• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆನ್‌ಲೈನ್ ಲೋನ್ ಆಪ್‌ಗಳಿಂದ ಪಡೆದ ಸಾಲ ಮನ್ನಾ: ಪೊಲೀಸರು ಏನಂತಾರೆ?

|

ಬೆಂಗಳೂರು, ಜನವರಿ 12: ಕರೋನಾ ಸಂಕಷ್ಟ ಕಾಲದಲ್ಲಿ ಆನ್‌ಲೈನ್ ಲೋನ್ ಆಪ್‌ಗಳಿಂದ ಲಕ್ಷಾಂತರ ಜನ ಸಾಲ ಪಡೆದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಲೋನ್ ಆಪ್ ಗಳು ಸಾವಿರಾರು ಕೋಟಿ ಸಾಲವನ್ನು ನೀಡಿ ಅಕ್ರಮ ಬಡ್ಡಿ ಸುಲಿಗೆ ನಿಂತವು. ಸಾಲ ವಸೂಲಿ ಹೆಸರಲ್ಲಿ ಮರ್ಯಾದೆ ತೆಗೆದು ಜನರ ಜೀವ ತೆಗೆದ ಆಪ್‌ಗಳ ಆಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇಂತಹ ಸಂದರ್ಭದಲ್ಲಿ ಆನ್‌ಲೈನ್ ಲೋನ್‌ ಆಪ್‌ಗಳಿಂದ ತುರ್ತು ಸಾಲ ಪಡೆದವರು ವಾಪಸು ಕಟ್ಟಬೇಕಾ ? ಕಟ್ಟದಿದ್ದರೆ ಏನಾಗುತ್ತದೆ ? ಅಸಲು ಕಟ್ಟಬೇಕಾ ಇಲ್ಲವೇ ಅಸಲು ಬಡ್ಡಿ ಮನ್ನಾ ಆಗುತ್ತಾ ? ಪೊಲೀಸರು ಏನು ಹೇಳುತ್ತಾರೆ ? ಕಾನೂನು ತಜ್ಞರು ಕೊಡುವ ಸಲಹೆ ಏನು ? ಈ ಕುರಿತ ಸಮಗ್ರ ವರದಿ ನೋಡಿ.

ಸಾವಿರಾರು ಕೋಟಿ ತುರ್ತು ಸಾಲ

ಸಾವಿರಾರು ಕೋಟಿ ತುರ್ತು ಸಾಲ

ಕಳೆದ ವರ್ಷ ಜನವರಿ ವೇಳೆಗೆ ದೇಶದಲ್ಲಿ ಕರೋನಾ ಕಾಣಿಸಿಕೊಂಡಿತ್ತು. ಮೂರು ತಿಂಗಳಲ್ಲೇ ಲಾಕ್‌ ಡೌನ್ ಶುರುವಾಗಿತ್ತು. ಜನ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಸೃಷ್ಟಿ ಆಯಿತು. ಸ್ನೇಹಿತರು ಸಾಲ ಕೊಡಲು ಹಿಂದೇಟು ಹಾಕಿದರು. ಇಂತಹ ಸಂದರ್ಭದಲ್ಲಿ ಸಾಲ ಕೊಡಲು ತುದಿಗಾಲಲ್ಲಿ ನಿಂತಿದ್ದು ಆನ್‌ಲೈನ್ ಲೋನ್ ಆಪ್‌ಗಳು. ಮೊಬೈಲ್ ಸಂಪರ್ಕ ಸಂಖ್ಯೆ ಆಧರಿಸಿ ಲೋನ್ ಕೊಡಲು ಶುರು ಮಾಡಿದವು. ಒಬ್ಬರಿಂದ ಇನ್ನೊಬ್ಬರಿಗೆ ವಿಷಯ ಹಬ್ಬಿ ಆನ್‌ಲೈನ್ ಆಪ್‌ಗಳಿಂದ ಸಾಲ ಪಡೆದರು. ಒಂದು ಸಾಲ ತೀರಿಸಲು ಇನ್ನೊಂದು ಆಪ್‌ ನಿಂದ ಸಾಲ ಪಡೆದರು. ಹೀಗೆ ಶುರುವಾದ ಸಾಲ ಕಟ್ಟಲಾಗದೇ ಸಾಮಾಜಿಕ ಜಾಲತಾಣದಲ್ಲಿ ಮರ್ಯಾದೆ ಹರಾಜು ಮಾಡಿಕೊಂಡರು. ಮರ್ಯಾದೆಗೆ ಅಂಜಿ ಕೆಲವರು ಜೀವವನ್ನೇ ಕಳೆದುಕೊಂಡರು. ಶೇ. 30 ರಿಂದ ಶೇ. 60 ರಷ್ಟು ಬಡ್ಡಿ ವಿಧಿಸಿ ಸುಲಿಗೆ ಮಾಡುತ್ತಿದ್ದ ಆಪ್‌ಗಳ ಕಾರ್ಯಶೈಲಿಗೆ ಸಾಲ ಪಡೆದವರು ಬೆಚ್ಚಿ ಬಿದ್ದಿದ್ದರು.

