ಮೈ ಮೇಲೆ ಸೂರ್ಯನ ಕಿರಣ ಬೀಳದಿದ್ದರೆ ಕೊರೊನಾವೈರಸ್ ಪಾಸಿಟಿವ್!

ನವದೆಹಲಿ, ಸಪ್ಟೆಂಬರ್.08: ಕೆಮ್ಮು, ನೆಗಡಿ, ಜ್ವರ, ಉಸಿರಾಟ ತೊಂದರೆ ಶ್ವಾಸಕೋಶ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಕೊರೊನಾವೈರಸ್ ಸೋಂಕು ತಗುಲುವುದು ಕನ್ಫರ್ಮ್ ಎಂಬ ವಿಷಯ ಗೊತ್ತಿದೆ. ಇದಕ್ಕಿಂತ ಭಯ ಹುಟ್ಟಿಸುವಂತಾ ವರದಿಯೊಂದು ಸಂಶೋಧನೆಯಿಂದ ಹೊರ ಬಿದ್ದಿದೆ.

Recommended Video

      ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಸಿದ್ರಾ? ಹಂಗಾದ್ರೆ.. ಗೋವಿಂದ | Oneindia Kannada

      ಸೂರ್ಯ ಕಿರಣಗಳಿಂದ ಮನುಷ್ಯರಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚಾಗುತ್ತದೆ. ಸೂರ್ಯನ ಕಿರಣಗಳಿಂದಲೇ ಮೂಳೆಗಳಲ್ಲಿ ಶಕ್ತಿ ವೃದ್ಧಿಸುವುದು ಹಾಗೂ ಮನುಷ್ಯನಲ್ಲಿನ ಕೊಬ್ಬು ಕರುಗುವುದಕ್ಕೆ ಸಹಕಾರಿ ಎಂದು ವೈದ್ಯಕೀಯ ಸಂಶೋಧನೆಗಳಿಂದ ತಿಳಿದು ಬಂದಿದೆ.

      ಇದೀಗ 'ವಿಟಮಿನ್ ಡಿ' ಕೊರತೆಯುಳ್ಳವರಲ್ಲೂ ಕೊರೊನಾವೈರಸ್ ಸೋಂಕು ಪತ್ತೆಯಾಗುತ್ತಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ವಿಟಮಿನ್ ಡಿ ಕೊರತೆಯುಳ್ಳ ಜನರಲ್ಲಿ ರೋಗ ನಿರೋಧಕ ಶಕ್ತಿಯು ಕುಗ್ಗುವುದರಿಂದ ಕೊರೊನಾವೈರಸ್ ಸೋಂಕು ಅಂಟಿಕೊಳ್ಳುವ ಅಪಾಯ ಹೆಚ್ಚಾಗಿರುವತ್ತೆದೆ ಎಂದು ವೈದ್ಯಕೀಯ ಸಂಶೋಧನಾ ವರದಿಯೊಂದು ಹೇಳುತ್ತಿದೆ.

