ವೈರಲ್ ವಿಡಿಯೋ: ಭೀತಿ ಹುಟ್ಟಿಸುವ ಕೇರಳ ಪ್ರವಾಹದ ರೌದ್ರಾವತಾರ!

Recommended Video

      ಭೀತಿ ಹುಟ್ಟಿಸುವ ಕೇರಳ ಪ್ರವಾಹದ ರೌದ್ರಾವತಾರ! | Oneindia Kannada

      ತಿರುವನಂತಪುರಂ, ಆಗಸ್ಟ್ 10: ನೋಡು ನೋಡುತ್ತಿದ್ದಂತೆಯೇ ರಸ್ತೆಯೊಂದು ಪ್ರವಾಹದ ಗರ್ಭದಲ್ಲಿ ಹೂತುಕೊಳ್ಳುವ ದೃಶ್ಯ ಭೀತಿ ಹುಟ್ಟಿಸದಿದ್ದೀತೆ? ಕಣ್ಣಿಗೆ ತಂಪು ನೀಡುವ ಸುಂದರ ಜಿಂಕೆಗಳು ಪ್ರವಾಹದಲ್ಲಿ ಕೋಡಷ್ಟೇ ಕಾಣುವಂತೆ ಕೊಚ್ಚಿಕೊಂಡು ಹೋಗುವುದನ್ನು ಕಂಡರೆ ಮನಸ್ಸು ಮರುಗದಿದ್ದೀತೇ?

      ಇಂಥ ಭೀತಿ ಹುಟ್ಟಿಸುವ, ಮರುಕ ಹುಟ್ಟಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಎದ್ದಿರುವ ಪ್ರವಾಹ ಭೀತಿಯಿಂದಾಗಿ ಇಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಇದುವರೆಗೆ ಈ ಭಾಗದಲ್ಲಿ 26 ಜನ ಮೃತರಾಗಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ.

      ದೇಶದ ಹಲವು ರಾಜ್ಯಗಳು, ಕೇಂದ್ರ ಸರ್ಕಾರ ಈ ಸಂಕಷ್ಟದ ಸಮಯದಲ್ಲಿ ಕೇಂದ್ರದ ನೆರವಿಗೆ ನಿಂತಿದೆ. ಕೇರಳದ ಜನರ ಒಳಿತಿಗಾಗಿ ಇಡಿ ದೇಶವೂ ಪ್ರಾರ್ಥಿಸುತ್ತಿದೆ.

      ಕೇರಳದ ಮಳೆಯ ರೌದ್ರಾವತಾರವನ್ನು ತೋರುವ ಕೆಲವು ವಿಡಿಯೋಗಳು ಇಲ್ಲಿವೆ.

      ನೀರಿನ ಗರ್ಭದಲ್ಲಿ ಹೂತುಕೊಂಡ ರಸ್ತೆ!

      ಅತಿಯಾದ ಪ್ರವಾಹದಿಂದಾಗಿ, ನೋಡು ನೋಡುತ್ತಿದ್ದಂತೆಯೇ ರಸ್ತೆಯೊಂದು ಕುಸಿದು ಪ್ರವಾಹದ ಗರ್ಭದಲ್ಲಿ ಐಕ್ಯವಾದ ದೃಶ್ಯವಂತೂ ಕೆಲ ಕಾಲ ನ ದಿಗ್ಭ್ರಮೆ ಮೂಡಿಸುತ್ತದೆ. ನಿಸರ್ಗದ ಶಕ್ತಿಯೆದುರು ಮಾನವ ನಿರ್ಮಿತ ರಸ್ತೆಗಳೆಲ್ಲ ತೃಣ ಸಮಾನ ಎನ್ನಿಸುತ್ತದೆ! ಅಂಥದೊಂದು ವಿಡಿಯೋ ಇಲ್ಲಿದೆ ನೋಡಿ!

      ತೇಲಿಹೋದವು ಚೆಂದದ ಜಿಂಕೆಗಳು!

