ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್ ರೂಪಾಂತರ ತಳಿಗೆ ಹೊಸ ಹೆಸರು!

|
Google Oneindia Kannada News

ನವದೆಹಲಿ, ಜೂನ್ 01: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯ ಬೆನ್ನಲ್ಲೇ ಮೂರನೇ ಅಲೆಯು ಮಕ್ಕಳ ಮೇಲೆ ದಾಳಿ ನಡೆಸುವ ಆತಂಕ ಹೆಚ್ಚುತ್ತಿದೆ. ಇದರ ಮಧ್ಯೆ ದೇಶದಲ್ಲೇ ಮೊದಲು ಕಾಣಿಸಿಕೊಂಡ ಕೊವಿಡ್-19 ರೂಪಾಂತರ ತಳಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು 'ಡೆಲ್ಟಾ' ಎಂದು ಕರೆದಿದೆ.

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹಲವು ತಳಿಯ ರೂಪಾಂತರ ವೈರಸ್ ಸೃಷ್ಟಿಯಾಗಿರುವುದನ್ನು ವಿಶ್ವಸಂಸ್ಥೆಯು ಗಮನಿಸಿದೆ. ವಿವಿಧ ರಾಷ್ಟ್ರಗಳಲ್ಲಿ ಹರಡುತ್ತಿರುವ ವಿಭಿನ್ನ ಗುಣಲಕ್ಷಣಗಳನ್ನು ಒಳಗೊಂಡಿರುವ ಕೊರೊನಾವೈರಸ್ ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ಸೋಮವಾರ ಹೆಸರನ್ನು ಘೋಷಿಸಿದೆ.

ಭಾರತದಲ್ಲಿ ಕಂಡುಬಂದಿದ್ದ B.1.617 ರೂಪಾಂತರಿ ವೈರಸ್ 53 ದೇಶಗಳಲ್ಲಿ ಪತ್ತೆ: WHOಭಾರತದಲ್ಲಿ ಕಂಡುಬಂದಿದ್ದ B.1.617 ರೂಪಾಂತರಿ ವೈರಸ್ 53 ದೇಶಗಳಲ್ಲಿ ಪತ್ತೆ: WHO

ಭಾರತದಲ್ಲಿ ಮೊದಲು ಪತ್ತೆಯಾಗಿರುವ ಕೊರೊನಾವೈರಸ್ ರೂಪಾಂತರವನ್ನು ಹೆಸರಿಸಲು ಗ್ರೀಕ್ ವರ್ಣಮಾಲೆಯನ್ನು ಬಳಸಿಕೊಳ್ಳಲಾಗಿದೆ. ಕೊವಿಡ್-19 ಸಂಬಂಧಿತ ರೂಪಾಂತರ ಮತ್ತು ಬಾಧ್ಯತೆ ಆಧಾರಿತ ರೂಪಾಂತ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಪ್ರಕಟಿಸಿರುವ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರತದ ಜೊತೆಗೆ ವಿವಿಧ ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರ ತಳಿಗಳನ್ನು ಹೆಸರಿಸಲಾಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಕೊರೊನಾವೈರಸ್ ಸೋಂಕಿನ ಎರಡು ರೂಪಾಂತರ ತಳಿ!

ಕೊರೊನಾವೈರಸ್ ಸೋಂಕಿನ ಎರಡು ರೂಪಾಂತರ ತಳಿ!

ದೇಶದಲ್ಲಿ ಮೊದಲು ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿನ ಎರಡು ರೂಪಾಂತರ ತಳಿಯ ವಿಚಾರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ. ಕೊವಿಡ್-19 ಸೋಂಕಿನ B.1.617.1 ರೂಪಾಂತರ ತಳಿಯನ್ನು ಕಪ್ಪಾ ಎಂದು ಹೆಸರಿಸಲಾಗಿದ್ದು, ಇದರ ಮುಂದುವರಿದ ಭಾಗವಾಗಿ ರೂಪಾಂತರಗೊಂಡ B.1.617.2 ತಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ಎಂದು ಹೆಸರು ನೀಡಿದೆ.

ಯಾವುದೇ ಕಾರಣಕ್ಕೂ ಹೆಸರನ್ನು ಬದಲಾಯಿಸುವಂತಿಲ್ಲ

ಯಾವುದೇ ಕಾರಣಕ್ಕೂ ಹೆಸರನ್ನು ಬದಲಾಯಿಸುವಂತಿಲ್ಲ

ಜಗತ್ತಿನ ಯಾವುದೇ ರಾಷ್ಟ್ರವು ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾವೈರಸ್ ರೂಪಾಂತರ ತಳಿಗೆ ನೀಡಿರುವ ವೈಜ್ಞಾನಿಕ ಹೆಸರುಗಳನ್ನು ಬದಲಾಯಿಸುವಂತಿಲ್ಲ. ಈ ಹೆಸರು ರೂಪಾಂತರ ರೋಗಾಣುವಿನ ವೈಜ್ಞಾನಿಕ ಮಾಹಿತಿಯನ್ನು ಒಳಗೊಂಡಿದ್ದು, ಸಂಶೋಧನೆಯಲ್ಲಿ ಬಳಸಲ್ಪಡುತ್ತದೆ. ರೂಪಾಂತರ ವೈರಸ್ ಪತ್ತೆ ಹಾಗೂ ವರದಿ ಮಾಡುವ ಸಂದರ್ಭದಲ್ಲಿ ಯಾವುದೇ ರಾಷ್ಟ್ರವನ್ನು ಕಳಂಕಿತವಾಗಿ ನೋಡುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್-19 ತಾಂತ್ರಿಕ ಮುಖ್ಯಸ್ಥ ಡಾ.ಮಾರಿಯಾ ವ್ಯಾನ್ ಕರ್ಕೊವೆ ತಿಳಿಸಿದ್ದಾರೆ.