      ಸಂಶೋಧನೆಯಲ್ಲಿ 489 ಕೊರೊನಾವೈರಸ್ ಸೋಂಕಿತರ ತಪಾಸಣೆ

      ಸಂಶೋಧನೆಯಲ್ಲಿ 489 ಕೊರೊನಾವೈರಸ್ ಸೋಂಕಿತರ ತಪಾಸಣೆ

      ಕೊರೊನಾವೈರಸ್ ಸೋಂಕು ತಗುಲುವುದಕ್ಕೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾರಣವಾಗಿರುವುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ. ಯುಚಿಕಾಗೋ ಮೆಡಿಸನ್ ನಡೆಸಿರುವ ಸಂಶೋಧನೆಯಲ್ಲಿ 483 ಕೊವಿಡ್-19 ಸೋಂಕಿತರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಕೊವಿಡ್-19 ಸೋಂಕಿತರಲ್ಲಿನ ವಿಟಮಿನ್ ಡಿ ಪ್ರಮಾಣವನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಹೊಸ ಅಧ್ಯಯನವು COVID-19 ಸೋಂಕಿಗೆ ವಿಟಮಿನ್ ಡಿ ಕೊರತೆಯ ಕಾರಣವಾಗಿರುವುದು ನಿಜ ಎಂದು ಯುಚಿಕಾಗೊ ಮೆಡಿಸಿನ್‌ನ ಹಾಸ್ಪಿಟಲ್ ಮೆಡಿಸಿನ್‌ನ ಮುಖ್ಯಸ್ಥ ಮತ್ತು ಅಧ್ಯಯನದ ಪ್ರಮುಖ ಲೇಖಕ ಡೇವಿಡ್ ಮೆಲ್ಟ್ಜರ್ ತಿಳಿಸಿದ್ದಾರೆ.

      ವಿಟಮಿನ್ ಡಿ ಇಲ್ಲದ ಜನರಲ್ಲಿ ಕೊರೊನಾವೈರಸ್ ಸೋಂಕು

      ವಿಟಮಿನ್ ಡಿ ಇಲ್ಲದ ಜನರಲ್ಲಿ ಕೊರೊನಾವೈರಸ್ ಸೋಂಕು

      ಕೊರೊನಾವೈರಸ್ ಸೋಂಕಿತರ ಪೈಕಿ ಕಳೆದ ಒಂದು ವರ್ಷಗಳ ಅವಧಿಯಲ್ಲಿ ವಿಟಮಿನ್ ಡಿ ಕೊರತೆ ಎದುರಿಸಿರುವುದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ಕೊವಿಡ್-19 ಸೋಂಕಿತರಲ್ಲಿ ವಿಟಮಿನ್ ಡಿ ಕೊರತೆ ಉಳ್ಳವರ ಪ್ರಮಾಣವೇ ಹೆಚ್ಚಾಗಿರುವುದು ಗೊತ್ತಾಗಿದೆ. ಸಾಮಾನ್ಯ ಕೊರೊನಾವೈರಸ್ ಸೋಂಕಿತರಿಗಿಂತ ವಿಟಮಿನ್ ಡಿ ಕೊರತೆಯುಳ್ಳ ಸೋಂಕಿತರ ಪ್ರಮಾಣ ಎರಡರಷ್ಟಿದೆ. ವಿಟಮಿನ್ ಡಿ ಕೊರತೆ ಕೂಡಾ ಕೊರೊನಾವೈರಸ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಗಳಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ. ಇದರ ಜೊತೆಗೆ ಮಹಾಮಾರಿಗೆ ಯಾವ ರೀತಿಯ ಪರಿಣಾಮಕಾರಿ ಔಷಧಿಗಳನ್ನು ಕಂಡು ಹಿಡಿಯಬೇಕು ಎನ್ನುವುದರ ಬಗ್ಗೆ ಸಂಶೋಧನೆಗಳು ನಡೆಯಬೇಕು ಎಂದು ಯುಚಿಕಾಗೊ ಮೆಡಿಸಿನ್‌ನ ಹಾಸ್ಪಿಟಲ್ ಮೆಡಿಸಿನ್‌ನ ಮುಖ್ಯಸ್ಥ ಡೇವಿಡ್ ಮೆಲ್ಟ್ಜರ್ ಒತ್ತಿ ಹೇಳಿದ್ದಾರೆ.

