T20 World Cup 2024: ವಿರಾಟ್ ಕೊಹ್ಲಿ ಮೊದಲಿನಂತಲ್ಲ; ಮಾಜಿ ಕ್ರಿಕೆಟಿಗನ ಹೇಳಿಕೆ

ಐಪಿಎಲ್ 2024ರ ಸಂಭ್ರಮ ಮುಕ್ತಾಯವಾಗಿದ್ದು, ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಭಾರತ ತಂಡ ಈಗಾಗಲೇ ಯುಎಸ್‌ನಲ್ಲಿ ಬೀಡು ಬಿಟ್ಟಿದ್ದು ಅಭ್ಯಾಸ ಆರಂಭಿಸಿದೆ. 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಭಾರತ, ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಈ ಬಾರಿ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ಉತ್ಸಾಹದಲ್ಲಿದೆ.

ಈ ಬಾರಿ ಭಾರತ ಆ ತಪ್ಪನ್ನು ಪುನರಾವರ್ತನೆ ಮಾಡುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ನ ತಮ್ಮ ಅಂಕಣದಲ್ಲಿ, ಅಗ್ರ ಕ್ರಮಾಂಕದ ಬ್ಯಾಟರ್‌ಗಳ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ವಿರುದ್ಧ ಭಾರತ ಕೇವಲ 168 ರನ್ ಗಳಿಸಲು ಮಾತ್ರ ಸಾಧ್ಯವಾಯಿತು ಎಂದು ಮಂಜ್ರೇಕರ್ ಹೇಳಿದ್ದಾರೆ.

Virat Kohli Is Not the Same T20 Player Ex-India Star s Bold Statement Ahead of T20 World Cup

ವಿರಾಟ್ ಮತ್ತು ರೋಹಿತ್ ಇಬ್ಬರೂ ಟಿ20 ಬ್ಯಾಟರ್‌ಗಳಾಗಿ ಪ್ರಗತಿ ಸಾಧಿಸಿದ್ದಾರೆ ಮತ್ತು ಮುಂಬರುವ ಟಿ20 ವಿಶ್ವಕಪ್ 2024 ನಲ್ಲಿ ಅವರು ಅದೇ ತಪ್ಪುಗಳನ್ನು ಮಾಡುವುದಿಲ್ಲ ಎಂದು ಅವರು ಹೇಳಿದರು.

ನಿಧಾನಗತಿಯ ಬ್ಯಾಟಿಂಗ್‌

2022ರ ಟಿ20 ವಿಶ್ವಕಪ್‌ನಲ್ಲಿ ಅಡಿಲೇಡ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 168 ರನ್ ಗಳಿಸಿತ್ತು, ಮೊದಲ 10 ಓವರ್ ಗಳಲ್ಲಿ ಕೇವಲ 62 ರನ್ ಗಳಿಸಿದ್ದು ತಂಡಕ್ಕೆ ಹಿನ್ನಡೆಯಾಗಲು ಕಾರಣವಾಗಿತ್ತು. ರೋಹಿತ್ 28 ಎಸೆತಗಳಲ್ಲಿ 96 ಸ್ಟ್ರೈಕ್ ರೇಟ್‌ನಲ್ಲಿ 27 ರನ್ ಗಳಿಸಿದರೆ, ವಿರಾಟ್ 125 ಸ್ಟ್ರೈಕ್ ರೇಟ್‌ನಲ್ಲಿ 40 ಎಸೆತಗಳಲ್ಲಿ 50 ರನ್ ಗಳಿಸಿದರು, ಅಂತಿಮವಾಗಿ 18 ನೇ ಓವರ್‌ನಲ್ಲಿ ಔಟಾಗಿದ್ದರು.

"ಭಾರತವು ಅಲ್ಲಿಯೇ ಸೋತಿತ್ತು. ಹಾರ್ದಿಕ್ ಪಾಂಡ್ಯ ಅವರ 33 ಎಸೆತಗಳಲ್ಲಿ 63 ರನ್‌ ಗಳಿಸಿದ್ದು ಸಹಕಾರಿಯಾಯಿತು. ಆದರೆ ಇಂಗ್ಲೆಂಡ್ ಕೇವಲ 16 ಓವರ್ ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಈ ಗುರಿಯನ್ನು ಬೆನ್ನಟ್ಟಿತು" ಎಂದು ಮಂಜ್ರೇಕರ್ 2022 ರ ಟಿ 20 ವಿಶ್ವಕಪ್‌ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ.

ಮೊದಲಿನಂತಿಲ್ಲ ವಿರಾಟ್ ಕೊಹ್ಲಿ

2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ರೋಹಿತ್ ತನ್ನ ಆಕ್ರಮಣಕಾರಿ ಬ್ರಾಂಡ್ ಬ್ಯಾಟಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸಿದರು, ವಿರಾಟ್ ಕೊಹ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2024 ರಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.

"ಇಬ್ಬರೂ ಬ್ಯಾಟರ್ ಈಗ ಸಾಕಷ್ಟು ಸುಧಾರಿಸಿದ್ದಾರೆ. ವಿರಾಟ್ ಕೊಹ್ಲಿ ಎರಡು ವರ್ಷಗಳ ಹಿಂದೆ ಇದ್ದಂತೆ ಇಲ್ಲ, ಇಬ್ಬರೂ ಕೂಡ ಟಿ20 ಬ್ಯಾಟರ್ ಆಗಿ ಸುಧಾರಣೆ ಕಂಡಿದ್ದಾರೆ. ಇಬ್ಬರ ಸ್ಟ್ರೈಕ್‌ರೇಟ್ ಕೂಡ ಉತ್ತಮವಾಗಿದೆ" ಎಂದು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+