ಖ್ಯಾತಿಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ವಿರಾಟ್ ಕೊಹ್ಲಿ!

ಫೇಸ್ ಬುಕ್ ಜನಪ್ರಿಯತೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ಕೊಹ್ಲಿ. ಫೇಸ್ ಬುಕ್ ನಲ್ಲಿ 35 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ಕೊಹ್ಲಿ. ಸಲ್ಮಾನ್ ಖಾನ್ ಗಿಂತ 6 ಮಿಲಿಯನ್ ಹೆಚ್ಚಳ. ಆದರೂ, ಈ ವಿಚಾರದಲ್ಲಿ ಪ್ರಧಾನಿ ಮೋದಿಗಿಂತ ಕೊಹ್ಲಿ ಹಿಂದೆ

ನವದೆಹಲಿ, ಜೂನ್ 26: ದಿನದಿಂದ ದಿನಕ್ಕೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಜನಪ್ರಿಯತೆ ಅಗಾಧವಾಗಿ ಬೆಳೆಯುತ್ತಿದೆ. 2017ರಲ್ಲಿ ಈವರೆಗೆ ನಡೆಸಲಾಗಿರುವ ಸಮೀಕ್ಷೆಯೊಂದು ಇದಕ್ಕೆ ನಿದರ್ಶನವಾಗಿದೆ. ಈ ಸಮೀಕ್ಷೆಯ ಪ್ರಕಾರ, ಅವರು ನಟ ಸಲ್ಮಾನ್ ಖಾನ್ ಅವರನ್ನೂ ಹಿಂದಿಕ್ಕಿದ್ದಾರೆ. ಆದರೆ, ಮೋದಿಗಿಂತ ಒಂದು ಸ್ಥಾನ ಹಿಂದಿದ್ದಾರೆ.

ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಭಾರತೀಯ ಕ್ರಿಕೆಟ್ ರಂಗದ ಈ ತಾರೆ ಮಿಲಿಯನ್ ಗಟ್ಟಲೆ ಫಾಲೋವರ್ ಗಳನ್ನು ಹೊಂದಿದ್ದು, ಈ ವಿಚಾರದಲ್ಲಿ ಅವರು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನೂ ಹಿಂದಿಕ್ಕಿದ್ದಾರೆನ್ನಲಾಗಿದೆ.

ಅತ್ತ, ಸಲ್ಮಾನ್ ಖಾನ್ ಅವರಿಗೂ ಜನಪ್ರಿಯತೆಯೇನು ಕಡಿಮೆಯಿಲ್ಲ. ದೇಶ ವಿದೇಶಗಳಲ್ಲಿ ಅವರಿಗೂ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ತಮ್ಮದೇ ಆದ ವರ್ಚಸ್ಸನ್ನೂ ಅವರು ಗಳಿಸಿಕೊಂಡಿದ್ದಾರೆ. ಕುತೂಹಲದ ವಿಚಾರವೆಂದರೆ, ಅವರ ಪ್ರೇಯಸಿ ಅನುಷ್ಕಾ ಶರ್ಮಾ ಅವರ ಫಾಲೋವರ್ ಗಳ ಸಂಖ್ಯೆ 84,16,694ರಷ್ಟಿದೆ.

ವಿರಾಟ್ ಕೊಹ್ಲಿ ಅವರು ಸಲ್ಮಾನ್ ಖಾನ್ ಅವರನ್ನು ಹಿಂದಿಕ್ಕಿರುವುದು ಹೇಗೆ, ಅಂಕಿ-ಅಂಶಗಳು ಏನು ಹೇಳುತ್ತವೆ. ಪ್ರಧಾನಿ ಮೋದಿ ಫಾಲೋವರ್ ಗಳಿಗೂ ಕೊಹ್ಲಿ ಫಾಲೋವರ್ ಗಳ ಸಂಖ್ಯೆಗೂ ಎಷ್ಟಿದೆ ವ್ಯತ್ಯಾಸ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಗಳು ಇಲ್ಲಿವೆ.

