Whatsapp: HD ಕ್ವಾಲಿಟಿ ಫೋಟೊ ವಾಟ್ಸಪ್‌ನಲ್ಲೆ ಕಳುಹಿಸುವ ವೈಶಿಷ್ಟ್ಯ ಜಾರಿ
ಬೆಂಗಳೂರು, ಆಗಸ್ಟ್ 18: ಮೆಟಾ ಮಾಲೀಕತ್ವದಲ್ಲಿರುವ ವಾಟ್ಸಪ್‌ನಲ್ಲಿ (WhatsApp) ಸದ್ಯಕ್ಕೆ ಚಾಟ್ ವೇಳೆ HD ಕ್ವಾಲಿಟಿಯ ಪೋಟೊಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅಂತಹ ಫೋಟೊ ಕಳುಹಿಸಿದರೂ ಅದರ ಕ್ವಾಲಿಟಿ ಹಾಲಾಗಿರುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಮುಕ್ತಿ ಸಿಗಲಿದ್ದು, HD ಕ್ವಾಲಿಟಿಯ ಪೋಟೊಗಳನ್ನು ನೀವು ಕೇವಲ ವಾಟ್ಸಪ್‌ನಲ್ಲಿಯೇ ಕಳಹಿಸಬಹುದಾಗಿದೆ.
ಮೆಟಾದ ಇನ್‌ಸ್ಟಂಟ್ ಮೆಸೇಜಿಂಗ್ (IM) ಪ್ಲಾಟ್‌ಫಾರ್ಮ್ ವಾಟ್ಸಪ್‌ನಲ್ಲಿ ಅನ್ನು ಚಾಟ್‌ನಲ್ಲಿ ಉತ್ತಮ ಗುಣಮಟ್ಟದ (HD) ಫೋಟೊಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಡಲು ಅಗತ್ಯ ನವೀಕರಣ (update) ಮಾಡುತ್ತಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ವಾಟ್ಸಪ್‌ನಲ್ಲಿ HD ಫೋಟೊ ಕಳುಹಿಸುವ ಈ ವೈಶಿಷ್ಟ್ಯತೆ ಕೆಲವು ವಾರಗಳಲ್ಲಿಯೇ ವಿಶ್ವದಾದ್ಯಂತ ಜಾರಿಗೆ ಬರಲಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್‌ನಲ್ಲಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಕಳುಹಿಸಲು ಬಳಕೆದಾರರಿಗೆ ಅವಕಾಶ ನೀಡಲಾಗುವುದು ಎಂದು ಮೆಟಾ ತಿಳಿಸಿದೆ. ಕ್ವಾಲಿಟಿ ಫೋಟೊ ಸ್ವೀಕರಿಸುವವರಿಗೆ ಸಣ್ಣ ಐಕಾನ್ ಕಾಣಿಸಲಿದೆ. ಈ ಐಕಾನ್ ವಾಟ್ಸಪ್‌ನಲ್ಲಿ ಬಂದ ಫೋಟೊಗಳು ಯಾವ ಗುಣಮಟ್ಟದಲ್ಲಿದೆ ಎಂಬುದನ್ನು ತೊರಿಸಲು ಸಹಾಯ ಮಾಡುತ್ತದೆ.
ರೆಸಲ್ಯೂಶನ್ ಫೋಟೊ ಆಯ್ಕೆ ನಂತರ ಸೆಂಡ್ ಮಾಡಿ
ವಾಟ್ಸ್‌ಪ ಬೆಟಾ ಮಾಹಿತಿ (WABetaInfo) ಪ್ರಕಾರ, ಈ ವರ್ಷದ ಆರಂಭದಲ್ಲಿ ಬೀಟಾದಲ್ಲಿ ವೈಶಿಷ್ಟ್ಯವನ್ನು ಒಳಗೊಳ್ಳಲಿದೆ. ನೀವು ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಗುಣಮಟ್ಟದ ಫೋಟೋವನ್ನು ಆಯ್ಕೆ ಮಾಡಿದರೆ ಮಾತ್ರ ಈ ಸೆಂಡಿಂಗ್ ಆಯ್ಕೆಯು ನಿಮ್ಮ ಚಾಟ್‌ನಲ್ಲಿ ಕಾಣಲಿದೆ ಎನ್ನಲಾಗಿದೆ.
ಇನ್ನೂ ಈ ನೂತನ ವೈಶಿಷ್ಟ್ಯವು ಪೋಟೊಗಳ ಕ್ವಾಲಿಟಿ ಕೆಡದಂತೆ ಸಂರಕ್ಷಿಸುತ್ತದೆ. ಈ ವೈಶಿಷ್ಟ್ಯು ಡಿಫಾಲ್ಟ್ ಇರುವುದರಿಂದ ಪ್ರತಿ ಭಾರಿ ಫೋಟೊ ಕಳುಹಿಸುವಾಗಲೂ ಬಳಕೆದಾರರು ಪ್ರತಿ ಬಾರಿ ಮೆನುವಿನಿಂದ HD ಗುಣಮಟ್ಟವನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಮೆಟಾ ತಿಳಿಸಿದೆ. ಕೆಲವು ವಾರಗಳಲ್ಲಿಯೇ ವಾಟ್ಸಪ್ ನಲ್ಲಿ ನೂತನ ಅಪ್ಡೇಟ್ ಮಾಹಿತಿ ಬಳಕೆದಾರರಿಗೆ ದೊರೆಯಲಿದೆ.











Click it and Unblock the Notifications