Volcanic Eruption: 12,000 ವರ್ಷಗಳ ಬಳಿಕ ಜ್ವಾಲಾಮುಖಿ ಸ್ಫೋಟ, ಭಾರತೀಯರಿಗೂ ಎದುರಾಯ್ತು ಆಪತ್ತು...
ಮನುಷ್ಯರು ಭೂಮಿ ಮೇಲಿಂದ ನಾಶವಾಗಿ ಹೋಗುವುದು ಇನ್ನೇನು ಖಚಿತವಾಗುತ್ತಿದೆ, ಯಾಕೆ ಅಂದ್ರೆ ಭೂಮಿಗೆ ಮತ್ತು ಪ್ರಕೃತಿಗೆ ಮನುಷ್ಯರು ನೀಡುತ್ತಿರುವ ತೊಂದರೆ ಈಗ ನಾನಾ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಅದರಲ್ಲೂ ಪದೇ ಪದೇ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುವ ಕಾರಣ, ಈಗಾಗಲೇ ಸಾವಿರಾರು ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ ಮಾನವರು. ಇಂತಹ ಪರಿಸ್ಥಿತಿ ಇರುವಾಗ ವಿಪರೀತ ಮಳೆ, ವಿಪರೀತ ಚಳಿ, ವಿಪರೀತ ಬಿಸಿಲು ಮನುಷ್ಯರನ್ನು ಕಾಡುತ್ತಲೇ ಇದೆ. ಇದು ಸಾಲದು ಎಂಬಂತೆ ಇದೀಗ 12,000 ವರ್ಷಗಳ ಬಳಿಕ ಬೃಹತ್ ಜ್ವಾಲಾಮುಖಿಯೇ ದಿಢೀರ್ ಸ್ಫೋಟಗೊಂಡಿದೆ. ಇದರಿಂದ ಭಾರತಕ್ಕೂ ಅಪಾಯ ಎದುರಾಗಿದೆ...
ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಈ ವರ್ಷ ವಿಪರೀತ ಮಳೆ ಸುರಿದಿದ್ದು, ಆ ಮೂಲಕ ನೆರೆ ಹಾವಳಿಯಿಂದ ರೈತರು & ಸಾಮಾನ್ಯ ಜನರು ಕಂಗಾಲಾಗಿ ಹೋಗಿದ್ದಾರೆ. ಇದು ಸಾಲದು ಎನ್ನವಂತೆ ಹಲವು ರಾಜ್ಯಗಳಲ್ಲಿ ಬರಗಾಲ ಕೂಡ ಎದುರಾಗಿದೆ. ಹೀಗೆ ಪ್ರಾಕೃತಿಕವಾಗಿ ದೊಡ್ಡ ದೊಡ್ಡ ಸವಾಲುಗಳು ಎದುರಾಗಿರುವ ಸಮಯದಲ್ಲೇ ದಿಢೀರ್ ಜ್ವಾಲಾಮುಖಿ ಸ್ಪೋಟದ ಪರಿಣಾಮ ಭಯದ ವಾತಾವರಣ ಇದೀಗ ನಿರ್ಮಾಣವಾಗಿದೆ. ದಿಢೀರ್ 12,000 ವರ್ಷಗಳ ಬಳಿಕ ಜ್ವಾಲಾಮುಖಿ ಸ್ಫೋಟವಾಗಿದ್ದು, ಇದರಿಂದ ಭಾರತಕ್ಕೂ ಅಪಾಯ ಎದುರಾಗಿದೆ.

ಜ್ವಾಲಾಮುಖಿ ಭೀಕರ ಸ್ಫೋಟ...
ಹೌದು, ಇಥಿಯೋಪಿಯಾದ ಹೈಲಿ ಗುಬ್ಬಿ ಪರ್ವತದಲ್ಲಿ ಜ್ವಾಲಾಮುಖಿ ದಿಢೀರ್ ಸ್ಫೋಟಗೊಂಡಿದೆ. ಒಂದಲ್ಲ ಎರಡಲ್ಲ 12,000 ವರ್ಷಗಳ ಬಳಿಕ ಈ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಆಫ್ರಿಕಾದ ಇಥಿಯೋಪಿಯಾ ದೇಶದಲ್ಲಿ ಇರುವ ಹೈಲಿ ಗುಬ್ಬಿ ಪರ್ವತದ ಜ್ವಾಲಾಮುಖಿ ಮುನಿಸು ಇದೀಗ ನಮ್ಮ ದೇಶಕ್ಕೂ ಸಮಸ್ಯೆ ಮಾಡುತ್ತಿದೆ. ಭಾರತದ ಹಲವು ರಾಜ್ಯಗಳಿಗೆ ಜ್ವಾಲಾಮುಖಿ ಸ್ಫೋಟದ ನಂತರ ಉಂಟಾಗುವ ಬೂದಿಯಿಂದ ಸಮಸ್ಯೆ ಎದುರಾಗಿದ್ದು, ಈಗಾಗಲೇ ಎಚ್ಚರಿಕೆ ಸಂದೇಶವನ್ನ ಕೂಡ ರವಾನಿಸಲಾಗಿದೆ.
ಭಾರತದ ಈ ರಾಜ್ಯಗಳಲ್ಲಿ ಸಮಸ್ಯೆ...
ಇಥಿಯೋಪಿಯಾದ ಹೈಲಿ ಗುಬ್ಬಿ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ಸೃಷ್ಟಿಯಾದ ದೊಡ್ಡ ದೊಡ್ಡ ಬೂದಿಯ ಮೋಡಗಳು ಈಗ ಭಾರತ ಪ್ರವೇಶಿಸಿದ್ದು, ಗುಜರಾತ್ ಮೂಲಕ ಎಂಟ್ರಿ ಕೊಟ್ಟಿವೆ. ಹಾಗೂ ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ, ಹರಿಯಾಣ & ಪಂಜಾಬ್ ಸೇರಿ ಸುತ್ತಮುತ್ತ ಇರುವ ಪ್ರದೇಶಗಳನ್ನ ಆವರಿಸಿವೆ. ಇದರಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಸಂಜೆ 7.30 ವೇಳೆಗೆ ಬೂದಿಯ ಮೋಡಗಳು ಸಂಪೂರ್ಣ ಭಾರತವನ್ನು ದಾಟಿ ಹೊರಗೆ ಹೋಗುವ ನಿರೀಕ್ಷೆ ಇದೆ. ಹೀಗಾಗಿ ಈಗಾಗಲೇ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜ್ವಾಲಾಮುಖಿ ಬೂದಿಯಿಂದ ಅರಬ್ ದೇಶಗಳೂ ಸೇರಿ ಮಧ್ಯಪ್ರಾಚ್ಯ ಹಾಗೂ ಯುರೋಪ್‌ನಲ್ಲಿ ಕೂಡ ಸಮಸ್ಯೆ ಸೃಷ್ಟಿಯಾಗುವ ಭೀತಿ ಮೂಡಿದೆ.












Click it and Unblock the Notifications