ವಿಡಿಯೋ: ಅರಳು ಹುರಿದಂತೆ ಕನ್ನಡ ಮಾತನಾಡುವ ಸುಷ್ಮಾ ಸ್ವರಾಜ್

Subscribe to Oneindia Kannada
   ಸುಷ್ಮಾ ಸ್ವರಾಜ್ ಕನ್ನಡತೀನಾ ? ಈ ವಿಡಿಯೋ ಒಮ್ಮೆ ನೋಡಿ | Oneindia Kannada

   ನವದೆಹಲಿ, ಜನವರಿ 4: ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಸಂಬಂಧ ಲೋಕಸಭೆಯಲ್ಲಿ ಇಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಸಂಸದ ಶಶಿ ತರೂರ್ ಮಧ್ಯೆ ವಾಕ್ಸಮರ ನಡೆದಿದೆ.

   ಇದಾದ ಬೆನ್ನಿಗೆ ಸುಷ್ಮಾ ಸ್ವರಾಜ್, "ನಾನು ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ಗೌರವ ಹೊಂದಿದ್ದೇನೆ. ಇದರಲ್ಲಿ ಕೆಲವನ್ನು ನಿರರ್ಗಳವಾಗಿ ಮಾತನಾಡುತ್ತೇನೆ," ಎಂದು ಹೇಳಿದ್ದಾರೆ. ಮಾತ್ರವಲ್ಲ ತಾವು ಕನ್ನಡದಲ್ಲಿ ಮಾತನಾಡಿರುವ ಹಳೆಯ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.

   ಜಾಧವ್ ತಾಯಿಗೆ ಅವಮಾನ : ಪಾಕ್ ವಿರುದ್ಧ ಸುಷ್ಮಾ ಕೆಂಡ

   1999ರಲ್ಲಿ ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್ ಮಾತನಾಡಿರುವ ಕನ್ನಡ ಭಾಷಣದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಲವು ಕನ್ನಡದ ನುಡಿಮುತ್ತುಗಳನ್ನು ಉದುರಿಸಿದ್ದಾರೆ.

   ಕನ್ನಡ ನೆನಪಿಸಿದ ವಿವಾದ

   ವಿಶ್ವಸಂಸ್ಥೆಯಲ್ಲಿ ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನ ಸಿಗುವಂತೆ ಮಾಡಲು ಸರಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನ ನಡೆಸಲಿದೆ ಎಂದು ಸುಷ್ಮಾ ಲೋಕಸಭೆಯಲ್ಲಿ ಹೇಳಿದ್ದಾರೆ. ಜತೆಗೆ ಹಿಂದಿ ಭಾಷೆಯನ್ನು ಉತ್ತೇಜಿಸಲು 400 ಕೋಟಿ ಖರ್ಚು ಮಾಡಲು ಸಿದ್ದವಿರುವುದಾಗಿ ಹೇಳಿದ್ದರು.

   When Swaraj, Tharoor trade barbs over making Hindi official language at UN

   ಇದಕ್ಕೆ ತಿರುಗೇಟು ನೀಡಿರುವ ತರೂರ್, ವಿಶ್ವದಲ್ಲಿ ಒಂದೇ ದೇಶ ಮಾತನಾಡುವ ಭಾಷೆಯನ್ನು ವಿಶ್ವಸಂಸ್ಥೆಯಲ್ಲಿ ಅಧಿಕೃತ ಭಾಷೆಯಾಗಿಸಲು ಕೇಂದ್ರಕ್ಕೆ ಯಾಕೆ ಅಷ್ಟು ಆಸಕ್ತಿ ಎಂದು ಪ್ರಶ್ನಿಸಿದ್ದಾರೆ.

   "ಹಿಂದಿ ರಾಷ್ಟ್ರಭಾಷೆಯಲ್ಲ. ಇದು ಅಧಿಕೃತ ಭಾಷೆ ಅಷ್ಟೆ," ಎಂದು ಹೇಳಿರುವ ತರೂರ್, ಪ್ರಧಾನಿ ಮತ್ತು ವಿದೇಶಾಂಗ ಸಚಿವರಿಗೆ ಹಿಂದಿ ಮೇಲೆ ಮೋಹವಿದ್ದರೆ ಆ ಭಾಷೆಯಲ್ಲಿ ಮಾತನಾಡಲಿ. ಆದರೆ ಹಿಂದಿಯೇತರ ಭಾಷಾ ರಾಜ್ಯಗಳನ್ನು ಗೌರವಿಸುವ ಮುಂದಿನ ತಲೆಮಾರಿನ ನಾಯಕರ ಮೇಲೆ ಹಿಂದಿಯನ್ನು ಹೇರುವುದು ಬೇಡ ಎಂದು ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   External Affairs Minister Sushma Swaraj wants Hindi to be one of the official languages spoken at the United Nations (UN). She stated that the ruling Bharatiya Janata Party (BJP) government is ready to spend a whopping Rs 400 crore (if necessary) to promote the language.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