ಆನ್‌ಲೈನ್ "ಲೋನ್ ಆಪ್‌ " ರೀಕವರಿ ದಾರಿ ಬಂದ್ !

ಲೋನ್ ಆಫ್‌ಗಳ ವಿರುದ್ಧ ಕಾರ್ಯಾಚರಣೆ

ಲೋನ್ ಆಫ್‌ಗಳ ವಿರುದ್ಧ ಕಾರ್ಯಾಚರಣೆ

ಆನ್‌ಲೈನ್ ಆಪ್‌ ಸಾಲ ತೀರಿಸದ ಗ್ರಾಹಕರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಆಪ್‌ಗಳು ಮರ್ಯಾದೆ ತೆಗೆದವು. ಇದಕ್ಕೆ ಅಂಜಿ ಮೃತಪಟ್ಟಿದ್ದೇ ಸೈಬರಾಬಾದ್ ಪೊಲೀಸರು ಅಕ್ರಮ ಆನ್‌ಲೈನ್ ಲೋನ್ ಆಫ್‌ಗಳ ವಿರುದ್ಧ ಕಾರ್ಯಾಚರಣೆಗೆ ಇಳಿದರು. ಕರ್ನಾಟಕದಲ್ಲಿ ಸಿಸಿಬಿ ಪೊಲೀಸರು ಆನ್‌ಲೈನ್ ಆಪ್‌ ಕಚೇರಿಗಳ ಮೇಲೆ ದಾಳಿ ಮಾಡಿದರು. ನೆರೆಯ ತಮಿಳುನಾಡಿನಲ್ಲಿ ಆನ್‌ಲೈನ್ ಲೋನ್ ಆಪ್‌ ನಿರ್ವಹಿಸುತ್ತಿದ್ದ ಕಿಂಗ್ ಪಿನ್ ನನ್ನು ಬಂಧಿಸಿದರು.

