ಪೊಲೀಸ್ ವೆರಿಫಿಕೇಶನ್ ಇಲ್ಲದೇ ಕೈಗೆ ಪಾಸ್ ಪೋರ್ಟ್
ನವದೆಹಲಿ, ಜನವರಿ, 28: ಪಾಸ್ ಪೋರ್ಟ್ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದವರು ಇನ್ನು ಮುಂದೆ ನಿಟ್ಟುಸಿರು ಬಿಡಬಹುದಾಗಿದೆ. ಸಾಮಾನ್ಯ ದರ್ಜೆಯಡಿ ನೀಡುವ ಪಾಸ್ ಪೋರ್ಟ್ ಪ್ರಕ್ರಿಯೆಯನ್ನು ಸರಳ ಮಾಡಿರುವ ಕೇಂದ್ರ ಸರ್ಕಾರ ಪೊಲೀಸ್ ವೆರಿಫಿಕೇಶನ್ ಇಲ್ಲದೆಯೇ ಕೆಲಸ ಮಾಡಿಕೊಡುವುದಾಗಿ ಹೇಳಿದೆ.
ಸಾಮಾನ್ಯ ದರ್ಜೆಯ ಅರ್ಜಿದಾರರಿಗೆ ಆದ್ಯತೆಯ ಮೇರೆಗೆ ಪಾಸ್ ಪೋರ್ಟ್ ಜಾರಿ ಮಾಡಲಿದೆ ಮತ್ತು ಪೊಲೀಸ್ ಪರಿಶೀಲನೆ ನಿಗದಿತ ದಿನಾಂಕವನ್ನು ತಿಳಿಸಲಿದೆ.[10 ದಿನದಲ್ಲಿ ಪಾಸ್ ಪೋರ್ಟ್ ಪಡೆಯುವುದು ಹೇಗೆ]

ಅರ್ಜಿ ಸಲ್ಲಿಕೆ ವೇಳೆ ನೀವು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತು ಯಾವುದೇ ಕ್ರಿಮಿನಲ್ ಕೇಸು ಬಾಕಿ ಇಲ್ಲ ಎಂದು ಬರೆದು ಅಫಿಡವಿಟ್ ನೀಡಬೇಕಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆ ಆನ್ ಲೈನ್ ನಲ್ಲಿ ಸರಿಯಾಗಿ ನಮೂದಾಗಿದ್ದರೆ ಪೊಲೀಸರ ಪರಿಶೀಲನೆ ನಂತರ ಅಫಿಡವಿಟ್ ನ್ನು ಆದ್ಯತೆ ಮೇರೆಗೆ ಪರಿಶೀಲನೆ ಮಾಡಲಾಗುತ್ತದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]
ಸರಳವಾಗಿ ಹೇಳಬೇಕೆಂದರೆ ನೀವು ದಾಖಲೆ ಸಲ್ಲಿಸಿದ ಕೆಲ ದಿನಗಳಲ್ಲಿ ಪಾಸ್ ಪೋರ್ಟ್ ಲಭ್ಯವಾಗುತ್ತದೆ. ನಂತರ ಯಾವಾಗಲಾದರೂ ಪೊಲೀಸ್ ವೆರಿಫಿಕೇಶನ್ ಮಾಡಲಾಗುತ್ತದೆ. ಆದರೆ ನಿಮ್ಮ ಆಧಾರ್ ಸಂಖ್ಯೆ ನೋಂದಙಣಿಯಾಗಿರುವುದು ಬಹಳ ಮುಖ್ಯ.
ಅಭ್ಯರ್ಥಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ 10 ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿತ್ತು. ಅರ್ಜಿ ಸಲ್ಲಿಸಿ 3 ದಿನಗಳೊಳಗಾಗಿ ಅಭ್ಯರ್ಥಿಗೆ ಸಚಿವಾಲಯದೊಂದಿಗೆ ಮಾತನಾಡಲು ಅವಕಾಶ ದೊರೆಯುತ್ತದೆ. ಉಳಿದ 7 ದಿನಗಳಲ್ಲಿ ಪಾಸ್ ಪೋರ್ಟ್ ಕೈ ಸೇರುತ್ತದೆ ಎಂದು ತಿಳಿಸಿತ್ತು. ಇದೀಗ ಪೊಲೀಸ್ ವೆರಿಫಿಕೇಶನ್ ಕ್ರಮವನ್ನು ಸರಳ ಮಾಡಿದೆ.












Click it and Unblock the Notifications