ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Largest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವು

|
Google Oneindia Kannada News

ಬೆಂಗಳೂರು, ನವೆಂಬರ್‌ 16: ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತದ ಪರಿಣಾಮ ಜಾಗತಿಕ ಟೆಕ್‌ ಕಂಪನಿಗಳು ನೌಕರರನ್ನು ನಿರಂತರವಾಗಿ ವಜಾಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಂತಹ ಕಂಪನಿಗಳು ಯಾವವು ಎಂದು ತಿಳಿಯೋಣ

ಹೆಚ್ಚುತ್ತಿರುವ ಬಡ್ಡಿದರಗಳು, ಗ್ರಾಹಕ ಖರ್ಚು, ವಿಶ್ವ ಹಣಕಾಸು ಸ್ಥಿತಿಗತಿ ಹಾಗೂ ಹಣಕಾಸು ಮಾರುಕಟ್ಟೆಗಳ ಮೇಲೆ ಹಣದುಬ್ಬರದ ಪರಿಣಾಮಗಳಿಂದಾಗಿ ಬಹುತೇಕ ಯುನಿಕಾರ್ನ್‌ ಕಂಪನಿಗಳು ಸೇರಿದಂತೆ ದೊಡ್ಡ ದೊಡ್ಡ ಐಟಿ ಕಂಪೆನಿಗಳು ಉದ್ಯೋಗಿಗಳನ್ನು ವಜಾಮಾಡಿವೆ. ಅಲ್ಲದೆ ಈಗಾಗಲೇ ನೇಮಕಾತಿಯನ್ನು ನಿಲ್ಲಿಸಿವೆ. ಇಲ್ಲಿ ವಿಶ್ವದ ಪ್ರಮುಖ ಐಟಿ ದೈತ್ಯ ಜಾಗತಿಕ ತಂತ್ರಜ್ಞಾನ ವ್ಯವಹಾರ ಕಂಪನಿಗಳು ಪ್ರಮುಖ ಸಾಲಿನಲ್ಲಿವೆ.

Amazon Lay Offs : ಬರೋಬ್ಬರಿ 10,000 ಉದ್ಯೋಗಿಗಳ ವಜಾಕ್ಕೆ ಅಮೆಜಾನ್‌ ಚಿಂತನೆAmazon Lay Offs : ಬರೋಬ್ಬರಿ 10,000 ಉದ್ಯೋಗಿಗಳ ವಜಾಕ್ಕೆ ಅಮೆಜಾನ್‌ ಚಿಂತನೆ

ತನ್ನ ಉತ್ಪಾದನಾ ವೆಚ್ಚ ಕಡಿತಗೊಳಿಸುವ ಸಲುವಾಗು ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ, ಟ್ವಿಟ್ಟರ್‌ ಅಮೆಜಾನ್‌ ಕಂಪನಿಗಳು ಸಾವಿರಗಟ್ಟಲೇ ಉದ್ಯೋಗಿಗಳ ಬಲವನ್ನು ವಜಾ ಮಾಡಿದೆ. ದೊಡ್ಡ ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಹೆಚ್ಚುತ್ತಿರುವ ಆರ್ಥಿಕ ಚಿಂತೆಗಳಿಂದ ಆದಾಯ ಕೊರತೆಯನ್ನು ಎದುರಿಸುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿವೆ. ಹೀಗೆ 2022ರಲ್ಲಿ ಉದ್ಯೋಗಿಗಳನ್ನು ವಜಾ ಮಾಡಿರುವ ಕಂಪೆನಿಗಳು ಇಂತಿವೆ.