ಮೂರು ರಾಜ್ಯದಲ್ಲಿ ಒಟ್ಟಾರೆ 500 ಆನ್‌ಲೈನ್ ಲೋನ್ ಆಫ್‌ಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಅದರಲ್ಲಿ ಕೇವಲ 80 ಲೋನ್‌ ಆಪ್‌ಗಳು ಮಾತ್ರ ಪ್ಲೇಸ್ಟೋರ್ ಮತ್ತು ಐಓಎಸ್ ನಲ್ಲಿ ಇರುವಂತವು. ಉಳಿದ ಬಹುತೇಕ ಆಪ್‌ಗಳು ಎಪಿಕೆ ಫೈಲ್ ಲಿಂಕ್ ಕಳಿಸಿ ಡೌನ್‌ಲೋನ್ ಮಾಡಿದ್ದ ಆಪ್‌ಗಳು ಎಂಬ ಆತಂಕಕಾರಿ ಸಂಗತಿ ತೆಲಂಗಾಣ ಪೊಲೀಸರ ತನಿಖಾ ವರದಿಯಲ್ಲಿ ಬೆಳಕಗಿಎ ಬಂದಿತ್ತು. ಬೆಂಗಳೂರಿನ ಸಿಸಿಬಿ ಪೊಲೀಸರು ಕೂಡ 27 ಆಪ್‌ಗಳ ವಿರುದ್ಧ ಕೇಸು ದಾಖಲಿಸಿ ಸುಮಾರು 50 ಲಕ್ಷ ರೂ. ನಗದು ಹಣ ಬ್ಯಾಂಕ್‌ ಖಾತೆಯಲ್ಲಿ ಜಪ್ತಿ ಮಾಡಿದ್ದಾರೆ. ಅಂತೂ ಮೂರು ರಾಜ್ಯದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಬಹುತೇಕ ಸಾಲ ನೀಡಿರುವ ಆಪ್‌ಗಳ ಕಾರ್ಯಚಟುವಟಿಕೆ ಕೂಡ ಸ್ಥಗಿತಗೊಳಿಸಿದ್ದಾರೆ.

  5 ನಿಮಿಷದಲ್ಲಿ loan ಸಿಗುತ್ತೆ , ಆದರೆ ಬಡ್ಡಿ ಕಟ್ಟೋಕೆ ಜನ್ಮವೇ ಸಾಲದು | Oneindia Kannada
  ಆನ್‌ಲೈನ್ ಸಾಲಗಾರರು

  ಆನ್‌ಲೈನ್ ಸಾಲಗಾರರು

  ಕರ್ನಾಟಕ, ಆಂಧ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಯಾವ್ಯಾವ ಲೋನ್‌ ಆಪ್‌ಗಳ ವಿರುದ್ಧ ಕ್ರಿಮಿನಲ್ ದಾವೆ ದಾಖಲಾಗಿದೆಯೋ ಅಂತಹ ಆಪ್‌ಗಳಲ್ಲಿ ಸಾಲ ಪಡೆದವರು ಸದ್ಯಕ್ಕೆ ಬಡ್ಡಿ ಅಲ್ಲ ಅಸಲು ಕೂಡ ಕಟ್ಟುವ ಅಗತ್ಯವೇ ಬೀಳುವುದಿಲ್ಲ. ಕಾನೂನು ಪ್ರಕಾರ, ಆನ್‌ಲೈನ್ ಲೋನ್‌ ಆಪ್‌ಗಳು ಆರ್‌ಬಿಐನಲ್ಲಿ ನೋಂದಣಿ ಮಾಡಿಲ್ಲ. ಕನಿಷ್ಠ ಪಕ್ಷ ಆಯಾ ರಾಜ್ಯದ ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡದೇ ಸಾಲ ಕೊಟ್ಟಿರುವುದು ಅಕ್ರಮ. ಮಾತ್ರವಲ್ಲ ಗ್ರಾಹಕರ ಮೊಬೈಲ್ ಮಾಹಿತಿ ಕದ್ದು ಮರ್ಯಾದೆ ತೆಗೆದು ಐಟಿ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿವೆ. ಹೀಗಾಗಿ ಇವುಗಳಿಂದ ಪಡೆದ ಸಾಲ ಸದ್ಯಕ್ಕೆ ಕಟ್ಟುವ ಅಗತ್ಯವೇ ಇಲ್ಲ ಎಂದು ಹೆಸರು ಹೇಳಲು ಇಚ್ಛಿಸದ ತೆಲಂಗಾಣ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  ಆನ್‌ಲೈನ್ ತುರ್ತು ಸಾಲಕ್ಕೆ ಕೈ ಹಾಕಿ ಬದುಕು ತೂತು ಮಾಡಿಕೊಳ್ಳಬೇಡಿ!

