂದರು.
ಜೆಮ್‌ಶೆಡ್‌ಪುರ ಪೂರ್ವದಿಂದ ಟಿಕೆಟ್ ಪಡೆದಿರುವ ಪೂರ್ಣಿಮಾ ಸಾಹು ದಾಸ್, "ಇಂದು ಬಿಜೆಪಿ ನನಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದೆ, ಆದ್ದರಿಂದ ಇದು ನನಗೆ ದೊಡ್ಡ ದಿನ" ಎಂದು ಹೇಳಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರ ಉನ್ನತ ನಾಯಕತ್ವಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ಈ ಟಿಕೆಟ್ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ನನ್ನ ಮಾವನವರ ಪರಂಪರೆಯನ್ನು ನಾನು ಮುಂದೆ ಸಾಗಿಸುತ್ತೇನೆ ಎಂದಿದ್ದಾರೆ.











Click it and Unblock the Notifications