ಬಿಗ್ ಸೆಲೆಬ್ರಿಟಿಯಾದ ಕೊಹ್ಲಿ

ಬಿಗ್ ಸೆಲೆಬ್ರಿಟಿಯಾದ ಕೊಹ್ಲಿ

2017ರಲ್ಲಿ ಈವರೆಗೆ ನಡೆಸಲಾಗಿರುವ ಸರ್ವೆ ಪ್ರಕಾರ, ಫೇಸ್ ಬುಕ್ ನಲ್ಲಿ ಕೊಹ್ಲಿಯವರು 35 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದು, ಈ ಮೂಲಕ ಈ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿದ ಸೆಲೆಬ್ರಿಟಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಲ್ಲು ಅವರಿಗೆ ಇಪ್ಪತ್ತೊಂಭತ್ತು ಮಿಲಿಯನ್

ಸಲ್ಲು ಅವರಿಗೆ ಇಪ್ಪತ್ತೊಂಭತ್ತು ಮಿಲಿಯನ್

ಸಲ್ಮಾನ್ ಖಾನ್ ಅವರಿಗೆ 29 ಮಿಲಿಯನ್ ಫಾಲೋವರ್ ಗಳಿದ್ದರೆ, ಕೊಹ್ಲಿಯವರು ಅವರಿಗಿಂತ 6 ಮಿಲಿಯನ್ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವುದು ವಿಶೇಷ.

ಬ್ಯಾಟಿಂಗ್ ನಿಂದಲೇ ಸೆಳೆತ

ಬ್ಯಾಟಿಂಗ್ ನಿಂದಲೇ ಸೆಳೆತ

ಪಂದ್ಯದಿಂದ ಪಂದ್ಯಕ್ಕೆ ತಮ್ಮ ಬ್ಯಾಟಿಂಗ್ ನಲ್ಲಿ ಮತ್ತಷ್ಟು ದೃಢತೆ ಹಾಗೂ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕೊಹ್ಲಿ, ಇದೇ ಕಾರಣದಿಂದಲೇ ತಮ್ಮ ಜನಪ್ರಿಯತೆಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಊಹಿಸಲಸಾಧ್ಯವಾದ ಜನಪ್ರಿಯತೆ

ಊಹಿಸಲಸಾಧ್ಯವಾದ ಜನಪ್ರಿಯತೆ

ಇದೇ ವರ್ಷ ಜೂನ್ 25ರ ಹೊತ್ತಿಗೆ ಈ ಕ್ರಿಕೆಟ್ ಸ್ಟಾರ್ ಗೆ 35,734,420 ಲೈಕ್ಸ್ ಗಳು ಬಂದಿವೆ ಎಂದರೆ, ಈ ಆಟಗಾರನ ಜನಪ್ರಿಯತೆ ಅದೆಷ್ಟರ ಮಟ್ಟಕ್ಕೆ ಬೆಳೆದಿದೆ ಎಂಬುದನ್ನು ಯಾರಾದರೂ ಊಹಿಸಬಹುದು.

ಸದ್ಯಕ್ಕೆ ಅವರು ಕೊಹ್ಲಿಗಿಂತ ಅಗ್ರರು

ಸದ್ಯಕ್ಕೆ ಅವರು ಕೊಹ್ಲಿಗಿಂತ ಅಗ್ರರು

ಸದ್ಯದ ಮಟ್ಟಿಗೆ ಮೋದಿಯವರಿಗೆ ಫೇಸ್ ಬುಕ್ ನಲ್ಲಿ 42.2 ಮಿಲಿಯನ್ ಫಾಲೋವರ್ ಗಳಿದ್ದಾರೆ. ಸದ್ಯಕ್ಕೀಗ ಫೇಸ್ ಬುಕ್ ನಲ್ಲಿ ಅವರೇ ಸ್ಟಾರ್ ಆಗಿ ಮುಂದುವರಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+