  ಇನ್ನು ಎಪಿಕೆ ಲಿಂಕ್ ಮೂಲಕವೇ ಅತಿ ಹೆಚ್ಚು ಆಪ್ ಗಳನ್ನು ಸಾರ್ವಜನಿಕರು ಲೋನ್ ಪಡೆದುಕೊಂಡಿದ್ದಾರೆ. ಆದರೆ ಈ ಎಪಿಕೆ ಲಿಂಕ್ ಆಪ್‌ಗಳ ವಿರುದ್ಧ ಸಹ ಕೇಸು ದಾಖಲಾಗಿದ್ದು, ಇನ್ನೂ ಕೆಲವು ಆಪ್‌ಗಳ ಮೇಲೆ ಈವರೆಗೂ ದೂರು ಬಂದಿಲ್ಲ. ಆದರೆ, ಯಾವುದೇ ಆಪ್‌ಗಳಿಂದ ಸಾಲ ಪಡೆದಿದ್ದರೂ ಸದ್ಯಕ್ಕೆ ಕಟ್ಟುವ ಪ್ರಮೇಯವೇ ಬರುವುದಿಲ್ಲ. ಈಗಾಗಲೇ ಆನ್‌ಲೈನ್ ಲೋನ್‌ ಆಪ್‌ಗಳ ಬೇನಾಮಿ ವಹಿವಾಟು ಬಗ್ಗೆ ಇಡಿ ಅಧಿಕಾರಿಗಳು ಕೂಡ ತನಿಖೆ ನಡೆಸುತ್ತಿದ್ದಾರೆ. ಆನ್‌ಲೈನ್ ಲೋನ್ ಆಪ್‌ಗಳ ಸಾಲದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಸಾಲ ಕಟ್ಟದವರ ವಿರುದ್ಧ ಕೋರ್ಟ್‌ ಮೊರೆ ?

  ಸಾಲ ಕಟ್ಟದವರ ವಿರುದ್ಧ ಕೋರ್ಟ್‌ ಮೊರೆ ?

  ಇನ್ನು ಸಾಮಾನ್ಯವಾಗಿ ಆನ್‌ಲೈನ್ ಲೋನ್‌ ಆಪ್‌ಗಳಿಂದ ಪಡೆದ ಸಾಲ ತೀರಿಸದಿದ್ದರೆ ಪೊಲೀಸರಿಗೆ ದೂರು ಕೊಡುತ್ತಾರೆ. ಇಲ್ಲವೇ ಕೋರ್ಟ್ ನಲ್ಲಿ ಕೇಸು ದಾಖಲಿಸುತ್ತಾರೆ ಎಂಬ ಭೀತಿ ಹುಟ್ಟಿರಬಹುದು. ಕಾನೂನು ಪ್ರಕಾರ ಆನ್‌ಲೈನ್ ಲೋನ್‌ ಆಪ್‌ಗಳು ಗ್ರಾಹಕರ ವಿರುದ್ಧ ಪೊಲೀಸರಿಗೆ ದೂರು ನೀಡಲು ಅವಕಶವಿಲ್ಲ! ಹಾಗೂ ಕೋರ್ಟ್‌ ಮೊರೆ ಹೋಗಿ ಕೇಸು ದಾಖಲಿಸಲು ಸಾಧ್ಯವಿಲ್ಲ. ಯಾಕೆಂದರೆ ಅವು ಯಾವೂವು ಭಾರತೀಯ ಕಾನೂನುಗಳ ಅಡಿಯಲ್ಲಿ ನೋಂದಣಿ ಮಾಡಲ್ಪಟ್ಟಿಲ್ಲ. ( ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆನ್‌ಲೈನ್ ಲೋನ್ ಆಪ್‌ಗಳಿಗೆ ಇದು ಅನ್ವಯಿಸಲ್ಲ) ಹೀಗಾಗಿ ಇವು ಯಾವುದೇ ಕಾರಣಕ್ಕೂ ಗ್ರಾಹಕರ ಮೇಲೆ ಕೇಸು ದಾಖಲಿಸಿ ಹಣ ವಸೂಲಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಕುರಿತು ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿದ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್, ವಂಚನೆ ಆರೋಪ ಎದುರಿಸುತ್ತಿರುವ ಆನ್‌ಲೈನ್ ಲೋನ್ ಆಪ್‌ಗಳು ಏನಂತ ನ್ಯಾಯಾಲಯಕ್ಕೆ ಹೋಗಲಿಕ್ಕೆ ಸಾಧ್ಯ ? ಅದು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

