Virat Kohli: ಪ್ರೇಮಾನಂದ ಮಹಾರಾಜ ಸ್ವಾಮೀಜಿ ಭೇಟಿಗೆ 5 ಕೋಟಿ ರೂ. ಪಡೆದರೇ ವಿರಾಟ್ - ಅನುಷ್ಕಾ ಶರ್ಮಾ? ಕೊಹ್ಲಿ ಹೇಳಿದ್ದೇನು
Virat Kohli: ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಲೆ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ಇದಕ್ಕೆ ವಿರಾಟ್ ಕೊಹ್ಲಿ ಅವರಿಂದಲೂ ಸ್ಪಷ್ಟನೆ ಬಂದಿದೆ. ವಿರಾಟ್ ಕೊಹ್ಲಿ ಅವರು ಪ್ರೇಮಾನಂದ ಮಹಾರಾಜ ಸ್ವಾಮೀಜಿಗಳ ಭಕ್ತರಾಗಿದ್ದಾರೆ. ಆರ್‌ಸಿಬಿ ತಂಡದ ಮಾಜಿ ನಾಯಕ, ಕ್ರಿಕೆಟ್ ದಂತಕಥೆ ಅಂತಲೇ ಖ್ಯಾತಿ ಗಳಿಸಿರುವ ವಿರಾಟ್ ಕೊಹ್ಲಿ ಹಾಗೂ ನಟಿ, ಅನುಷ್ಕಾ ಶರ್ಮಾ ಅವರು ಆಗಾಗ್ಗೆ ಪ್ರೇಮಾನಂದ ಮಹಾರಾಜ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದು ಇದೆ. ಆದರೆ ವಿರಾಟ್ ಕೊಹ್ಲಿ ಅವರು, ಪ್ರೇಮಾನಂದ ಮಹಾರಾಜ ಸ್ವಾಮೀಜಿಗಳನ್ನು ಭೇಟಿ ಮಾಡುವುದಕ್ಕೆ 5 ಕೋಟಿ ರೂ. ಪಡೆದಿದ್ದರೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ದಿನೇಶ್ ಫಲಹಾರಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪತ್ರ ಬರೆದಿದ್ದಾರೆ. ವೃಂದಾವನ ಆಶ್ರಮದ ಬಗ್ಗೆ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ.
ದಿನೇಶ್ ಫಲಹಾರಿ ಮಹಾರಾಜ್ (ದಿನೇಶ್ ಶರ್ಮಾ) ಅವರು ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ್ ನ್ಯಾಸ್ (ಟ್ರಸ್ಟ್) ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಶ್ರೀ ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುತ್ತಿರುವ ಪ್ರಮುಖ ವ್ಯಕ್ತಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ದಿನೇಶ್ ಫಲಹಾರಿ ಅವರು ವಿರಾಟ್ ಕೊಹ್ಲಿ, ಪ್ರೇಮಾನಂದ ಮಹಾರಾಜ ಸ್ವಾಮೀಜಿ ಹಾಗೂ ವೃಂದಾವನ ಆಶ್ರಮದ ಬಗ್ಗೆ ಹೇಳಿದ್ದೇನು. ಈ ವಿಚಾರವು ಇದೀಗ ಇಷ್ಟೊಂದು ಗಂಭೀರವಾಗಿ ಚರ್ಚೆ ಆಗುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ವಿರಾಟ್ ಕೊಹ್ಲಿ ಅವರು ಆಧ್ಯಾತ್ಮಿಕ ಗುರುಗಳಾದ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿ ಮಾಡಲು 5 ಕೋಟಿ ರೂ. ಪಡೆದಿದ್ದಾರೆ ಎಂಬ ವೈರಲ್ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜ್ ಅವರ ವೃಂದಾವನ ಆಶ್ರಮಕ್ಕೆ ಭೇಟಿ ನೀಡಲು ವಿರಾಟ್ ಕೊಹ್ಲಿ ₹5 ಕೋಟಿ ಪಡೆದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಆಶ್ರಮಕ್ಕೆ ಭೇಟಿ ನೀಡಿದ್ದು ವೈರಲ್ ಆಗಿರುವುದು ಇದೆ. ಆದರೆ, ದಿನೇಶ್ ಶರ್ಮಾ ಅವರು ಕೊಟ್ಟಿರುವ ಹೇಳಿಕೆಗೆ ಯಾವುದೇ ಪುರಾವೆಗಳಿಲ್ಲ ಮತ್ತು ಅದನ್ನು ಸಾಬೀತಾಗಿಲ್ಲ.
