India Weather update: ದಕ್ಷಿಣ ಭಾರತಕ್ಕೆ ಭಾರೀ ಮಳೆ, ಉತ್ತರದಲ್ಲಿ ತೀವ್ರ ತಾಪಮಾನದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ನವದೆಹಲಿ, ಮೇ. 18: ಈ ತಿಂಗಳ ಆರಂಭದಿಂದಲೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುತ್ತಿದೆ. ಭೀಕರ ಬೇಸಿಗೆಯಿಂದ ಬಳಲಿದ್ದ ರಾಜ್ಯಗಳಿಗೆ ವರುಣ ತಂಪೆರೆದಿದ್ದಾರೆ. ತುಂತುರು ಮಳೆ ಸುರಿಸಲು ಆರಂಭಿಸಿದ್ದ ಮಳೆರಾಯ ಈಗ ಕೊಡದಲ್ಲಿ ಸುರಿಯುತ್ತಿದ್ದಾನೆ. ಇದೇ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ.

ಭಾರತೀಯ ಹವಾಮಾನ ಇಲಾಖೆ ದಕ್ಷಿಣ ಭಾರತದ ತಮಿಳುನಾಡು, ಕೇರಳ ಮತ್ತು ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಕನಿಷ್ಠ ಇನ್ನೂ ಐದು ದಿನಗಳ ಕಾಲ ಶಾಖದ ಅಲೆಗಳು ಬೀಸಲಿವೆ ಎಂದು ಮುನ್ನೆಚ್ಚರಿಕೆ ನೀಡಿದೆ.

Weather update IMD predicts heavy rainfall in Tamil Nadu Kerala and southern Karnataka

ದಕ್ಷಿಣದಲ್ಲಿ ಮುಂದಿನ ಐದು ದಿನ ಭಾರೀ ಮಳೆ

ದಕ್ಷಿಣ ಭಾರತದ ತಮಿಳುನಾಡು, ಕೇರಳ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮುಂದಿನ ಐದು ದಿನಗಳಲ್ಲಿ ಸಾಧಾರಣ ಮಳೆಯಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹಿರಿಯ ಐಎಂಡಿ ವಿಜ್ಞಾನಿ ಡಾ. ನರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ನಿರಂತರವಾಗಿ ಬೀಸುತ್ತಿರುವ ಪಾಶ್ಚಿಮಾತ್ಯ ಅಡಚಣೆಗಳು ಭಾರತದ ಮೇಲೆ ಪ್ರಭಾವ ಬೀರಿವೆ ಎಂದಿದ್ದಾರೆ.

ಇನ್ನು, ವಾಯುವ್ಯ ಭಾರತದ ಮೇಲೂ ಪ್ರಭಾವವಾಗಿದ್ದು, ಇದರ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಭಾಗಗಳಲ್ಲಿ ಪ್ರತ್ಯೇಕವಾದ ಮಳೆಯಾಗುತ್ತದೆ. ಇದರಿಂದಾಗಿ ತಾಪಮಾನವು ತುಲನಾತ್ಮಕವಾಗಿ ಮಧ್ಯಮ ಸ್ಥಿತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

Weather update IMD predicts heavy rainfall in Tamil Nadu Kerala and southern Karnataka

ಉತ್ತರದಲ್ಲಿ ಮುಂದಿನ ಐದು ದಿನಗಳವರೆಗೆ ಬಿಸಿಗಾಳಿ

ಹವಾಮಾನ ಇಲಾಖೆಯ ಹವಾಮಾನ ಸಲಹೆಯು ಮುಂದಿನ ಐದು ದಿನಗಳವರೆಗೆ ವಾಯುವ್ಯ ಭಾರತ ಮತ್ತು ಬಿಹಾರದ ಬಯಲು ಪ್ರದೇಶಗಳಲ್ಲಿ ತೀವ್ರ ಶಾಖದ ತರಂಗ ಪರಿಸ್ಥಿತಿಗಳಿಗೆ ಬಿಸಿಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಹೆಚ್ಚುವರಿಯಾಗಿ, ಪೂರ್ವ ಮತ್ತು ಮಧ್ಯ ಭಾರತದಲ್ಲಿ ಅಂದರೆ ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಮೇ 18 ರಿಂದ ಶಾಖದ ಅಲೆಯ ಪರಿಸ್ಥಿತಿ ಪ್ರಾರಂಭವಾಗುತ್ತದೆ ಎಂದಿದೆ.

ಇದಲ್ಲದೆ, ದಕ್ಷಿಣ ಪೆನಿನ್ಸುಲಾರ್ ಭಾರತದಲ್ಲಿ ಮೇ 23 ರವರೆಗೆ ಪ್ರತ್ಯೇಕವಾದ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯು ಸೂಚಿಸಿದೆ. ಬಿಸಿಲಿನ ಶಾಖಕ್ಕೆ ಒಳಗಾಗಲಿರುವ ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ನಾಲ್ಕು ದಿನಗಳ ಕಾಲ ಗುಡುಗು ಸಹಿತ ಸಾಧಾರಣವಾದ ಮಳೆಯಾಗುವ ಸಂಭವವಿದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+