ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಜು.18ರಂದು ಅವಿಶ್ವಾಸ ನಿರ್ಣಯ ಮಂಡನೆ

By Gururaj
|
Google Oneindia Kannada News

ನವದೆಹಲಿ, ಜುಲೈ 17 : ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ವಿರೋಧ ಪಕ್ಷಗಳು ಸಜ್ಜಾಗಿವೆ. ಜು.18ರ ಬುಧವಾರದಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದೆ.

ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಹೇಳಿಕೆ ನೀಡಿದ್ದಾರೆ. 'ಸೋಮವಾರ ರಾತ್ರಿ 12 ಪಕ್ಷಗಳ ಜೊತೆ ಸಭೆ ನಡೆಸಿದ್ದು, ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಲಿದ್ದೇವೆ' ಎಂದು ಹೇಳಿದ್ದಾರೆ.

ಕೂಸಿಗೆ ಮುನ್ನವೇ ಕುಲಾವಿ: ಮೋದಿ ವಿರುದ್ದ ಪಿಎಂ ರೇಸಿಗೆ ಮತ್ತೊಂದು ಹೆಸರುಕೂಸಿಗೆ ಮುನ್ನವೇ ಕುಲಾವಿ: ಮೋದಿ ವಿರುದ್ದ ಪಿಎಂ ರೇಸಿಗೆ ಮತ್ತೊಂದು ಹೆಸರು

Vote of no confidence will move in parliament says Mallikarjun Kharge

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಹೋರಾಟಕ್ಕೂ ವಿರೋಧ ಪಕ್ಷಗಳು ಬೆಂಬಲ ನೀಡಲಿವೆ. ಲೋಕಸಭೆಯಲ್ಲಿ ಮಂಡನೆಯಾಗುವ ಅವಿಶ್ವಾಸ ನಿರ್ಣಯಕ್ಕೆ ಟಿಡಿಪಿ ಸಹ ಬೆಂಬಲ ನೀಡುವ ನಿರೀಕ್ಷೆಇದೆ. ಇಂದು ರಾತ್ರಿಯೊಳಗೆ ಮತ್ತಷ್ಟು ಪಕ್ಷಗಳ ಜೊತೆಗೂ ಕಾಂಗ್ರೆಸ್ ಮಾತುಕತೆ ನಡೆಸಲಿದೆ.

ಸಂತ ಕಬೀರನ 'ಮೋಕ್ಷ'ದ ನಾಡಲ್ಲಿ ಚುನಾವಣೆಗೆ ನಿಲ್ಲುತ್ತಾರಾ ಮೋದಿ?ಸಂತ ಕಬೀರನ 'ಮೋಕ್ಷ'ದ ನಾಡಲ್ಲಿ ಚುನಾವಣೆಗೆ ನಿಲ್ಲುತ್ತಾರಾ ಮೋದಿ?

ಟಿಡಿಪಿ ಸಂಸದರಾದ ಗಲ್ಲಾ ಜಯದೇವ್, ರವೀಂದ್ರ ಕುಮಾರ್ ಸೇರಿದಂತೆ ಹಲವು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಪಾಟ್ನಾದಲ್ಲಿ ಇಂದು ಭೇಟಿ ಮಾಡಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪತ್ರವನ್ನು ಅವರಿಗೆ ನೀಡಿದರು. ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಬೆಂಬಲ ನೀಡುವಂತೆ ಮನವಿ ಮಾಡಿದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಟಿಡಿಪಿ ಸಂಸತ್ತಿನಲ್ಲಿ ಹೋರಾಟ ನಡೆಸಲಿದೆ. ಇದಕ್ಕಾಗಿ ಬಿಜೆಪಿಯೇತರ ಪಕ್ಷಗಳ ಸಹಕಾರವನ್ನು ಕೋರಿದೆ. ವಿಶೇಷ ಸ್ಥಾನಮಾನ ನೀಡಿಲ್ಲ ಎಂಬ ಕಾರಣಕ್ಕಾಗಿಯೇ ಎನ್‌ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಬಂದಿತ್ತು.

English summary
Loksabha Congress leader Mallikarjun Kharge said that, 12 party meeting was held and we agreed upon bringing a vote of no confidence in parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X