44 ಬಿಲಿಯನ್‌ ಡಾಲರ್‌ಗೆ ಜಗತ್ತಿನ ಅತಿ ದೊಡ್ಡ ಶ್ರೀಮಂತ ಎಲಾನ್‌ ಮಸ್ಕ್‌ ಅವರಿಂದ ಖರೀದಿಸಲ್ಪಟ್ಟ ಸಾಮಾಜಿಕ ಮಾಧ್ಯಮ ತಾಣ ಟ್ವಿಟ್ಟರ್‌ ಉದ್ಯೋಗಿಗಳ ವಜಾಕ್ಕಿಂತಲೂ ಮುಂಚೆಯಿದ್ದ ಜಗತ್ತಿನ ಮುಖ್ಯ ಮಾಧ್ಯಮ ವೇದಿಕೆಯಲ್ಲಿ ನಿರಂತರವಾಗಿ ಚರ್ಚೆಯಲ್ಲಿತ್ತು. ಎಲಾನ್‌ ಮಸ್ಕ್‌ ಟ್ವಿಟ್ಟರ್‌ನ ಹೊಸ ಸಿಇಒ ಆದ ಮೇಲೆ ಉನ್ನತ ಹುದ್ದೆಗಳಿದ್ದವರಿಂದ ಹಿಡಿದು ಸೇಲ್ಸ್‌ ಮಾರ್ಕೆಟಿಂಗ್‌ ವರೆಗೂ ಸುಮಾರು 3,000 ಉದ್ಯೋಗಿಗಳನ್ನು ವಜಾ ಮಾಡಿದರು. ಅದಕ್ಕೆ ಅವರು ನಾವು ಪ್ರತಿನಿತ್ಯ ಆರ್ಥಿಕ ನಷ್ಟದಿಂದ 4 ಮಿಲಿಯನ್ ಡಾಲರ್‌ನಷ್ಟು ನಷ್ಟ ಅನುಭವಿಸಿದ್ದೇವೆ ಎಂದು ಕಾರಣ ಕೊಟ್ಟರು.

Twitter lays off : ಟ್ವಿಟರ್‌ನಿಂದ ಮತ್ತೆ 4,400 ನೌಕರರ ವಜಾTwitter lays off : ಟ್ವಿಟರ್‌ನಿಂದ ಮತ್ತೆ 4,400 ನೌಕರರ ವಜಾ

ನಷ್ಟದ ಪರಿಣಾಮದಿಂದ 11,000 ಉದ್ಯೋಗಿಗಳ ವಜಾ

ನಷ್ಟದ ಪರಿಣಾಮದಿಂದ 11,000 ಉದ್ಯೋಗಿಗಳ ವಜಾ

ಮತ್ತೊಂದು ಐಟಿ ಕಂಪೆನಿ ಸಾಮಾಜಿಕ ಮಾಧ್ಯಮ ಮೆಟಾದ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಕೂಡ ಆಂತರಿಕ ಸುತ್ತೋಲೆ ಹೊರಡಿಸಿ ಕಂಪೆನಿಯ ಹಲವಾರು ವಿಭಾಗಗಳಲ್ಲಿ ಬರೋಬ್ಬರಿ 11,000 ಉದ್ಯೋಗಿಗಳನ್ನು ಆದಾಯ ಮತ್ತು ಆಗುತ್ತಿರುವ ನಷ್ಟದ ಪರಿಣಾಮದಿಂದ ಕೈಬಿಡುತ್ತಿರುವುದಾಗಿ ಹೇಳಿದೆ. ಕಂಪೆನಿಯ ನೂತನ ವೆಚ್ಚ ಕಡಿತಗೊಳಿಸುವ ಕ್ರಮಗಳು ಹಾಗೂ ಆದಾಯ ಕುಸಿಯುತ್ತಿರುವ ಆದಾಯದ ಬಗ್ಗೆ ಸುದೀರ್ಘ ಪತ್ರವನ್ನು ಸಿಬ್ಬಂದಿಗೆ ಬರೆದಿರುವ ಪತ್ರದಲ್ಲಿ ಅವರು ವಿವರಿಸಿದ್ದಾರೆ. ಇತಿಹಾಸದಲ್ಲಿ ಫೇಸ್‌ಬುಕ್‌ ಕಂಪೆನಿ ಮಾಡಿರುವ ಅತಿದೊಡ್ಡ ವಜಾಗೊಳಿಸುವ ಪ್ರಕಿಯೆ ಇದಾಗಿದೆ. ಇದರಿಂದ ಸಾವಿರಾರು ನೌಕರರ ಮೇಲೆ ಪರಿಣಾಮ ಬೀರಿದೆ.

