ಬಿಜೆಪಿ-ಜೆಡಿಯು ಮೈತ್ರಿಯ ಸುಳಿವು ನೀಡಿದ ಸುಶೀಲ್ ಮೋದಿ

Subscribe to Oneindia Kannada

ಪಾಟ್ನಾ, ಜುಲೈ 26: "ಬಿಹಾರದಲ್ಲಿ ಮಧ್ಯಂತರ ಚುನಾವಣೆಗೆ ನಮ್ಮ ಬೆಂಬಲವಿಲ್ಲ," ಎಂದು ಬಿಹಾರ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಮುಂದೇನು?

BIG NEWS: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಜೆಪಿ ಮತ್ತು ಜೆಡಿಯು ಮೈತ್ರಿಯ ಸೂಚನೆಗಳು ಸುಶೀಲ್ ಕುಮಾರ್ ಮೋದಿ ಮಾತಿನಲ್ಲಿ ಕಾಣಿಸಿಕೊಂಡಿವೆ. ಸದ್ಯ ಬಿಹಾರದಲ್ಲಿ ಮೈತ್ರಿ ಸರಕಾರ ನಡೆಸುವ ಆಯ್ಕೆ ಬಿಜೆಪಿ ಮತ್ತು ಜೆಡಿಯುಗೆ ಮಾತ್ರ ಇದೆ. ಹೀಗಾಗಿ ಸುಶೀಲ್ ಕುಮಾರ್ ಮೋದಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

'We are not in favour of mid-term elections in Bihar' : Sushil Kumar Modi

"ಭ್ರಷ್ಟಾಚಾರದ ಜತೆ ಬಿಹಾರ ಮುಖ್ಯಮಂತ್ರಿ ಹೊಂದಾಣಿಕೆ ಮಾಡಿಕೊಂಡಿಲ್ಲ ಮತ್ತು ಆರ್.ಜೆ.ಡಿ ಮುಂದೆ ತಲೆ ಬಾಗಿಲ್ಲ ಎಂಬುದು ನಮಗೆ ಸಂತಸ ತಂದಿದೆ," ಎಂದು ಒಂದು ಕಾಲದಲ್ಲಿ ನಿತೀಶ್ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸುಶೀಲ್ ಮೋದಿ ಹೇಳಿದ್ದಾರೆ.

ಭಿನ್ನಾಭಿಪ್ರಾಯ ಮರೆತು ಕೈಜೋಡಿಸೋಣ, ನಿತೀಶ್ ಗೆ ಮೋದಿ ಕರೆ

S M Krishna Officially Joins BJP In The Presence Of Amit Shah

ಇನ್ನು ಭವಿಷ್ಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೂರು ಜನರ ಆಕ್ಷನ್ ಕಮಿಟಿಯನ್ನು ಬಿಜೆಪಿ ರಚನೆ ಮಾಡಿರುವುದಾಗಿ ಸುಶೀಲ್ ಮಾಹಿತಿ ನೀಡಿದ್ದಾರೆ. ನಿತೀಶ್ ಕುಮಾರ್ ರಾಜೀನಾಮೆ ಬೆನ್ನಿಗೆ ಪಾಟ್ನಾದಲ್ಲಿ ಬಿಜೆಪಿ ಶಾಸಕರ ಸಭೆ ನಡೆಯುತ್ತಿದ್ದು ಅಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
'We are not in favour of mid-term elections in Bihar' said Bihar BJP leader Sushil Kumar Modi after Nitish Kumar's resignation.
Please Wait while comments are loading...