ಸಾಯುವ ಮುನ್ನ ಪಾಕಿಸ್ತಾನ ನೋಡಬೇಕು ಎಂದ ಸ್ಟಾರ್ ನಟ!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಮುಂಬೈ, ನವೆಂಬರ್ 13: ಬಾಲಿವುಡ್ ನ ಸ್ಟಾರ್ ನಟ ರಿಷಿ ಕಪೂರ್ ಅವರು ತಮ್ಮ ಜೀವನದ ಅಂತಿಮ ಆಸೆಯನ್ನು ಬಹಿರಂಗ ಪಡಿಸಿದ್ದಾರೆ. ಸಾಯುವ ಮುನ್ನ ಪಾಕಿಸ್ತಾನವನ್ನು ಒಮ್ಮೆ ನೋಡಬೇಕು ಎಂದಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದ್ದು ಎಂದು ನೀಡಿರುವ ಹೇಳಿಕೆಗೆ ನಟ ರಿಷಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.

What is Rishi Kapoor’s last wish? To see Pak before he dies

ಭಾರತ ಹಾಗೂ ಪಾಕಿಸ್ತಾನ ನಡುವೆ ಎಷ್ಟೇ ಯುದ್ಧಗಳಾದರೂ ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ರಿಷಿ ಹೇಳಿದ್ದಾರೆ.

ಸ್ವತಂತ್ರ ಕಾಶ್ಮೀರದ ಬಗ್ಗೆ ನಡೆದಿರುವ ಚರ್ಚೆ ಸರಿಯಿಲ್ಲ. ಅಣು ಶಕ್ತಿ ಭರಿತ ಮೂರು ರಾಷ್ಟ್ರಗಳಾದ ಭಾರತ, ಚೀನಾ ಹಾಗೂ ಪಾಕಿಸ್ತಾನದಿಂದ ಆವೃತವಾಗಿರುವ ಕಣಿವೆ ರಾಜ್ಯಕ್ಕೆ ಸ್ವತಂತ್ರ ಮಾನ್ಯತೆ ನೀಡುವುದನ್ನು ಅಬ್ದುಲ್ಲಾ ವಿರೋಧಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಿಷಿ, 'ನಿಮ್ಮ ಎಲ್ಲಾ ಮಾತು ಒಪ್ಪುತ್ತೇನೆ, ನನಗೀಗ 65 ವರ್ಷ ವಯಸ್ಸು, ನಾನು ಸಾಯುವುದರಲ್ಲಿ ಒಮ್ಮೆಯಾದರೂ ಪಾಕಿಸ್ತಾನವನ್ನು ನೋಡಬೇಕು. ನನ್ನ ಮಕ್ಕಳು ತಮ್ಮ ಮೂಲ ತಾಣವನ್ನು ಕಾಣಬೇಕು. ದಯವಿಟ್ಟು ಇದೊಂದು ಮಾಡಿಕೊಡಿ, ಜೈ ಮಾತಾ ದಿ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran actor, Rishi Kapoor has one last wish. He wants to see Pakistan before he dies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