  ದೇಶದ ಕಾನೂನು ವ್ಯವಸ್ಥೆ ಪ್ರಕಾರ ನೋಡಿದರೆ ಸಾಲ ನೀಡುವ ಅಗತ್ಯವಿಲ್ಲ. ಸಾಲಕ್ಕಿಂತಲೂ ಎರಡು ಪಟ್ಟು ಸಾಲ ವಸೂಲಿ ಮಾಡಿರುವುದು ಮಹಾ ಅಪರಾಧ. ಆನ್‌ಲೈನ್ ಲೋನ್‌ ಆಪ್‌ಗಳು ಭಾರತೀಯ ರಿಸರ್ವ ಬ್ಯಾಂಕ್ ಮಾರ್ಗದರ್ಶನದಡಿ ಸ್ಥಾಪಿತವಾಗಿದ್ದರೆ ಮಾತ್ರ ಅವುಗಳಿಗೆ ಕಾನೂನಿನ ಮಾನ್ಯತೆ ಇರುತ್ತವೆ. ಆದರೆ, ನೋಂದಣಿ ಮಾಡದೇ ಅಕ್ರಮ ಆಪ್‌ಗಳು ಮಾಡಿರುವ ಅಪರಾಧಗಳ ಮುಂದೆ ಇದ್ಯಾವುದು ಅಲ್ಲ. ಹೀಗಾಗಿ ಅಕ್ರಮ ಆಪ್‌ಗಳು ಕಾನೂನು ಬಾಹಿರವಾಗಿ ಏನೇ ಒಪ್ಪಂದ ಮಾಡಿಕೊಂಡರೂ ಅವುಗಳಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಹೀಗಾಗಿ ಗ್ರಾಹಕರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಕೀಲ ವಿ. ಶಂಕರಪ್ಪ ತಿಳಿಸಿದ್ದಾರೆ.

