ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಮ್ಮನ್ನು ದೇವತೆಯೆಂದು ಕರೆಯಲೇ' ಎಂದು ಸುಷ್ಮಾರನ್ನು ಕೇಳಿದ್ದು ಯಾರು?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 28: "ನೀವು ಪಾಕ್ ಪ್ರಧಾನಿಯಾಗಿದ್ದರೆ, ಪಾಕಿಸ್ತಾನ ಬದಲಾಗುತ್ತಿತ್ತು!" ಇದು ಪಾಕ್ ಮಹಿಳೆಯೊಬ್ಬರು ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮಾಡಿದ ಟ್ವೀಟ್!

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೆಡಿಕಲ್ ವೀಸಾ ಬೇಕಿದೆ ಎಂದು ಹಿಜಾಬ್ ಆಸಿಫ್ ಎಂಬ ಪಾಕ್ ಮಹಿಳೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಕೊನೆಗೂ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಪಾಕಿಸ್ತಾನದ ಕಂದಕೊನೆಗೂ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಪಾಕಿಸ್ತಾನದ ಕಂದ

ಪಿತ್ಥಜನಕಾಂಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡುವಂಥ ಹೈಟೆಕ್ ಸೌಲಭ್ಯಗಳು ಪಾಕಿಸ್ತಾನದಲ್ಲಿಲ್ಲದಿರುವುದರಿಂದ ಅವರಿಗೆ ಭಾರತದಲ್ಲಿ ಚಿಕಿತ್ಸೆ ನೀಡಬೇಕಿತ್ತು.

ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ಅವರಲ್ಲಿಯೂ ಈ ಕುರಿತು ನೆರವು ಬೇಡಿದ್ದ ಮಹಿಳೆಗೆ ಪಾಕ್ ಸರ್ಕಾರದಿಂದ ಯಾವುದೇ ರೀತಿಯ ಧನಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ನೊಂದ ಮಹಿಳೆ ನೇರ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದರು.

ಪಾಕಿಸ್ತಾನದ ಮಗುವಿನ ಚಿಕಿತ್ಸೆಗೆ ವೀಸಾ ಕೊಡಿಸಿದ ಸಚಿವೆ ಸುಷ್ಮಾ ಪಾಕಿಸ್ತಾನದ ಮಗುವಿನ ಚಿಕಿತ್ಸೆಗೆ ವೀಸಾ ಕೊಡಿಸಿದ ಸಚಿವೆ ಸುಷ್ಮಾ

ವೀಸಾ ನೀಡಲು ಸಮ್ಮತಿಸಿದ ಮತ್ತು ಆ ನಿಟ್ಟಿನಲ್ಲಿ ಖುದ್ದು ಆಸ್ಥೆ ವಹಿಸಿ ನೆರವು ನೀಡಿದ ಸುಷ್ಮಾ ಸ್ವರಾಜ್ ಅವರ ಔದಾರ್ಯತೆಗೆ ಕಣ್ತುಂಬಿಕೊಂಡು ಅವರು ಹೀಗೆ ಟ್ವೀಟ್ ಮಾಡಿದ್ದಾರೆ.

ಸುಷ್ಮಾ ಸ್ಪಂದನೆ

ಭಾರತಕ್ಕೆ ಆಗಮಿಸಲು ಮೆಡಿಕಲ್ ವೀಸಾ ನೀಡುವಂತೆ ಪಾಕ್ ಮಹಿಳೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸುಷ್ಮಾ ಸ್ವರಾಜ್ ಒಪ್ಪಿಗೆ ಸೂಚಿಸಿದ್ದಲ್ಲದೆ, ತಕ್ಷಣವೇ ರಾಜತಾಂತ್ರಿಕ ಔಪಚಾರಿಕತೆಗಳನ್ನು ನಿಭಾಯಿಸಿದ್ದಾರೆ. ಹೀಗೆ ಸುಷ್ಮಾ ಸ್ವರಾಜ್ ಅವರ ಕಾಳಜಿ ಮತ್ತು ಪ್ರೀತಿಗೆ ಮನಸೋತ ಪಾಕ್ ಮಹಿಳೆ, ನೀವು ನಮ್ಮ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಬದಲಾಗಿರುತ್ತಿತ್ತು ಎಂದು ಸಹ ಟ್ವೀಟ್ ಮಾಡಿದ್ದಾರೆ!

ನಾನು ನಿಮ್ಮನ್ನು ದೇವರೆಂದು ಕರೆಯಲೇ?

'ನಾನು ನಿಮ್ಮನ್ನು ದೇವರೆಂದು ಕರೆಯಲೇ? ಅಥವಾ ಸೂಪರ್ ವುಮನ್ ಎನ್ನಲೇ? ನಿಮ್ಮ ಔದಾರ್ಯವನ್ನು ವರ್ಣಿಸಲು ನನ್ನ ಬಳಿ ಪದಗಳಿಲ್ಲ. ಲವ್ ಯು ಮ್ಯಾಮ್, ನಿಮ್ಮ ಬಗ್ಗೆ ಮಾತನಾಡುವಾಗ ನನಗೆ ಕಣ್ಣೀರನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ.' ಹೀಗೆಂದು ಹಿಜಾಬ್ ಆಸಿಫ್ ಟ್ವೀಟ್ ಮಾಡಿದ್ದಾರೆ!

ನಾನು ಭಾರತವನ್ನು ಪ್ರೀತಿಸುತ್ತೇನೆ

ನಮ್ಮ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ನಾವು ಭಾರತವನ್ನು ಎಂದಿಗೂ ದ್ವೇಷಿಸುವುದಿಲ್ಲ. ನಾನು ಭಾರತಕ್ಕೆ ಹಲವು ಭಾರಿ ಭೇಟಿ ನೀಡಿದ್ದೇನೆ. ಭಾರತವನ್ನು ಪ್ರೀತಿಸುತ್ತೇನೆ. ಹಾಗೂ ಪಾಕಿಸ್ತಾನದಲ್ಲಿರುವ ಬಹುಪಾಲು ಜನರು ಭಾರತವನ್ನು ಪ್ರೀತಿಸುತ್ತಾರೆ ಎಂದು ಸಹ ಆಕೆ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದ ಸದ್ಬಳಕೆ

ಸಾಮಾಜಿಕ ಮಾಧ್ಯಮದ ಸದ್ಬಳಕೆ

ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಂಡು, ಆ ಮೂಲಕವೇ ನೂರಾರು ಜನರಿಗೆ ಸಹಾಯ ಮಾಡಿದ, ಮಾಡುತ್ತಿರುವ ಸುಷ್ಮಾ ಸ್ವರಾಜ್ ಅವರ ಕಾರ್ಯವೈಖರಿಯ ಕುರಿತು ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

English summary
What do i call you? God? This was the tweet from a lady from Pakistan who got a medical visa thanks to Sushma Swaraj. The External Affairs Minister, Sushma Swaraj directed the Indian High Commission in Islamabad to issue a visa to a Pakistani national for medical treatment in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X