ರಸ್ತೆಯಲ್ಲಿ ಉಗುಳಿದ್ರೆ, ಕಸ ಎಸೆದ್ರೆ ಬೀಳುತ್ತೆ ದಂಡ: ಜನರಿಗೆ ಬಿಸಿ ಮುಟ್ಟಿಸಲು ಸರ್ಕಾರದ ಕಟ್ಟುನಿಟ್ಟಿನ ರೂಲ್ಸ್

ರಸ್ತೆಯಲ್ಲಿ ಎಲ್ಲೆಂದರಲ್ಲಿ ಉಗುಳುವುದು, ಬೇಕಾಬಿಟ್ಟಿ ಕಸ ಎಸೆಯುವುದು, ನಿಷೇಧಿತ ಪ್ಲಾಸ್ಟಿಕ್ ಬಳಸುವುದು... ಇವೆಲ್ಲವೂ ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಅಂಟಿಕೊಂಡಿರುವ ದೈನಂದಿನ ಕೆಟ್ಟ ಚಟ ಎನ್ನಬಹುದು. ಆದರೆ, ಈ ಅಭ್ಯಾಸಗಳಿಗೆ ಬ್ರೇಕ್ ಹಾಕಲು ಪಶ್ಚಿಮ ಬಂಗಾಳ ಸರ್ಕಾರ ಕಠಿಣ ಹೆಜ್ಜೆ ಇಟ್ಟಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ಇದೀಗ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಇನ್ಮುಂದೆ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ತೆರಬೇಕಾಗುತ್ತದೆ. ಕೇವಲ ಉಗುಳುವುದು ಮಾತ್ರವಲ್ಲ, ಎಲ್ಲೆಂದರಲ್ಲಿ ಕಸ ಎಸೆದರೂ ದಂಡದ ಬಿಸಿ ಮುಟ್ಟಿಸಲು ಸರ್ಕಾರ ಸಜ್ಜಾಗಿದೆ. ಕೇವಲ ದಂಡ ವಸೂಲಿ ಮಾಡುವುದು ಸರ್ಕಾರದ ಉದ್ದೇಶವಲ್ಲ, ಬದಲಾಗಿ ಜನರಲ್ಲಿ ಬದಲಾವಣೆ ತರುವುದು ಇದರ ಹಿಂದಿನ ಪ್ರಮುಖ ಗುರಿಯಾಗಿದೆ.

West Bengal Imposes Fines For Spitting Littering amp amp Plastic Use To Boost Urban Cleanliness Drive

ಕಸ ಎಸೆದರೆ ದಂಡ: ಯಾವ ತಪ್ಪಿಗೆ ಎಷ್ಟು ದಂಡ?

ನಗರಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವೆ ಅಗ್ನಿಮಿತ್ರಾ ಪಾಲ್ ಅವರು ಈ ಹೊಸ ನಿಯಮಗಳ ಜಾರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಹೊಸ ನಿಯಮದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ. ಅದೇ ರೀತಿ ರಸ್ತೆಯಲ್ಲಿ ಕಸ ಎಸೆದರೆ, ಬಯಲು ಶೌಚಾಲಯ (ಮೂತ್ರ ವಿಸರ್ಜನೆ) ಮಾಡಿದರೆ ಹಾಗೂ 125 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಸಿಂಗಲ್ ಯೂಸ್ ಪ್ಲಾಸ್ಟಿಕ್ ಕವರ್ ಬಳಸಿದರೆ 200 ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಗಿದೆ.

ವಾಹನಗಳಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ಕಸ ಎಸೆಯುವ ಮುನ್ನ ಹಾಗೂ ಎಲ್ಲೆಂದರಲ್ಲಿ ಉಗುಳುವ ಮುನ್ನ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಪ್ಲಾಸ್ಟಿಕ್ ನಿಷೇಧ ಹಾಗೂ ಜನರಿಗೆ ಪರ್ಯಾಯ ವ್ಯವಸ್ಥೆ

