• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಧು ಮೂಸೆವಾಲಾ ಹತ್ಯೆಯಲ್ಲಿ ಅಫ್ಸಾನಾ ಖಾನ್ ವಿಚಾರಣೆ ಮಾಡಿದ್ದು ಏಕೆ?

|
Google Oneindia Kannada News

ಚಂಡೀಗಢ, ಅಕ್ಟೋಬರ್ 26: ಪಂಜಾಬ್ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್ಐಎ) ಅಧಿಕಾರಿಗಳು ಬುಧವಾರ ಅಫ್ಸಾನಾ ಖಾನ್ ಅನ್ನು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು.

ಅಫ್ಸಾನಾ ಖಾನ್ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಸಹೋದರಿ ಎಂದು ಪರಿಗಣಿಸಲಾಗಿತ್ತು. ವರದಿಗಳ ಪ್ರಕಾರ, ಮೂಸೆವಾಲಾಗೆ ಬರುತ್ತಿದ್ದ ಬೆದರಿಕೆ ಕರೆಗಳ ಬಗ್ಗೆ ಅಫ್ಸಾನಾ ಖಾನ್ ಅವರಿಗೆ ತಿಳಿದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೂ ಅಫ್ಸಾನಾ ಖಾನ್ ಅವರಿಗೆ ಏನು ನಂಟು?, ಅಫ್ಸಾನಾ ಖಾನ್ ಯಾರು?, ಅಫ್ಸಾನಾ ಖಾನ್ ವಿಚಾರಣೆ ಸಂದರ್ಭದಲ್ಲಿ ಏನೆಲ್ಲಾ ಅಂಶಗಳು ಬೆಳಕಿಗೆ ಬಂದಿವೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

ಅಫ್ಸಾನಾ ಖಾನ್ ಯಾರು?

ಕಳೆದ 1994ರಲ್ಲಿ ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್‌ನಲ್ಲಿ ಅಫ್ಸಾನಾ ಖಾನ್ ಜನಿಸಿದರು. ಅವರು ಪಂಜಾಬ್ ಮತ್ತು ಇತರ ಉತ್ತರದ ರಾಜ್ಯಗಳಲ್ಲಿ ಜನಪ್ರಿಯ ಗಾಯಕಿ ಆಗಿದ್ದಾರೆ. ಅಫ್ಸಾನಾ ಖಾನ್ ವಾಯ್ಸ್ ಆಫ್ ಪಂಜಾಬ್‌ನಲ್ಲಿ ಸ್ಪರ್ಧಿಯಾಗಿದ್ದು, ಐದನೇ ಶ್ರೇಯಾಂಕವನ್ನು ಪಡೆದರು. ಅವರು ಮೂಲತಃ ಸಂಗೀತಗಾರರ ಕುಟುಂಬದಿಂದ ಬಂದವರಾಗಿದ್ದು, ಇವರ ತಂದೆ ಶಿರಾ ಖಾನ್ ಮತ್ತು ಸಹೋದರ ಖುದಾ ಬಕ್ಷ್ ಕೂಡ ಸಂಗೀತಗಾರರಾಗಿದ್ದಾರೆ.

ಅವಳು ವಿನಮ್ರ ಹಿನ್ನೆಲೆಯಿಂದ ಬಂದವಳು. ಆದಾಗ್ಯೂ, ಈಗ ಅವರು ದೇಶದ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರು. ಖಾನ್ ತನ್ನ ಬ್ಲಾಕ್ಬಸ್ಟರ್ ಹಾಡು ತಿತ್ಲಿಯಾನ್ ವರ್ಗಾದೊಂದಿಗೆ ಜನಪ್ರಿಯತೆಯನ್ನು ಗಳಿಸಿದರು.

ಅಫ್ಸಾನಾ ಖಾನ್ ಬಿಗ್ ಬಾಸ್ 15ರಲ್ಲಿ ಭಾಗವಾಗಿದ್ದರು. ಸಣ್ಣಪುಟ್ಟ ಸಮಸ್ಯೆಗಳಿಗೆ ತನ್ನನ್ನು ತಾನೇ ಹೊಡೆದುಕೊಳ್ಳುವ ಕಾರಣ ಆಕೆಯನ್ನು ಕಾರ್ಯಕ್ರಮದಿಂದ ಹೊರ ಹಾಕಲಾಗಿತ್ತು. ಈ ವರ್ಷ ತನ್ನ ಗೆಳೆಯ ಸಾಜ್ ಜೊತೆ ಅಫ್ಸಾನಾ ಖಾನ್ ಮದುವೆಯಾಗಿದ್ದರು. ಸಿದ್ದು ಮೂಸೆವಾಲ ಕೂಡ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅವರ ಬಿಗ್ ಬಾಸ್ ಸಹನಟರಾದ ರಾಖಿ ಸಾವಂತ್, ಉಮರ್ ರಿಯಾಜ್ ಮತ್ತು ಡೊನಾಲ್ ಬಿಶ್ತ್ ಮದುವೆಯಲ್ಲಿ ಭಾಗವಹಿಸಿದ್ದರು.

ಮೂಸೆವಾಲಾ ಹತ್ಯೆ ಹೊಣೆ ಹೊತ್ತುಕೊಂಡಿದ್ದ ಗ್ಯಾಂಗ್:

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಆರೋಪಿಗಳು ಗಾಯ ಸಿಧು ಮೂಸೆವಾಲಾ ಅನ್ನು ಮಾನ್ಸಾದಲ್ಲಿ ಹತ್ಯೆ ಮಾಡಿದ್ದರು. ಬಿಷ್ಣೋಯ್ ಕೆನಡಾ ಮೂಲದ ಸಹವರ್ತಿ ಗೋಲ್ಡಿ ಬ್ರಾರ್ ಕೊಲೆಯ ಹೊಣೆಯನ್ನು ಹೊತ್ತಿದ್ದರು.

English summary
Who is Afsana Khan and Why was she questioned in Singer Sidhu Moose Wala murder Case. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X