ಅರುಣಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧ: ಮೋದಿ

Posted By:
Subscribe to Oneindia Kannada

ಇಟಾನಗರ, ಫೆಬ್ರವರಿ 15: ಅರುಣಾಚಲಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ನಮ್ಮ್ ಮೊದಲ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತ್ರಿಪುರದಲ್ಲಿ ಫೆ.18 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಪ್ರಧಾನಿ ಮೋದಿಯವರು ತ್ರಿಪುರಾಕ್ಕೆ ಭೇಟಿ ನೀಡಿದ ನಂತರ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಹಲವು ಯೋಜನೆಗಳ ಚಾಲನೆ ನೀಡಿ ಮಾತನಾಡಿದರು.

ಫೆ.18ರಂದು ಮೈಸೂರಿಗೆ ಬರುತ್ತಾರೆ ಪ್ರಧಾನಿ ಮೋದಿ

ಅರುಣಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮ ಬೆಳೆಸುವ ಅಗತ್ಯವಿದೆ. ಅದಕ್ಕೆಂದೇ ನಾನು ಹಲವರಿಗೆ ಅರುಣಾಚಲ ಪ್ರದೇಶದಲ್ಲಿ ಮೀಟಿಂಗ್ ಮತ್ತು ಸಮಾವೇಶಗಳನ್ನು ಮಾಡುವ ಸಲಹೆ ನೀಡಿದ್ದೇನೆ. ದೆಹಲಿ ಮತ್ತು ಮುಂಬೈಯ ಹಲವು ಉದ್ಯಮಿಗಳು, ಇನ್ನಿತರರು ಈ ಮಾತನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.

Want to develop tourism in Arunachal Pradesh: PM Modi

ಯಾವಾಗಲೂ ಮೀಟಿಂಗ್ ಗಳು ದೇಶದ ರಾಜಧಾನಿ ದೆಹಲಿಯಲೇ ನಡೆಯಬೇಕೆಂದಿಲ್ಲ. ನಾವು ಈಶಾನ್ಯ ರಾಜ್ಯಗಳ ಬಗ್ಗೆಯೂ ಚಿಂತಿಸಬೇಕಿದೆ. ನಾನು ಶಿಲ್ಲಾಂಗ್ ಮತ್ತು ಸಿಕ್ಕಿಂ ಗಳಲ್ಲೂ ಹಲವು ಮೀಟಿಂಗ್ ಗಳಲ್ಲಿ ಭಾಗವಹಿಸಿದ್ದೇನೆ ಎಂದು ಮೋದಿ ಹೇಳಿದರು.

ಅರುಣಾಚಲ ಪ್ರದೇಶದ ಸಾಂಪ್ರದಾಯಿಕ ಧಿರಿಸು ತೊಟ್ಟ ಮೋದಿಯವರು, ವಾರಕ್ಕೊಮ್ಮೆಯಾದರೂ ಕೇಂದ್ರದ ಸಚಿವರು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಲೇಬೇಕು ಎಂದು ನಾನು ಮೊದಲೇ ಹೇಳಿದ್ದೇನೆ. ಆ ಕೆಲಸ ನಡೆಯುತ್ತಿದೆ ಎಂಬುದು ಸಂತಸದ ವಿಷಯ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Feb 15th said the Centre wants to develop tourism in Arunachal Pradesh. Addressing a public rally here, Prime Minister Modi said, "We want to improve tourism in Arunachal. I will tell people to come to Arunachal Pradesh for their meetings and conferences. Lot of people does it in Delhi and Mumbai. I will tell them to explore the land of Arunachal Pradesh," Prime Minister Modi said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