ಜೇಟ್ಲಿ ಮುಖಕ್ಕೆ ಉಗಿಬೇಕು ಅನ್ನಿಸ್ತಿದೆಯಂತೆ ಆಮ್ ಆದ್ಮಿಗೆ!

ನವದೆಹಲಿ, ಜ.21: ಅಕ್ಷರಶಃ ರಾಷ್ಟ್ರ ರಾಜಧಾನಿಯಲ್ಲಿ ಅರಾಜಕತೆ ಸೃಷ್ಟಿಸಿರುವ ಆಮ್ ಆದ್ಮಿ ಪಕ್ಷವು ವ್ಯಾಪಕ ಟೀಕೆಗೆ ಗುರಿಯಾಗಿದೆ. ಇಡೀ ಭಾರತ ದೆಹಲಿಯಲ್ಲಿನ ಪ್ರಹಸನ ಕಂಡು ನಗೆಯಾಡುತ್ತಿದೆ. ಇದೇನಿದು ಮುಖ್ಯಮಂತ್ರಿಯೇ (ಅರವಿಂದ್ ಕೇಜ್ರೀವಾಲಾ) ರೋಡಿಗಿಳಿದು ಪ್ರತಿಭಟನೆ ನಡೆಸೋದಾ!? ಪಕ್ಷ (ಎಎಪಿ) ಬೇಕಾದರೆ ಪ್ರತಿಭಟನೆಗಿಳಿಯಲಿ ಆದರೆ ಇದೇನಿದು ಇಡೀ ಸರಕಾರವೇ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಆಶ್ಚರ್ಯಪಡುತ್ತಿದ್ದಾರೆ.

ಈ ಮಧ್ಯೆ Aam Adami Party ಪಕ್ಷದ ನಾಯಕರು ಬಾಲ ಸುಟ್ಟವರಂತೆ ತಮ್ಮನ್ನು ಮತ್ತು ತಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಬಯಸುತ್ತಿರುವ ಜನರ ಮೇಲೆ ಕಿಡಿ ಕಾರಿದ್ದಾರೆ. ಅದೂ ಶಿಷ್ಟಾಚಾರದ ಎಲ್ಲೆ ಮೀರಿ, ವಿವಾದಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲಬು ಸ್ಯಾಂಪಲ್ ಗಳು ಹೀಗಿವೆ:

ಕಾನೂನು ಸಚಿವ ಸೋಮನಾಥ ಭಾರ್ತಿ

ಕಾನೂನು ಸಚಿವ ಸೋಮನಾಥ ಭಾರ್ತಿ

ದೆಹಲಿಯ ಖುದ್ದು ಕಾನೂನು ಸಚಿವ ಸೋಮನಾಥ ಭಾರ್ತಿ ಏನು ಹೇಳಿದ್ದಾರೋ ಸ್ವಲ್ಪ ಕೇಳಿಸಿಕೊಳ್ಳಿ - ''ಬಿಜೆಪಿ ನಾಯಕ ಅರುಣ್ ಜೇಟ್ಲಿ ಮತ್ತು ಹಿರಿಯ ಅಡ್ವೊಕೇಟ್ ಹರೀಶ್ ಸಾಲ್ವೆ ಇದ್ದಾರಲ್ಲಾ ಅವರ ಮುಖದ ಮೇಲೆ ಉಗಿಯ ಬೇಕು ಅನ್ನಿಸ್ತಿದೆ ನನಗೆ. ನಿಮಗೆ ಎಚ್ಚರಿಕೆ ನೀಡ್ತೀನಿ, ಕೇಳಿ. ಜನ ನಿಮ್ಮನ್ನು ಬಡಿದುಹಾಕುತ್ತಾರೆ, ತಿಳ್ಕೊಳ್ಳಿ''

ಸ್ವತಃ ಮುಖ್ಯಮಂತ್ರಿ ಅರವಿಂದ್ ಏನಂದಿದ್ದಾರೆ ಗೊತ್ತಾ?

ಸ್ವತಃ ಮುಖ್ಯಮಂತ್ರಿ ಅರವಿಂದ್ ಏನಂದಿದ್ದಾರೆ ಗೊತ್ತಾ?

ಸ್ವತಃ ಮುಖ್ಯಮಂತ್ರಿಯೇ (ಅರವಿಂದ್ ಕೇಜ್ರೀವಾಲಾ) ನಿನ್ನೆ ಏನಂದಿದ್ದಾರೆ ಗೊತ್ತಾ? - '' ನಾನು ಅರಾಜಕತಾವಾದಿಯಂತೆ. ಹೌದು ನಾನು ಅಂತಹವನೇ! ಗೃಹ ಸಚಿವ ಶಿಂದೆಗಾಗಿ ನಾನು ಈ ಅರಾಜಕತೆಯನ್ನು ಸೃಷ್ಟಿಸುತ್ತೇನೆ ಗೊತ್ತಾ?''

ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಪತ್ರಕರ್ತರಿಗೆ

ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಪತ್ರಕರ್ತರಿಗೆ

ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ (NDTV ವರದಿಗಾರನಿಗೆ) - '' ಅಲ್ಲಿ ಯುವತಿಯನ್ನು ಸುಡಲಾಗಿದೆ. ನೀವು ನೋಡಿದರೆ ಶಾಂತಿಯುತ ಪ್ರತಿಭಟನೆ ನಡೆಸಿ ಅನ್ನುತ್ತಿದ್ದೀರಿ. ಸ್ವಲ್ಪ ಇರಿ ನಾಳೆ ನಿಮ್ಮ ಮಗಳನ್ನೂ ಸುಡುತ್ತಾರೆ. ಆಗ ಗೊತ್ತಾಗುತ್ತದೆ ನಿಮಗೆ ಇದರ ಕಾವು''

ನಾವೇನು ಮೂರ್ಖರೇ? - ಎಎಪಿಯ ಸದಸ್ಯ ಅಶುತೋಷ್

ನಾವೇನು ಮೂರ್ಖರೇ? - ಎಎಪಿಯ ಸದಸ್ಯ ಅಶುತೋಷ್

ಮಾಜಿ ಪತ್ರಕರ್ತ, ಎಎಪಿಯ ಸದಸ್ಯ ಅಶುತೋಷ್ ಪೊಲೀಸ್ ಅಧಿಕಾರಿಗಳನ್ನುದ್ದೇಶಿ ಸತತವಾಗಿ ಬೊಂಬಡಾ ಹೊಡೆದಿದ್ದು ಹೀಗೆ - '' ಏನೆಂದುಕೊಂಡಿದ್ದೀರಿ? ನಾವೇನು ಮೂರ್ಖರೇ?''

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+