ಎಬಿಪಿ ನ್ಯೂಸ್ ಪ್ರಕಾರ, ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ಅಧ್ಯಕ್ಷರಾದ "ಫಲಹರಿ ಮಹಾರಾಜ್" ಎಂದು ಜನಪ್ರಿಯರಾಗಿರುವ ದಿನೇಶ್ ಶರ್ಮಾ ಅವರ ಹೇಳಿಕೆಯ ನಂತರ ಈ ವದಂತಿ ಜೋರಾಗಿದೆ. ಅಕ್ಟೋಬರ್ 4, 2026 ರಂದು ಪ್ರೇಮಾನಂದ ಮಹಾರಾಜ್ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ ಎಂದು ಹೇಳಲಾಗಿದೆ.
ರಾಜಸ್ಥಾನದ ಬಿಲ್ಡರ್‌ಗಳ ಗ್ರೂಪ್ ಮತ್ತು ಖಾಸಗಿ ಕಂಪನಿಯೊಂದು ವಿರಾಟ್ ಕೊಹ್ಲಿ ಸ್ವಾಮಿ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಲು 5 ಕೋಟಿ ರೂ. ಖರ್ಚು ಮಾಡಿದೆ ಎಂದು ಆರೋಪಿಸಲಾಗಿದೆ. 2023ರಲ್ಲಿ ಕೊಹ್ಲಿ ಮೊದಲ ಬಾರಿಗೆ ಆಶ್ರಮಕ್ಕೆ ಭೇಟಿ ನೀಡಿದಾಗ ಈ ಹಣ ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜರ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಹಣ ನೀಡಲಾಗಿದೆ ಎಂದೂ ದೂರಿದ್ದಾರೆ.
Virat Kohli: ವಿರಾಟ್ ಕೊಹ್ಲಿ ಅವರ ವಕ್ತಾರರಿಂದ ಅಧಿಕೃತ ಹೇಳಿಕೆ
ಇನ್ನು ಈ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಅವರ ವಕ್ತಾರರಿಂದ ಅಧಿಕೃತ ಹೇಳಿಕೆ ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ಅವರ ಬಗ್ಗೆ ಫಲಹರಿ ಮಹಾರಾಜ್ ದಿನೇಶ್ ಶರ್ಮಾ ಅವರು ಮಾಡಿರುವ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ವಾಸ್ತವಿಕವಾಗಿ ತಪ್ಪಾಗಿದೆ ಎಂದು ನಾವು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ.
ವಿರಾಟ್ ಕೊಹ್ಲಿ ಅವರು ಮಹಾರಾಜ್ ಜಿ ಅವರ ಮೇಲಿನ ಆಳವಾದ ನಂಬಿಕೆ ಮತ್ತು ಗೌರವದಿಂದ ಪ್ರೇಮಾನಂದ ಮಹಾರಾಜ್ ಜಿ ಅವರನ್ನು ಭೇಟಿ ಮಾಡಿದ್ದಾರೆ. ಈ ಹೇಳಿಕೆಗಳನ್ನು ನಾವು ಬಲವಾಗಿ ನಿರಾಕರಿಸುತ್ತೇವೆ ಮತ್ತು ಮಾಧ್ಯಮಗಳು ಸರಿಯಾದ ಶ್ರದ್ಧೆ ವಹಿಸಬೇಕು, ಅಂತಹ ಹೇಳಿಕೆಗಳನ್ನು ವರದಿ ಮಾಡುವ ಅಥವಾ ಪ್ರಕಟಿಸುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಜವಾಬ್ದಾರಿಯುತವಾಗಿ ವರದಿ ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.


Click it and Unblock the Notifications