ಅಮೆಜಾನ್‌ಗೆ ಆದಾಯ ಕೊರತೆ, ಲಾಭ ಕುಸಿತ

ಅಮೆಜಾನ್‌ಗೆ ಆದಾಯ ಕೊರತೆ, ಲಾಭ ಕುಸಿತ

ಜಗತ್ತಿನ ಅತಿ ದೊಡ್ಡ ಇ ಕಾಮರ್ಸ್‌ ಸಂಸ್ಥೆ ಅಮೆಜಾನ್‌ ಕೂಡ ನಿನ್ನೆ 10,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ವರದಿಗಳು ತಿಳಿಸಿದೆ. ಸುದೀರ್ಘವಾಗಿ ಷೇರು ಮೌಲ್ಯ ನಷ್ಟದ ಪರಿಣಾಮವಾಗಿ ಅಮೆಜಾನ್‌ ಆದಾಯ ಕೊರತೆಯನ್ನು ಎದುರಿಸುತ್ತಿದೆ. ಇದು ಕಂಪನಿಯ ವ್ಯವಹಾರಕ್ಕೆ ಬಹು ದೊಡ್ಡ ಹೊಡೆತ ನೀಡಿದೆ. ಕಂಪನಿಯೊಳಗೆ ಹೆಚ್ಚುತ್ತಿರುವ ವಿವಿಧ ವಿಭಾಗಗಳ ನಿರ್ವಹಣಾ ವೆಚ್ಚವು ಲಾಭಗಳಿಗೆ ಹೊಡೆತ ನೀಡಿದೆ. ಇದರಿಂದ ಸುಮಾರು 5 ಶತಕೋಟಿ ನಷ್ಟ ಅನುಭವಿಸಿರುವುದಾಗಿ ಕಂಪೆನಿ ಘೋಷಿಸಿದೆ.

ಸುಮಾರು 450 ಉದ್ಯೋಗಿಗಳ ವಜಾ

ಸುಮಾರು 450 ಉದ್ಯೋಗಿಗಳ ವಜಾ

ನೆಟ್‌ಫ್ಲಿಕ್ಸ್‌ ಕಂಪೆನಿ ಕೂಡ ಎರಡೆರಡು ಬಾರಿ ಉದ್ಯೋಗಿಗಳನ್ನು ವಜಾ ಮಾಡಿದೆ. ಈ ವರ್ಷದ ಅಕ್ಟೋಬರ್‌ ವರೆಗೆ ಇದು ಸುಮಾರು 450 ಉದ್ಯೋಗಿಗಳನ್ನು ವಜಾ ಮಾಡಿದೆ. ಸಾಂಕ್ರಾಮಿಕ ಕೋವಿಡ್‌ ಅಂತ್ಯಗೊಂಡ ನಂತರ ನೆಟ್‌ಫ್ಲಿಕ್ಸ್‌ ಕಳೆದ ಕೆಲವು ತಿಂಗಳುಗಳಿಗೆ ತನ್ನ ಪೋರ್ಟಲ್‌ಗೆ ಚಂದದಾರ ಕ್ಷೀಣತೆಯನ್ನು ಎದುರಿಸುತ್ತಿದೆ. ಇದರಿಂದ ಆದಾಯದ ಕೊರತೆ ಕಂಡು ನಷ್ಟವನ್ನು ಅನುಭವಿಸಿದೆ.

ಸ್ನಾಪ್‌ ಚಾಟ್‌ನ 6,000 ನೌಕರರ ವಜಾ

ಸ್ನಾಪ್‌ ಚಾಟ್‌ನ 6,000 ನೌಕರರ ವಜಾ

ಸ್ನಾಪ್‌ ಚಾಟ್ ಕೂಡ ತನ್ನ ಒಟ್ಟು ನೌಕರರ ಶೇ. 20ರಷ್ಟು ನೌಕರರನ್ನು ಅಂದರೆ ಸುಮಾರು 6,000 ನೌಕರರನ್ನು ವಜಾಗೊಳಿಸಿರುವುದಾಗಿ ತಿಳಿಸಿದೆ. ಅದರೆ ಈ ಘೋಷಣೆ ಬಳಿಕ ಅದರ ಷೇರುಗಳ ಮೌಲ್ಯವು ಹೆಚ್ಚಾಯಿತು. ಸ್ನಾಪ್‌ ಚಾಟ್‌ ಮೂಲ ಕಂಪೆನಿಯು ಪಿಕ್ಸಿ ಪೋಟೊ ಟೇಕಿಂಗ್‌ ಡ್ರೋನ್‌ ಮತ್ತು ಅದರ ಸ್ನಾಪ್‌ ಒರಿಜಿನಲ್ಸ್‌ ಪ್ರಿಮಿಯಂ ಕಾರ್ಯಕ್ರಮಗಳನ್ನು ಒಳಗೊಂಡಂತೆ ಹಲವಾರು ಉಪಕ್ರಮಗಳನ್ನು ಸ್ಥಗಿತಗೊಳಿಸಿತು.

English summary
As a result of the global economic recession, global tech companies are constantly laying off employees. Let us know what are such companies in this background
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X