ಸ್ಕಲ್-ಬ್ರೇಕರ್ ಚಾಲೆಂಜ್ ಎಂದರೇನು?: ಪೋಷಕರಿಗ್ಯಾಕಷ್ಟು ಭಯ

Recommended Video

      Skull Breaker Challenge , Why are parents worried about this ? | Oneindia Kannada

      ನವದೆಹಲಿ, ಫೆಬ್ರವರಿ 17: ಕೀ-ಕೀ ಚಾಲೆಂಜ್, ಟಿಕ್‌ಟಾಕ್ ರೀತಿಯಲ್ಲಿ ಇದೀಗ ಸ್ಕಲ್ ಬ್ರೇಕರ್ ಚಾಲೆಂಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

      ಸ್ಕಲ್ ಬ್ರೇಕರ್ ಶಾಲಾ ಮಕ್ಕಳ ಪೋಷಕರಿಗೆ ದೊಡ್ಡ ತಲೆನೋವಾಗಿದೆ. ಸದ್ಯ ಈ ಚಾಲೆಂಜ್ ವಿಡಿಯೋಗಳು ಫೇಸ್‌ಬುಕ್, ಟಿಕ್‌ಟಾಕ್, ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿವೆ.

      ಸ್ಕಲ್ ಬ್ರೇಕರ್ ಚಾಲೆಂಜ್‌ನ್ನು ಮೂರು ಮಂದಿ ಸೇರಿ ಮಾಡುತ್ತಾರೆ. ಮೊದಲು ಮಧ್ಯದಲ್ಲಿ ನಿಂತವರನ್ನು ಬಿಟ್ಟು ಆ ಕಡೆ ಈ ಕಡೆ ನಿಂತವರು ಜಂಪ್ ಮಾಡುತ್ತಾರೆ. ನಂತರ ಮಧ್ಯೆ ನಿಂತವನು ಅವರಂತೆ ಜಂಪ್ ಮಾಡುತ್ತಾನೆ. ತಕ್ಷಣ ಆ ಕಡೆ ಈ ಕಡೆ ನಿಂತವರು ಮೇಲೆ ಹಾರಿದವನ ಕಾಲುಗಳಿಗೆ ಜೋರಾಗಿ ಒದೆಯುತ್ತಾರೆ.

      What Is Skull Breaker Challenge

      ಇದರಿಂದ ಮೇಲೆ ಹಾರಿದವನಿಗೆ ಯಾವುದೇ ಸಪೋರ್ಟ್ ಇಲ್ಲದೆ ನೆಲಕ್ಕೆ ಬೀಳುತ್ತಾನೆ. ಈ ವೇಳೆ ಬೆನ್ನು ಮೂಳೆ, ತಲೆ ಹಾಗೂ ಕೈ ಕಾಲುಗಳಿಗೆ ಬಲವಾದ ಪೆಟ್ಟು ಬೀಳುವ ಸಾಧ್ಯತೆ ಇದೆ. ಒಂದು ವೇಳೆ ತಲೆ ಬುರುಡೆ ಜೋರಾಗಿ ನೆಲಕ್ಕೆ ಅಪ್ಪಳಿಸಿದರೆ ಪ್ರಾಣವೇ ಹೋಗಬಹುದು ಅಥವಾ ಪ್ರಜ್ಞೆ ತಪ್ಪುವ ಸಾಧ್ಯತೆ ಇರುತ್ತದೆ.

      ಇದೀಗ ಈ ಸ್ಕಲ್ ಬ್ರೇಕರ್ ಗೇಮ್‌ನಿಂದ ಪೋಷಕರಿಗೆ ಆತಂಕವಾಗಿದೆ. ದಿನನಿತ್ಯ ಮೊಬೈಲ್‌ನಲ್ಲೇ ಮುಳುಗಿರುವ ಮಕ್ಕಳನ್ನು ಇದರಿಂದ ದೂರವಿಡುವುದು ಹೇಗೆ ಎನ್ನುವುದು ಪೋಷಕರ ಚಿಂತೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+