  ಸಿಬಿಲ್ ಸ್ಕೋರ್ ಡೌನ್ ಮಹಾ ಸುಳ್ಳು

  ಸಿಬಿಲ್ ಸ್ಕೋರ್ ಡೌನ್ ಮಹಾ ಸುಳ್ಳು

  ಇನ್ನು ಆನ್‌ಲೈನ್‌ ಲೋನ್ ಆಪ್‌ಗಳಿಂದ ಪಡೆದ ಸಾಲ ತೀರಿಸಿದ್ದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ ಎಂದು ಧಮ್ಕಿ ಹಾಕಿರಬಹುದು. ಆದರೆ ವಾಸ್ತವದಲ್ಲಿ ಸಿಬಿಲ್ ಸ್ಕೋರ್‌ ಗೂ ಆನ್‌ಲೈನ್ ಲೋನ್‌ ಆಫ್‌ಗಳ ಸಾಲಕ್ಕೂ ಸಂಬಂಧವೇ ಇಲ್ಲ. ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆನ್‌ಲೈನ್ ಆಪ್‌ಗಳಿಂದ ಸಾಲ ಪಡೆದು ಪಾವತಿಸದಿದ್ದರೆ ಅಂತಹವರಿಗೆ ಸಿಬಿಎಲ್ ಸ್ಕೋರ್ ಕಡಿಮೆಯಾಗುತ್ತದೆ. ಆದರೆ, ಈ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿರುವ, ಆನ್‌ಲೈನ್ ಲೋನ್‌ ಆಪ್‌ಗಳಿಂದ ಸಾಲ ಪಡೆದರೆ ಸಿಬಿಲ್ ಸ್ಕೋರ್ ಏನೂ ಆಗಲ್ಲ. ಈ ಅಕ್ರಮ ಆಪ್‌ಗಳ ವಿರುದ್ಧ ಮೊದಲು ಆರ್‌ಬಿಐ ಈ ಮೊದಲೇ ಕ್ರಮ ಜರುಗಿಸಬೇಕಿತ್ತು. ಸದ್ಯ ಈಗ ಹೆಚ್ಚೆತ್ತುಕೊಂಡಿದೆ. ಕಾನೂನು ಬಾಹಿರ ಆಪ್‌ಗಳಿಂದ ಸಾಲ ಪಡೆದು ಪಾವತಿಸದಿದ್ದರೆ ಯಾವ ಸಿಬಿಲ್ ಸ್ಕೋರ್ ಕಡಿಮೆಯಾಗಲ್ಲ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ.

  ಮಾಹಿತಿ ಸೋರಿಕೆ ಎಚ್ಚರ ವಿರಲಿ

  ಮಾಹಿತಿ ಸೋರಿಕೆ ಎಚ್ಚರ ವಿರಲಿ

  ಸಾಲ ಕೊಟ್ಟ ಆಪ್‌ಗಳು ತನ್ನ ಗ್ರಾಹಕರ ಎಲ್ಲಾ ಸಂಪರ್ಕ ಸಮೇತ ಎಲ್ಲಾ ಮಾಹಿತಿ ಕದ್ದಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಇನ್ನೂ ಎಪಿಕೆ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಂಡಿರುವ ಆಪ್‌ಗಳು ಮೊಬೈಲ್‌ ನಲ್ಲಿ ಸ್ಪೈಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸಾಲ ಮರು ಪಾವತಿ ಮಾಡದ ಗ್ರಾಹಕರ ಮಾಹಿತಿ ಸೋರಿಕೆಯಾಗುವ ಅಪಾಯ ವಿರುತ್ತದೆ. ಆಗಿರುವ ಪ್ರಮಾದ ಬಗ್ಗೆ ಸಾಲಗಾರರು ತಮ್ಮ ಸಂಬಂಧಿ ಸ್ನೇಹಿತರಿಗೆ ಮೊದಲೇ ಹೇಳಿಕೊಳ್ಳುವುದು ಸೂಕ್ತ. ಇನ್ನು ಎಪಿಕೆ ಲಿಂಕ್ ಮೂಲಕ ಆಪ್‌ ಡೌನ್‌ ಲೋಡ್ ಮಾಡಿಕೊಂಡಿದ್ದರೆ, ಅಂತವರು ಹೆಚ್ಚು ಜಾಗರೂಕರಾಗಬೇಕಾಗುತ್ತದೆ. ಯಾಕೆಂದರೆ ನಿಮ್ಮ ಮೊಬೈಲ್ ಎಲ್ಲಾ ಮಾಹಿತಿ, ಬ್ಯಾಂಕ್ ಖಾತೆ, ಪಾಸ್ ವರ್ಡ್, ಒಟಿಪಿ ಎಲ್ಲವೂ ಅವರ ಕೈಯಲ್ಲಿರುತ್ತದೆ. ಈ ಬಗ್ಗೆ ಜಾಗರೂಕತೆ ವಹಿಸುವುದು ಸೂಕ್ತ ಎನ್ನುತ್ತಾರೆ ಸೈಬರ್ ತಜ್ಞ ನಾ. ವಿಜಯಶಂಕರ್.

  English summary
  Instant Loan Apps Scam : What Cops says about instant loan apps loan waiver. Read on.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X