ಮೋದಿ ಆಗಮನಕ್ಕಾಗಿ 70 ವರ್ಷಗಳ ಪ್ರತೀಕ್ಷೆ: ಇಸ್ರೇಲ್ ಪ್ರಧಾನಿ
ಇಸ್ರೇಲ್ ಗೆ ಭೇಟಿ ನೀಡಿದ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತಾನ್ಯಹು. ನಿಮ್ಮ ಆಗಮನಕ್ಕಾಗಿ 70 ವರ್ಷಗಳಿಂದ ಕಾಯ್ದೆವು ಎಂದ ನೆತಾನ್ಯಹು.
ಟೆಲ್ ಅವಿವ್ (ಇಸ್ರೇಲ್), ಜುಲೈ 5: ''ನಿಮ್ಮ ಆಗಮನಕ್ಕಾಗಿ ನಾವು 70 ವರ್ಷಗಳವರೆಗೆ ಕಾದೆವು'' - ಇದು, ಇಸ್ರೇಲ್ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುತ್ತಲೇ ಅಲ್ಲಿನ ಪ್ರಧಾನ ಮಂತ್ರಿ ಬೆಂಜಮಿನ್ ನೆತಾನ್ಯಹು ಅವರ ಬಾಯಿದ ಉದುರಿದ ನುಡಿಮುತ್ತುಗಳಿವು.
ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ವಿಮಾನವು ಇಸ್ರೇಲ್ ನ ನೆಲವನ್ನು ಸ್ಪರ್ಶಿಸುತ್ತದ್ದಂತೆ ಹರ್ಷೋತ್ಸಾಹದಿಂದ ಪ್ರಧಾನಿಯವರನ್ನು ಸ್ವಾಗತಿಸಲು ಬಂದ ಅಲ್ಲಿನ ಪ್ರಧಾನಿ ಬೆಂಜಮಿನ್ ಅವರು ನೆತಾನ್ಯಾಹು ಅವರು ಮೋದಿಯವರನ್ನು ಸ್ವಾಗತಿಸುತ್ತಾ ''ಈ ಭೇಟಿ ದ್ವಿಪಕ್ಷೀಯ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ಹೊಸ ಕಾಂತ್ರಿ ಆರಂಭಿಸುವಂಥ ಭೇಟಿ'' ಎಂಬರ್ಥದ ಮಾತುಗಳನ್ನಾಡಿದರು.

ಮೋದಿಯವರ ವಿಮಾನಕ್ಕೆ ಜೋಡಿಸಲಾಗಿದ್ದ ಮೆಟ್ಟಿಲುಗಳ ಕೆಳಭಾಗದಲ್ಲೇ ನಿಂತಿದ್ದ ನೆತಾನ್ಯಹು, ಮೋದಿಯವರನ್ನು ಸ್ವಾಗತಿಸಿದ ರೀತಿ, ಅವರ ಆತ್ಮೀಯತೆಯನ್ನು ಎತ್ತಿ ತೋರಿಸುತ್ತತ್ತು.
ಹಿಂದಿಯಲ್ಲೇ ಮಾತನಾಡಿ ಮೋದಿಯವರನ್ನು ಸ್ವಾಗತಿಸಿದರು ನೆತಾನ್ಯಹು. ''ಆಪ್ ಕಾ ಸ್ವಾಗತ್ ಹೇ ಮೇರೆ ದೋಸ್ತ್'' ಎಂದು ಮೋದಿಯವರನ್ನು ಸ್ವಾಗತಿಸಿದಾಗ, ಮೋದಿಯವರೂ ಹೀಬ್ರೂ ಭಾಷೆಯಲ್ಲೇ ''ಶಾಲೊಮ್'' (ಧನ್ಯವಾದ) ಎಂದು ಉತ್ತರಿಸಿದ್ದು ವಿಶೇಷವಾಗಿತ್ತು.












Click it and Unblock the Notifications