ಯಾವ ದೇಶದ ಕೊವಿಡ್ ರೂಪಾಂತರಕ್ಕೆ ಯಾವ ಹೆಸರು?

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ಹೆಸರುಗಳನ್ನು ನೀಡಿದೆ. ಈ ಕೊವಿಡ್-19 ರೂಪಾಂತರ ತಳಿಗಳ ಮೂಲ ವಂಶಾವಳಿ, ರಾಷ್ಟ್ರ, ರೂಪಾಂತರ ತಳಿ ಕಾಣಿಸಿಕೊಂಡ ವರ್ಷ ಹಾಗೂ ತಿಂಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಕೊರೊನಾವೈರಸ್ ತಳಿ ಹೆಸರು ದೇಶ ಮತ್ತು ದಿನಾಂಕ ರೋಗಾಣುವಿನ ವಂಶಾವಳಿ
ಆಲ್ಫಾ ಯುನೈಟೆಡ್ ಕಿಂಗ್ ಡಮ್, ಸಪ್ಟೆಂಬರ್ 2020 B.1.1.7
ಬೇಟಾ ದಕ್ಷಿಣ ಆಫ್ರಿಕಾ, ಮೇ 2020 B.1.351
ಗಮ್ಮಾ ಬ್ರೆಜಿಲ್, ನವೆಂಬರ್ 2020 P.1
ಡೆಲ್ಟಾ ಭಾರತ, ಅಕ್ಟೋಬರ್, 2020 B.1.617.2
ಎಪ್ಸಿಲೋನ್ ಯುಎಸ್ಎ, ಮಾರ್ಚ್, 2020 B.1.427/B.1.429
ಜೇಟಾ ಬ್ರೆಜಿಲ್, ಏಪ್ರಿಲ್ 2020 P.2
ಎಟಾ ಹಲವು ರಾಷ್ಟ್ರಗಳಲ್ಲಿ, ಡಿಸೆಂಬರ್,2020 B.1.525
ಥೇಟಾ ಫಿಲಿಫೈನ್ಸ್, ಜನವರಿ, 2021 P.3
ಲೋಟಾ ಯುಎಸ್ಎ, ನವೆಂಬರ್,2020 B.1.526
ಕಪ್ಪಾ ಭಾರತ, ಅಕ್ಟೋಬರ್, 2020 B.1.617.1
ರೂಪಾಂತರದ ಜೊತೆ ದೇಶದ ಹೆಸರು ಸೇರ್ಪಡೆಗೆ ಆಕ್ಷೇಪ

ರೂಪಾಂತರದ ಜೊತೆ ದೇಶದ ಹೆಸರು ಸೇರ್ಪಡೆಗೆ ಆಕ್ಷೇಪ

ಕೊರೊನಾವೈರಸ್ ಸೋಂಕಿನ B.1.617.2 ರೂಪಾಂತರ ತಳಿಯನ್ನು ಭಾರತೀಯ ತಳಿ ಎಂದು ಕರೆಯದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅಧಿಕೃತ ಮೂಲಗಳಿಂದ ದೃಢಪಡಿಸುವ ಹೊರತು ರೂಪಾಂತರ ತಳಿಯ ಜೊತೆಗೆ ದೇಶದ ಹೆಸರನ್ನು ಸೇರಿಸುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿತ್ತು. ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಮೂಲದ ತಳಿ ಎಂದು ಬಳಕೆ ಮಾಡಿರುವ ಎಲ್ಲ ದತ್ತಾಂಶವನ್ನು ತೆಗೆದು ಹಾಕುವಂತೆ ಸೂಚಿಸಲಾಗಿತ್ತು. ಇದಕ್ಕೂ ಮೊದಲು ಸಿಂಗಾಪುರ್ ನಲ್ಲಿ ಪತ್ತೆಯಾಗಿರುವ ರೂಪಾಂತರ ತಳಿಯನ್ನು ಸಿಂಗಾಪುರ್ ರೂಪಾಂತರ ಎಂದು ಕರೆಯಲಾಗುತ್ತಿತ್ತು. ಅಲ್ಲಿನ ಸರ್ಕಾರ ರೂಪಾಂತರವನ್ನು ಈ ರೀತಿ ಹೆಸರಿಸದಂತೆ ತಾಕೀತು ಮಾಡಿದ್ದು, ಸಂಬಂಧಿತ ಎಲ್ಲ ದತ್ತಾಂಶಗಳನ್ನು ಡಿಲೀಟ್ ಮಾಡುವಂತೆ ಖಡಕ್ ಆದೇಶ ನೀಡಿತ್ತು.

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಮಾಹಿತಿ

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಮಾಹಿತಿ

ದೇಶದಲ್ಲಿ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಆರಂಭವಾದ 50 ದಿನಗಳ ಬಳಿಕ ಮೊದಲ ಬಾರಿಗೆ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಮಟ್ಟದ ಇಳಿಕೆ ಕಂಡು ಬಂದಿದೆ. ದೇಶದಲ್ಲಿ ಒಂದು ವಾರದ ಪಾಸಿಟಿವಿಟಿ ದರ ಶೇ.9.07ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,38,022 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 3,128 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು 2,80,47,534 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,56,92,342 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,29,100 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 20,26,092 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
WHO Gives New Name To Coronavirus Variants, Strain Found in India To Be Called As ‘Delta’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X