      ಕಳೆದ 24 ಗಂಟೆಗಳಲ್ಲಿ 40 ಸೆಂ.ಮೀ. ನಷ್ಟು ಮಳೆ ಸುರಿದಿದೆ.ಇಲ್ಲಿನ ಕಾಡೊಂದರಲ್ಲಿ ಸ್ವಚ್ಛಂದವಾಗಿ ಕುಣಿದಾಡಿಕೊಂಡಿದ್ದ ಜಿಂಕೆಗಳು ಪ್ರವಾಹಕ್ಕೆ ಸಿಲುಕಿ ತೇಲಿ ಹೋಗುತ್ತಿರುವ ದೃಶ್ಯವಂತೂ ಕರುಳನ್ನು ಕಿವುಚುತ್ತದೆ. ಕೋಡಷ್ಟೇ(ಕೊಂಬು) ಕಾಣುವಂತೆ ಅವು ಪ್ರವಾಹದ ದಿಕ್ಕಿನಲ್ಲಿ ಅಸಹಾಯಕವಾಗಿ ತೇಲಿ ಹೋಗುವುದನ್ನು ಕಂಡರೆ ಅಯ್ಯೋ ಅನ್ನಿಸುತ್ತದೆ.

      Array

      ಇಡುಕ್ಕಿ ಜಲಾಶಯದಿಂದ ಹೊರಬಂದ ಬಿಳಿಚುಕ್ಕಿ!

      ನೀರು ಗರಿಷ್ಠ ಮಟ್ಟ ತಲುಪಿದ(2398.80) ಕಾರಣ ಇಲ್ಲಿನ ಪ್ರಸಿದ್ಧ ಇಡುಕ್ಕಿ ಜಲಾಶಯದ ಗೇಟ್ ತೆರೆದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಭಾಗದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಗೇಟ್ ತೆರೆಯುತ್ತಿದ್ದಂತೆಯೇ ಇಡುಕ್ಕಿ ಜಲಾಶಯದಿಂದ ಬಿಳಿಚಿಕ್ಕಿಯೊಂದು ಹೊರಬಂದಂಥ ದೃಶ್ಯ, ಪ್ರವಾಹದ ಭೀಕರತೆಯ ನಡುವಲ್ಲೂ ಕೊಂಚ ಸಂಭ್ರಮ ಹುಟ್ತಿಸಿತು. ಈ ರಮಣೀಯ ವಿಡಿಯೋ ಇಲ್ಲಿದೆ ನೋಡಿ.

      ರಸ್ತೆ ತುಂಬ ನೀರು, ಅಲ್ಲೂ ಟ್ರಾಫಿಕ್!

      ರಸ್ತೆ ತುಂಬ ಅರ್ಧ ವಾಹನಗಳು ತುಂಬುವಷ್ಟು ನೀರು. ಸಮುದ್ರವೋ, ರಸ್ತೆಯೋ ಗೊತ್ತಾಗದ ಆ ಜಾಗದಲ್ಲಿ ಟ್ರಾಫಿಕ್ ಸಮಸ್ಯೆ ಬೇರೆ. ಇಂಥ ಸನ್ನಿವೇಶಕ್ಕೆ ಸಾಕ್ಷಿಯಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರವಾಹದಿಂದ ಕೇರಳ ಜನತೆ ಅನುಭವಿಸುತ್ತಿರುವ ತಾಪತ್ರಯಕ್ಕೆ ಇದೊಂದು ಸಾಕ್ಷಿ.

      Array

      ರುದ್ರ ರಮಣೀಯ!

      ಭಾರೀ ಮಳೆ ಸೃಷ್ಟಿಸಿರುವ ಪ್ರವಾಹ ಮತ್ತು ಭೂಕುಸಿತದ ಕೆಲವು ವಿಡಿಯೋಗಳು ಎಷ್ಟು ರಮಣೀಯವೋ ಅಷ್ಟೇ ಭೀತಿ ಹುಟ್ಟಿಸುವುದೂ ಖಂಡಿತ. ಇದೂ ಅಮಥದೇ ವಿಡಿಯೋ.ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಕೇರಳ ಸರ್ಕಾರ 10,000 ಕ್ಕೂ ಹೆಚ್ಚು ಜನರನ್ನು 157 ಸಂತ್ರಸ್ಥ ಶಿಬಿರಗಳಿಗೆ ಸ್ಥಳಾಂತರಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಆರು ಪ್ರವಾಹ ರಕ್ಷಣಾ ತಂಡವನ್ನು ಎರ್ನಾಕುಲಂ, ಅಲ್ಲಪ್ಪಿ, ವೈನಾಡ್, ಕೊಳಿಕೊಡೆ ಮತ್ತು ಪಾಲಕ್ಕಾಡ್ ಗಳಲ್ಲಿ ನೇಮಿಸಲಾಗಿದೆ. ಆದರೂ ನಿಸರ್ಗದ ಮುನಿಸನ್ನು ಹುಲುಮಾನವ ನಿಯಂತ್ರಿಸುವುದಕ್ಕೆ ಸಾಧ್ಯವೇ?

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+