      ವಿಟಮಿನ್ ಡಿ ಕೊರತೆಯುಳ್ಳವರಲ್ಲಿ ಹೆಚ್ಚು ಅಪಾಯ

      ವಿಟಮಿನ್ ಡಿ ಕೊರತೆಯುಳ್ಳವರಲ್ಲಿ ಹೆಚ್ಚು ಅಪಾಯ

      ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರಲ್ಲಿ ಅತಿಹೆಚ್ಚು ಜನರಿಗೆ ವಿಟಮಿನ್ ಡಿ ಕೊರತೆ ಇರುವುದು ಗೊತ್ತಾಗಿದೆ. 2020ರ ಮೇ ತಿಂಗಳಲ್ಲಿ ಏಜಿಂಗ್ ವೈದ್ಯಕೀಯ ಮತ್ತು ಪ್ರಾಯೋಗಿಕ ಸಂಶೋಧನಾ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ವೃದ್ಧರಲ್ಲಿ ವಿಟಮಿನ್ ಡಿ ಕೊರತೆಯು ಹೆಚ್ಚಾಗಿದ್ದು, ಸಾವಿನ ಪ್ರಮಾಣದಲ್ಲಿ ವೃದ್ಧರೇ ಹೆಚ್ಚಾಗಿದ್ದಾರೆ. ವಿಟಮಿನ್ ಡಿ ಕೊರತೆಯು ಕೊರೊನಾವೈರಸ್ ಸೋಂಕಿನ ಪ್ರಮಾಣವನ್ನು ಅಪಾಯಕಾರಿಯನ್ನಾಗಿ ಮಾಡುತ್ತಿದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

      ಕೊವಿಡ್-19ಗೆ ಇಟಲಿ, ಸ್ಪೇನ್ ರಾಷ್ಟ್ರಗಳಲ್ಲಿ ಅತಿಹೆಚ್ಚು ಬಲಿ

      ಕೊವಿಡ್-19ಗೆ ಇಟಲಿ, ಸ್ಪೇನ್ ರಾಷ್ಟ್ರಗಳಲ್ಲಿ ಅತಿಹೆಚ್ಚು ಬಲಿ

      ಉತ್ತರ ಯುರೋಪ್ ರಾಷ್ಟ್ರಗಳಲ್ಲಿ ಕೊರೊನಾವೈರಸ್ ಸೋಂಕಿಗೆ ಅತಿಹೆಚ್ಚು ಜನರು ಬಲಿಯಾಗಿರುವುದಕ್ಕೆ ವಿಟಮಿನ್ ಡಿ ಕೊರತೆಯೇ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಸ್ಪೇನ್ ಮತ್ತು ಇಟಲಿ ರೀತಿಯ ರಾಷ್ಟ್ರಗಳಲ್ಲಿ ಜನರಿಗೆ ವಿಟಮಿನ್ ಡಿ ಕೊರತೆಯಂತಾ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ವಿಟಮಿನ್ ಡಿ ಕೊರತೆಯಿಂದ ರೋಗ ನಿರೋಧಕ ಶಕ್ತಿಯು ಕುಗ್ಗುತ್ತಿದ್ದು, ಈ ರಾಷ್ಟ್ರಗಳಲ್ಲೇ ಕೊವಿಡ್-19 ಸೋಂಕಿಗೆ ಅತಿಹೆಚ್ಚು ಜನರು ಪ್ರಾಣ ಬಿಟ್ಟಿರುವುದಾಗಿ ಸಂಶೋಧಕರು ತಿಳಿಸುತ್ತಿದ್ದಾರೆ.

      ಕೊರೊನಾವೈರಸ್ ವಿರುದ್ಧ ವಿಟಮಿನ್ ಡಿ ಹೋರಾಟ ಹೇಗೆ?

      ಕೊರೊನಾವೈರಸ್ ವಿರುದ್ಧ ವಿಟಮಿನ್ ಡಿ ಹೋರಾಟ ಹೇಗೆ?

