ಸಿಎಎ ಬೇಡ, ಪಿಎಎ ಜಾರಿಗೆ ತನ್ನಿ: ಕೇಂದ್ರಕ್ಕೆ ಹೊಸ ಬೇಡಿಕೆ
ಬೆಂಗಳೂರು, ಜನವರಿ 06: ಸಿಎಎ (ಪೌರತ್ವ ಕಾಯ್ದೆ) ಪರ ಮತ್ತು ವಿರುದ್ಧ ಪ್ರತಿಭಟನೆಗಳು ದೇಶದಲ್ಲಿ ಕಾವು ಕಳೆದುಕೊಳ್ಳುತ್ತಿಲ್ಲ, ಬದಲಿಗೆ ದಿನೇ-ದಿನೇ ಹೆಚ್ಚಾಗುತ್ತಲೇ ಇದೆ.
ಸಿಎಎ ವಿರುದ್ಧ ಜನ ಬೀದಿಗಿಳಿದಿರುವ ಸಮಯದಲ್ಲಿಯೇ 'ಸಿಎಎ ಬೇಡ ಪಿಎಎ ಕೊಡಿ' ಎಂಬ ಬೇಡಿಕೆಯೊಂದು ನಿಧಾನಕ್ಕೆ ಮುನ್ನೆಲೆಗೆ ಬರುತ್ತಿದೆ.
ಹೌದು, ಸಿಟಿಜನ್‌ಶಿಪ್ ಅಮೆಂಡ್‌ಮೆಂಟ್ ಆಕ್ಟ್ ಬದಲಿಗೆ ಪಾರ್ಲಿಮೆಂಟ್ ಅಮೆಂಡ್‌ಮೆಂಟ್ ಆಕ್ಟ್ (ಪಿಎಎ) ಜಾರಿಗೊಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ.

ಪಿಎಎ ಬೇಕೆಂದು ಒತ್ತಾಯಿಸುತ್ತಿರುವವ ಪ್ರಕಾರ, ಅಪರಾಧ ಹಿನ್ನೆಲೆ ಇರುವ, ಜನರಿಗಾಗಿ ಕೆಲಸ ಮಾಡದ ಸಂಸದರನ್ನು ಹೊರಗೆ ಹಾಕುವುದೇ ಪಿಎಎ, ಕೂಡಲೇ ಇದನ್ನು ಜಾರಿಗೆ ತನ್ನಿ ಎಂದು ಒತ್ತಾಯ ಮಾಡಲಾಗುತ್ತಿದೆ.
ಸಿಎಎ ವಿರೋಧಿಗಳೇ ಈ ರೀತಿಯ ಒತ್ತಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿದ್ದಾರೆ. ದೇಶದ ಭದ್ರತೆಗಾಗಿ ಸಿಎಎ ತರುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ, ಆದರೆ ಕ್ರಿಮಿನಲ್ ಅಪರಾಧ ಹಿನ್ನೆಲೆ ಉಳ್ಳವರು ಹಲವು ಮಂದಿ ಪಾರ್ಲಿಮೆಂಟ್ ನಲ್ಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಆಯ್ಕೆ ಆಗಿರುವ 543 ಸಂಸದರಲ್ಲಿ ಶೇ 50 ಕ್ಕೂ ಹೆಚ್ಚು ಮಂದಿಗೆ ಕ್ರಿಮಿನಲ್ ಹಿನ್ನೆಲೆ ಇದೆ.











Click it and Unblock the Notifications