ಕೇವಲ ಕಟ್ಟುನಿಟ್ಟಾಗಿ ದಂಡ ವಿಧಿಸಿ ಸುಮ್ಮನಾಗದೆ, ಜನರಿಗೆ ಪರ್ಯಾಯ ವ್ಯವಸ್ಥೆಗಳನ್ನ ಕಲ್ಪಿಸಲೂ ರಾಜ್ಯ ಸರ್ಕಾರ ಮುಂದಾಗಿದೆ. ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡುವ ಉದ್ದೇಶದಿಂದ ಮಾರುಕಟ್ಟೆ ಪ್ರದೇಶಗಳಲ್ಲಿ ವೆಂಡಿಂಗ್ ಯಂತ್ರಗಳನ್ನ ಅಳವಡಿಸಲು ನಿರ್ಧರಿಸಲಾಗಿದೆ.

ಪರಿಸರ ಸ್ನೇಹಿಯಾದ ಜೋಳದ ಗರಿಯಿಂದ ಮಾಡಿದ ಬ್ಯಾಗ್‌ಗಳನ್ನು ಕೇವಲ 1 ರೂಪಾಯಿಗೆ ಹಾಗೂ ಬಟ್ಟೆಯ ಬ್ಯಾಗ್‌ಗಳನ್ನ 5 ರಿಂದ 10 ರೂಪಾಯಿಗೆ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ ಪ್ಲಾಸ್ಟಿಕ್ ಉತ್ಪಾದಕರಿಗೂ ನಿಯಮಾನುಸಾರ ಪರಿಸರ ಸ್ನೇಹಿ ಪ್ಲಾಸ್ಟಿಕ್ ಉತ್ಪಾದಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ಇದರಿಂದಾಗಿ ನಿಧಾನವಾಗಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳ ಹಾವಳಿ ತಗ್ಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ.

ದಂಡ ಪ್ರಯೋಗದ ಜೊತೆಜೊತೆಗೆ ಮೂಲಸೌಕರ್ಯಗಳನ್ನ ಹೆಚ್ಚಿಸಲು ಸರ್ಕಾರ ಒತ್ತು ನೀಡಿದೆ. ಮಾರುಕಟ್ಟೆ, ರೈಲು ನಿಲ್ದಾಣದಂತಹ ಪ್ರಮುಖ ಜನದಟ್ಟಣೆಯ ಪ್ರದೇಶಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಅಲ್ಲದೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದಲ್ಲದೆ, ಮನೆಮನೆಗಳಿಂದ ಕಸ ಸಂಗ್ರಹಿಸುವಾಗ ಒಣ ಕಸ ಹಾಗೂ ಹಸಿ ಕಸ ಎಂದು ಪ್ರತ್ಯೇಕಿಸಿ ನೀಡುವಂತೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

2019ರ ಮುನ್ಸಿಪಲ್ ಕಾಯ್ದೆ ತಿದ್ದುಪಡಿ ಅನ್ವಯ ಈ ಹಿಂದೆಯೂ ಉಗುಳುವವರ ವಿರುದ್ಧ 1,000 ರೂಪಾಯಿಯವರೆಗೆ ಹಾಗೂ ಕೋಲ್ಕತ್ತಾದಲ್ಲಿ ಅಕ್ರಮವಾಗಿ ಕಸ ಸುರಿಯುವವರ ವಿರುದ್ಧ 50 ರೂಪಾಯಿಯಿಂದ 5,000 ರೂಪಾಯಿವರೆಗೆ ದಂಡ ವಿಧಿಸುವ ನಿಯಮಗಳಿದ್ದವು. ಆದರೆ ಈಗ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.

ಕೇವಲ ಅಭಿಯಾನಗಳಿಂದ ಮಾತ್ರ ನಗರ ಸ್ವಚ್ಛವಾಗುವುದಿಲ್ಲ, ಬದಲಾಗಿ ಪ್ರತಿಯೊಬ್ಬ ನಾಗರಿಕನೂ ತನ್ನ ದೈನಂದಿನ ಅಭ್ಯಾಸಗಳನ್ನ ಬದಲಿಸಿಕೊಂಡಾಗ ಮಾತ್ರ ಸ್ವಚ್ಛ ನಗರ ಎಂಬ ಕನಸು ನನಸಾಗಲು ಸಾಧ್ಯ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+