      ದೇಹದ ಬಿಳಿ ರಕ್ತ ಕಣಗಳಲ್ಲಿ ಅತಿಯಾದ ಸೈಟೋಕಿನ್ಸ್ ಉತ್ಪಾದನೆಯನ್ನು ತಡೆಗಟ್ಟುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸಲಿದೆ. ರೋಗ ನಿರೋಧಕ ಕೋಶದಲ್ಲಿ ಅತಿಯಾದ ಸೈಟೋಕಿನ್ಸ್ ನಿಂದಾಗಿ ಉರಿಯೂತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಕೊವಿಡ್-19 ವೈರಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವು ತಗ್ಗುತ್ತದೆ. ಕೊರೊನಾವೈರಸ್ ವೈರಾಣುಗಳ ಪ್ರಮಾಣ ಮತ್ತು ಶಕ್ತಿ ಹೆಚ್ಚಾಗುವುದಕ್ಕೆ ವಿಟಮಿನ್ ಡಿ ಕೊರತೆಯೂ ಕಾರಣವಾಗಿರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

      ಸಾಮಾನ್ಯವಾಗಿ ವಿಟಮಿನ್ ಡಿ ಪ್ರಮಾಣ ಎಷ್ಟಿದ್ದಲ್ಲಿ ಉತ್ತಮ?

      ಸಾಮಾನ್ಯವಾಗಿ ವಿಟಮಿನ್ ಡಿ ಪ್ರಮಾಣ ಎಷ್ಟಿದ್ದಲ್ಲಿ ಉತ್ತಮ?

      ಮನುಷ್ಯರಲ್ಲಿ ಸಾಮಾನ್ಯವಾಗಿ ವಿಟಮಿನ್ ಡಿ ಪ್ರಮಾಣ ಎಷ್ಟಿದ್ದರೆ ಉತ್ತಮ ಎನ್ನುವುದಕ್ಕೆ ವೈದ್ಯಕೀಯ ಸಂಶೋಧನೆಯಲ್ಲಿ ಒಂದು ಮಾನದಂಡವನ್ನು ನಿರ್ಧರಿಸಲಾಗಿದೆ. ಈ ಪ್ರಮಾಣದಲ್ಲಿ ವಿಟಮಿನ್ ಡಿ ಇದ್ದರೆ ಯಾವುದೇ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಎಂದು ವೈದ್ಯರು ಸಹ ತಿಳಿಸುತ್ತಾರೆ.

      ಮನುಷ್ಯರ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ:

      ಸಾಕಾಗುವಷ್ಟು ಪ್ರಮಾಣ: 25(OH)D 20 ನ್ಯಾನೋ ಗ್ರಾಮ್/ಎಂಎಲ್ ಗಿಂತ ಹೆಚ್ಚು

      ಇಷ್ಟು ಪ್ರಮಾಣ ಸಾಕಾಗುವುದಿಲ್ಲ: 25(OH)D 20 ನ್ಯಾನೋ ಗ್ರಾಮ್/ಎಂಎಲ್ ಗಿಂತ ಕಡಿಮೆ

      ಇಷ್ಟು ಪ್ರಮಾಣವಿದ್ದಲ್ಲಿ ಕೊರತೆ: 25(OH)D 12 ನ್ಯಾನೋ ಗ್ರಾಮ್/ಎಂಎಲ್ ಗಿಂತ ಕಡಿಮೆ

      ವಿಟಮಿನ್ ಡಿ ಹೆಚ್ಚಿಸಿಕೊಳ್ಳುವುದಕ್ಕೆ ಏನು ಮಾಡಬೇಕು?

      ವಿಟಮಿನ್ ಡಿ ಹೆಚ್ಚಿಸಿಕೊಳ್ಳುವುದಕ್ಕೆ ಏನು ಮಾಡಬೇಕು?

      ವಿಟಮಿನ್ ಡಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಕ್ಕಿರುವ ಪ್ರಮುಖ ಮಾರ್ಗವೇ ಸೂರ್ಯನ ಕಿರಣಗಳು. ಇದರ ಹೊರತಾಗಿ ಸಾಲ್ಮನ್ ನಂತಹ ಕೊಬ್ಬಿನ ಮೀನು, ಮೊಟ್ಟೆಯ ಹಳದಿ ಭಾಗ, ಬಲವರ್ಧಿತ ಆಹಾರ ಮತ್ತು ಹಾಲು ಸೇವನೆಯಿಂದ ವಿಟಮಿನ್ ಡಿ ವೃದ್ಧಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+