ಬಿಜೆಪಿಯ ಗೆಲುವಿಗೆ ಡೊನಾಲ್ಡ್ ಟ್ರಂಪ್ ಮೆಚ್ಚುಗೆ, ಮೋದಿಗೆ ಅಭಿನಂದನೆ
ಉತ್ತರಾಖಂಡ ಹಾಗೂ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ
ವಾಷಿಂಗ್ಟನ್, ಮಾರ್ಚ್ 28: ಬಿಜೆಪಿಯು ಉತ್ತರಪ್ರದೇಶ, ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ಆ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಹೇಳಿದ್ದಾರೆ ಗೊತ್ತಾ?
ಉತ್ತರಪ್ರದೇಶದಲ್ಲಿ ಬಿಜೆಪಿಯು ಗೆದ್ದ ರೀತಿಗೆ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸ್ವತಃ ತಾವೇ ಕರೆ ಮಾಡಿದ್ದಾರೆ. ಈ ಬಗ್ಗೆ ವೈಟ್ ಹೌಸ್ ತಿಳಿಸಿದ್ದು, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಮೋದಿಯವರನ್ನು ಟ್ರಂಪ್ ಕರೆ ಮಾಡಿ ಅಭಿನಂದಿಸಿದ್ದಾರೆ.[ಮಾತು ಉಳಿಸಿಕೊಳ್ಳಲು ಉ.ಪ್ರ. ಬಿಜೆಪಿ ಸರಕಾರಕ್ಕೆ ಬೇಕು 27 ಸಾವಿರ ಕೋಟಿ]

ತುಂಬ ಕಡಿಮೆ ಅವಧಿಯ ಕರೆ ಅದಾಗಿತ್ತು. ಆ ವೇಳೆ ಮೋದಿಯವರಿಗೆ ಟ್ರಂಪ್ ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿಸಲಾಗಿದೆ. ಈಚೆಗಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಮಣಿಪುರ ಹಾಗೂ ಗೋವಾದಲ್ಲಿ ಸರಕಾರ ರಚಿಸಿತ್ತು. ಇನ್ನು ಪಂಜಾಬ್ ನಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರಕಾರ ರಚನೆ ಮಾಡಿತ್ತು.[ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ 10 ಕಾರಣ]

ಜರ್ಮನಿಯ ಆಂಜೆಲಾ ಮರ್ಕೆಲ್ ಗೂ ಕರೆ ಮಾಡಿದ್ದ ಟ್ರಂಪ್, ಇತ್ತೀಚಿನ ಚುನಾವಣೆ ವಿಜಯಕ್ಕೆ ಅಭಿನಂದಿಸಿದ್ದರು. ಆಕೆಯ ಪಕ್ಷವು ಭಾನುವಾರ ನಡೆದ ಪ್ರಾದೇಶಿಕ ಚುನಾವಣೆಯಲ್ಲಿ ಜಯ ದಾಖಲಿಸಿತ್ತು. ಬರುವ ಸೆಪ್ಟೆಂಬರ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಆಕೆ ನಾಲ್ಕನೇ ಬಾರಿಗೆ ಜಯಿಸುವ ಅವಕಾಶಗಳು ಹೆಚ್ಚಾಗಿವೆ.












Click it and Unblock the Notifications