ಆಪರೇಷನ್ ಸಿಂಧೂರ ನಂತರ ಆಪರೇಷನ್ ಕೆಲ್ಲಾರ್ ಶುರು ಮಾಡಿದ ಭಾರತೀಯ ಸೇನೆ! ಶತ್ರು ದೇಶಕ್ಕೆ ಮೋದಿ ಹೇಳಿದ್ದೇನು ?!
ಭಾರತೀಯ ಸೇನೆಯು ಆಪರೇಷನ್ ಸಿಂಧೂರ ನಂತರ ಮತ್ತೊಂದು ಬೃಹತ್ ಕಾರ್ಯಾಚರಣೆಯನ್ನು ನಡೆಸಿದ್ದು. ಇದಕ್ಕೆ ಆಪರೇಷನ್ ಕೆಲ್ಲಾರ್ ಎಂದು ಹೆಸರು ಇರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ದಾಳಿ ನಡೆಸಿದ್ದ ಉಗ್ರರ ದಾಳಿ ಬೆನ್ನಲ್ಲೇ ಭಾರತವೂ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿತ್ತು. ಇನ್ನು ಇದೀಗ ಗಡಿಭಾಗದಲ್ಲಿ ಆಪರೇಷನ್ ಕೆಲ್ಲಾರ್ ಹೆಸರಿನಲ್ಲಿ ಮೂವರು ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ಭಾರತೀಯ ಸೇನೆಯು ಖಚಿತಪಡಿಸಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆಯೇ ಮತ್ತೊಂದು ಬಿಗ್ ಅಪ್ಡೇಟ್ಸ್ ಬರಲು ಪ್ರಾರಂಭವಾಗಿದೆ. ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ 9 ಅಡಗುತಾಣಗಳ ಮೇಲೆ ದಾಳಿ ಮಾಡಿದ್ದು 50ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದರು. ಈ ಕಾರ್ಯಾಚರಣೆಯ ನಂತರ ಭಾರತೀಯ ಸೇನೆಯು ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ಬೆನ್ನಲ್ಲೇ ಭಾರತೀಯ ಸೇನೆ ಹಾಗೂ ಕಾಶ್ಮೀರದ ಪೊಲೀಸರು ಅಲರ್ಟ್ ಆಗಿದ್ದರು. ಈ ಜಂಟಿ ಕಾರ್ಯಾಚರಣೆಯ ಫಲವಾಗಿ ಇಂದು (ಮಂಗಳವಾರ - ಮೇ 13) ಮೂರು ಜನ ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ಭಾರತೀಯ ಸೇನೆ ಖಚಿತಪಡಿಸಿದೆ.

ಮೃತಪಟ್ಟ ಮೂರು ಜನ ಉಗ್ರರಲ್ಲಿ ಇಬ್ಬರ ಗುರುತನ್ನು ಪತ್ತೆ ಮಾಡಲಾಗಿದೆ. ಇನ್ನೊಬ್ಬನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದ ಉಗ್ರರು ಎಲ್ಲೇ ಇದ್ದರೂ ಅವರನ್ನು ಹುಡುಕಿ ಕೊಲ್ಲಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಭಾರತೀಯ ಸೇನೆ ಸಹ ಈ ನಿಟ್ಟಿನಲ್ಲಿ ನಿರಂತರ ಕಾರ್ಯಾಚರಣೆಯನ್ನು ನಡೆಸಿತ್ತು. ಭಾರತೀಯ ಸೇನೆಗೆ ಕಾಶ್ಮೀರದ ಪೊಲೀಸರು ಹಾಗೂ ಸ್ಥಳೀಯರು ಸಹ ಸಾಥ್ ನೀಡಿದ್ದರಿಂದಾಗಿ ಇನ್ನಷ್ಟು ಜನ ಉಗ್ರರನ್ನು ಹೊಡೆದುರುಳಿಸಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.
Let TRF ಉಗ್ರರನ್ನು ಭಾರತೀಯ ಸೇನೆ ಎನ್‌ಕೌಂಟರ್ ಮಾಡಿದೆ ಎಂದು ವರದಿಯಾಗಿದೆ. ಮೃತ ಉಗ್ರರನ್ನು ಶಾಹಿದ್ ಅಹ್ಮದ್ ಕುಟ್ಟಾಯ್ ಹಾಗೂ ಅದ್ನಾನ್ ಶಫಿ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಉಗ್ರನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಕಾಶ್ಮೀರದ ಕೆಲ್ಲಾರ್ ಕಾಡಿನಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎನ್ನುವ ನಿಖರ ಮಾಹಿತಿ ಲಭ್ಯವಾದ ಮೇಲೆ ಭಾರತೀಯ ಸೇನೆಯು ಈ ಹೊಸ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್: ಇನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಭಾರತೀಯ ಸೈನಿಕರನ್ನು ಭೇಟಿ ಮಾಡಿ ಶುಭಕೋರಿದ್ದಾರೆ. ಇದರ ಬೆನ್ನಲ್ಲೇ ಅವರು ಮಾಡಿರುವ ಟ್ವೀಟ್‌ವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಪಂಜಾಬ್‌ನ ಆದಂಪುರ ಏರ್‌ಬೇಸ್‌ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರು.
ಮೋದಿ ಹೇಳಿದ್ದೇನು: ಇಂದು ಬೆಳಿಗ್ಗೆ ನಾನು AFS ಆದಂಪುರಕ್ಕೆ ಹೋಗಿ ನಮ್ಮ ವೀರ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವ ನಮ್ಮ ಯೋಧರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರಕ್ಕಾಗಿ ಮಾಡುವ ಎಲ್ಲ ಸಾಹಸಕ್ಕೂ ಭಾರತವು ಅವರಿಗೆ ಶಾಶ್ವತವಾಗಿ ಕೃತಜ್ಞವಾಗಿದೆ ಎಂದಿದ್ದಾರೆ. ಮುಂದುವರಿದು ಶತ್ರು ರಾಷ್ಟ್ರದ ಫೈಲೆಟ್ ಗಳು ಸರಿಯಾಗಿ ಮಲಗಿಲ್ಲವೇಕೆ (ಭಾರತೀಯ ಸೇನೆಯು ಶತ್ರು ಫೈಲೆಟ್‌ಗಳ ನಿದ್ದೆಗೆಡಿಸಿದೆ) ಎಂಬರ್ಥದಲ್ಲಿ ಹೇಳಿದ್ದಾರೆ ಅಂತಲೂ ವರದಿಯಾಗಿದೆ.












Click it and Unblock the Notifications