• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕಿತರ ಗೃಹ ದಿಗ್ಬಂಧನ ಮಾರ್ಗಸೂಚಿಗಳಿವು: ತಪ್ಪದೇ ಪಾಲಿಸಿ

|

ಬೆಂಗಳೂರು, ಮಾರ್ಚ್ 18: ಕೊರೊನಾ ರೋಗಿಗಳನ್ನು ದಿಗ್ಬಂಧನದಲ್ಲಿಡಲಾಗಿದೆ ಎನ್ನುವುದನ್ನು ಕೇಳುತ್ತೇವೆ. ಆದರೆ ಗೃಹ ದಿಗ್ಬಂಧನ ಎಂದರೇನು ಎನ್ನುವುದಕ್ಕೆ ಸಾಕಷ್ಟು ಮಂದಿಯಲ್ಲಿ ಉತ್ತರವಿಲ್ಲ

ಕೇವಲ ರೋಗಿಗಳನ್ನು ರೂಮಿನಲ್ಲಿ ಕೂಡಿ ಹಾಕುವುದಲ್ಲ, ಅದನ್ನು ಹೊರತುಪಡಿಸಿ ಅನುಸರಿಸಬೇಕಾದ ಕ್ರಮಗಳು ಬಹಳಷ್ಟಿದೆ.

ಭಾರತದಲ್ಲಿ ಕೊರೊನಾ ಪೀಡಿತ ದಂಪತಿ ಮೇಲೆ anti-HIV ಡ್ರಗ್ಸ್ ಪ್ರಯೋಗ

ಕೊರೊನಾವನ್ನು ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಗಿದೆ. ಕೊರೊನಾ ವೈರಸ್ ಸೋಂಕಿತ ಕೆಲವು ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಕೆಲವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅದಕ್ಕೆ ಗೃಹ ಬಂಧನ ಅಥವಾ ಕೊರೊನಾ ಗೃಹ ದಿಗ್ಬಂಧನ ಎಂದು ಕರೆಯುತ್ತೇವೆ.

ಹಾಗಾದರೆ ಗೃಹ ದಿಗ್ಬಂಧನದಲ್ಲಿರುವವರು ಏನು ಮಾಡಬೇಕು, ಅವರ ಕುಟುಂಬದವರು ಅನುಸರಿಸಬೇಕಾದ ಕ್ರಮಗಳೇನು?, ಎಷ್ಟು ದಿನಗಳ ಕಾಲ ಗೃಹ ಬಂಧನದಲ್ಲಿಡಲಾಗುತ್ತದೆ.ಗೃಹ ಬಂಧನದಲ್ಲಿಡುವುದರಿಂದ ಉಪಯೋಗವೇನು?

ಕೊರೊನಾ ಸೋಂಕಿನ ರೋಗಿಗಳಿಗೆ ನೀಡುವ ಆಹಾರಗಳೇನು?

ಕೊರೊನಾ ಶಂಕಿತರು ಎಂದಾಕ್ಷಣ ಅವರನ್ನು ಗೃಹ ಬಂಧನದಲ್ಲಿಡಲಾಗುತ್ತದೆ. ಮನೆ ಬಿಟ್ಟು ಹೊರಗಡೆ ತೆರಳದಂತೆ, ಸಭೆ ಸಮಾರಂಭ, ಇನ್ನಿತರೆ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ.

ರೋಗಿಗಳು ತಿರುಗಾಡುವುದರಿಂದ ರೋಗ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನೂ ಹಲವು ಮಾರ್ಗಸೂಚಿಗಳು ಇಲ್ಲಿವೆ.

ಕೊರೊನಾ ವೈರಸ್ ಹರಡುವುದು ಹೇಗೆ?

ಕೊರೊನಾ ವೈರಸ್ ಹರಡುವುದು ಹೇಗೆ?

-ಕೊವಿಡ್ 19 ಸೋಂಕಿತರು ಒಂದೇ ಮನೆಯಲ್ಲಿದ್ದಾಗ ವೈರಸ್ ಹರಡುತ್ತದೆ

-ಕೊರೊನಾ ಸೋಂಕು ಹೊಂದಿರುವವರ ಜೊತೆ ದೈಹಿಕ ಸಂಪರ್ಕವನ್ನು ಹೊಂದುವುದು.

-ಮನೆಯಲ್ಲಿ ವೈರಸ್ ಸೋಂಕಿತರ ಜೊತೆ ಕುಳಿತು ಮಾತನಾಡುವುದು

ಗೃಹ ಬಂಧನದಲ್ಲಿರುವವರು ಅನುಸರಿಸಬೇಕಾದ ಕ್ರಮ

ಗೃಹ ಬಂಧನದಲ್ಲಿರುವವರು ಅನುಸರಿಸಬೇಕಾದ ಕ್ರಮ

- ಪ್ರತ್ಯೇಕ ಕೋಣೆಯಲ್ಲಿರಬೇಕು, ಅಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರಬೇಕು. ಒಂದೊಮ್ಮೆ ಇನ್ಯಾರಾದರೂ ಅವರ ಜೊತೆ ಇರಬೇಕೆಂದರೆ ಒಂದು ಮೀಟರ್ ಅಂತರದಲ್ಲಿರಬೇಕು.

-ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೆಯೇ ಈಗಾಗಲೇ ಅಸ್ತಮಾ,ಮಧುಮೇಹ ರೋಗಿಗಳಿದ್ದರೆ ಅವರಿಂದಲೂ ದೂರವಿರಬೇಕು.

-ಮನೆಯಲ್ಲಿ ಓಡಾಡುವುದನ್ನು ನಿಲ್ಲಿಸಬೇಕು

-ಏನೇ ಪರಿಸ್ಥಿತಿ ಬಂದರೂ ಯಾವುದೇ ಧಾರ್ಮಿ ಕಾರ್ಯಕ್ರಮ, ಶುಭ ಸಮಾರಂಭಗಳು, ಮದುವೆ ಯಾವುದಕ್ಕೂ ಭೇಟಿ ನೀಡಬಾರದು.

ಪದೇ ಪದೇ ಕೈತೊಳೆಯುತ್ತಿರಿ

ಪದೇ ಪದೇ ಕೈತೊಳೆಯುತ್ತಿರಿ

-ಪದೇ ಪದೇ ಕೈಯನ್ನು ತೊಳೆಯುತ್ತಿರಿ, ಸೋಪು, ನೀರು ಅಥವಾ ಅಲ್ಕೋಹಾಲ್ಇರುವ ಯಾವುದೇ ಸ್ಯಾನಿಟೈಸರ್ ಆಗಬಹುದು.

-ಸೋಪು, ನೀರಿನ ಲೋಟ, ಟವೆಲ್, ಬೆಡ್‌ಶೀಟ್‌ ಯಾವುದನ್ನೂ ಶೇರ್ ಮಾಡಬೇಡಿ, ನಿಮ್ಮ ವಸ್ತುಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳಿ.

-ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿ, ಪ್ರತಿ 8-10 ಗಂಟೆಗೊಮ್ಮೆ ಮಾಸ್ಕ್ ಬದಲಾಯಿಸಿ. ಯೂಸ್ ಆಂಡ್ ಥ್ರೋ ಮಾಸ್ಕ್ ಯಾವುದೇ ಕಾರಣಕ್ಕೂ ಮರು ಬಳಕೆ ಬೇಡ.

-ಕಫ, ಶೀತ,ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ.

ಕೊರೊನಾ ಸೋಂಕಿತರಿರುವ ಕುಟುಂಬ ಅನುಸರಿಸಬೇಕಾದ ಕ್ರಮ

ಕೊರೊನಾ ಸೋಂಕಿತರಿರುವ ಕುಟುಂಬ ಅನುಸರಿಸಬೇಕಾದ ಕ್ರಮ

-ಕೊರೊನಾ ವೈರಸ್ ಸೋಂಕಿತ ಇರುವ ಕೊಠಡಿಯನ್ನು ಪದೇ ಪದೇ ಶುಚಿಗೊಳಿಸುತ್ತಿರಿ.

-ಯಾವುದೇ ಕಾರಣಕ್ಕೂ ಕೈಕುಲಕಬೇಡಿ

-ಪ್ರತಿ ಬಾರಿ ಕೈತೊಳೆಯುವಾಗ ಕೈ ಗವಸು ತೆಗೆದು ಬಳಿಕ ಕೈ ತೊಳೆಯಿರಿ

-ಹೊರಗಿನವರನ್ನು ಮನೆಗೆ ಬರಲು ಬಿಡದಿರಿ

-ವೈರಸ್ ಸೋಂಕಿತರ ಬಟ್ಟೆಯೂ ಶುಚಿಯಾಗಿರಬೇಕು, ನಿತ್ಯ ಬಳಸುವ ಸೋಪಿನಿಂದಲೇ ತೊಳೆಯಿರಿ

ಕೊರೊನಾ ಗೃಹ ದಿಗ್ಬಂಧನ ಎಷ್ಟು ದಿನ

ಕೊರೊನಾ ಗೃಹ ದಿಗ್ಬಂಧನ ಎಷ್ಟು ದಿನ

ಕೊರೊನಾ ಶಂಕಿತರು ಅಥವಾ ದೃಢಪಟ್ಟವರನ್ನು 14 ದಿನಗಳ ಕಾಲ ಗೃಹ ಬಂಧನದಲ್ಲಿಡಲಾಗುತ್ತದೆ. ಒಂದೊಮ್ಮೆ ಆ ಸಮಯದಲ್ಲೂ ಕಡಿಮೆಯಾಗದಿದ್ದರೆ ಮತ್ತೆ 14 ದಿನಗಳ ಕಾಲ ಗೃಹ ಬಂಧನದಲ್ಲಿಡಲಾಗುತ್ತದೆ.

English summary
What Are The Guidelines For Home Quarantine, instruction for contacts being home quarantine, instructions to the family members of persons being home quarantined and we are going to give information about Environmental sanitation also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X