• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈರಲ್ ವಿಡಿಯೋ: ಯಾವ ಡಾಕ್ಟರ್ ಗುರು ಇವರು ಹೀಗೆ ಸಗಣಿ ತಿಂತವ್ರೆ?

|
Google Oneindia Kannada News

ಹರಿಯಾಣ ನವೆಂಬರ್ 18: ಸಾಮಾನ್ಯವಾಗಿ ಯಾರಾದ್ರು ತಪ್ಪು ಮಾಡಿದ್ರೆ ಹೋಗಿ ಸಗಣಿ ತಿನ್ನು ಅಂತ ಹೇಳುವುದು ಸಾಮಾನ್ಯ. ಆದ್ರಿಲ್ಲೊಬ್ಬ ವೈದ್ಯ ಸಗಣಿ ತಿಂದು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಲಕ್ಷಣ ವಿಡಿಯೋಕ್ಕೆ ಸಾಕಷ್ಟು ಜನ ಮೂಗು ಮುರಿದು ಮುಖ ಕಿವಿಚಿಕೊಂಡಿದ್ದಾರೆ. ವೈದ್ಯರು ಹಲವಾರು ಸಂಶೋಧನೆಗಳ ಮೂಲಕ ಅಧ್ಯಯನಗಳ ಮೂಲಕ ಹೊಸ ಹೊಸ ವಿಚಾರಗಳನ್ನು ಬಹಿರಂಗಪಡಿಸುತ್ತಾರೆ. ಆದ್ರಿಲ್ಲೊಬ್ಬ ವೈದ್ಯ ಹಸುವಿನ ಸಗಣಿ ತಿನ್ನುವುದು ನಿಜಕ್ಕೂ ನೋಡುಗರನ್ನು ಆಶ್ಚರ್ಯಗೊಳಿಸಿದೆ. ಮಾತ್ರವಲ್ಲದೆ ವೈದ್ಯರ ಈ ವಿಡಿಯೋಕ್ಕೆ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ.

ವಿಡಿಯೋದಲ್ಲಿ ವೈದ್ಯರು ಹಸುವಿನ ಸಗಣಿ ತಿನ್ನುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಸಗಣಿ ವೈದ್ಯಕೀಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಹೌದು..ಈ ವಿಡಿಯೊದಲ್ಲಿ ವೈದ್ಯರು ಅಧಿಕ ಹಸುವಿನ ಸಗಣಿಯನ್ನು ತಿನ್ನುತ್ತಾ ಆನಂದಿಸುತ್ತಿರುವುದನ್ನು ಕಾಣಬಹುದು. ಇದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

ವಿಡಿಯೋದಲ್ಲಿರುವ ವ್ಯಕ್ತಿ ಹರ್ಯಾಣದ ಡಾ ಮನೋಜ್ ಮಿತ್ತಲ್(Dr Mittal). ಡಾ ಮಿತ್ತಲ್ ಕೆಳಗೆ ಬಾಗಿ ಗೋಶಾಲೆಯ ನೆಲದಿಂದ ಒಂದು ಮುಷ್ಟಿ ಹಸುವಿನ ಸಗಣಿ ತೆಗೆದುಕೊಂಡು ಅದನ್ನು ತಿನ್ನುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಅವರ ಪ್ರಕಾರ, ಹಸುವಿನ ಸಗಣಿ ಸೇವನೆಯು ಇತರ ಪ್ರಯೋಜನಗಳ ಜೊತೆಗೆ ಒಬ್ಬರ ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸುತ್ತದೆ.

ವಿಡಿಯೋದಲ್ಲಿ ವೈದ್ಯರು ಹಸುವಿನ ಸಗಣಿ ಮತ್ತು ಗೋಮೂತ್ರವನ್ನು ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳನ್ನು ವಿವರಿಸುವುದನ್ನು ಕೇಳಬಹುದು. ಜೊತೆಗೆ ಇದನ್ನು ಸೇವಿಸುವುದರಿಂದ ಅನೇಕ ಗಂಭೀರ ಕಾಯಿಲೆಗಳನ್ನು ದೂರವಿಡಬಹುದು ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಹಸುವಿನ ಸಗಣಿ ತಿಂದ ಮಹಿಳೆಯರಿಗೆ ನಾರ್ಮಲ್ ಡೆಲಿವರಿ ಆಗಲಿದ್ದು, ಸಿಸೇರಿಯನ್ ಮಾಡಬೇಕಿಲ್ಲ ಎಂದು ಹೇಳಿದರು.

ವಿಡಿಯೋದಲ್ಲಿ ಡಾ. ಮಿತ್ತಲ್, "ಗೋವಿನಿಂದ ಪಡೆದ ಪಂಚಗವ್ಯದ ಪ್ರತಿಯೊಂದು ಭಾಗವು ಮನುಕುಲಕ್ಕೆ ಬಹಳ ಮೌಲ್ಯಯುತವಾಗಿದೆ. ಗೋವಿನ ಸಗಣಿ ತಿಂದರೆ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ನಮ್ಮ ಆತ್ಮ ಶುದ್ಧವಾಗುತ್ತದೆ. ಒಮ್ಮೆ ಅದು ನಮ್ಮ ದೇಹವನ್ನು ಪ್ರವೇಶಿಸಿದರೆ. ಅದು ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ," ಎಂದು ಹೇಳಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೈರಲ್ ವಿಡಿಯೊದಲ್ಲಿರುವ ಡಾ.ಮನೋಜ್ ಮಿತ್ತಲ್ ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಮಕ್ಕಳ ತಜ್ಞರಾಗಿದ್ದಾರೆ ಎಂದು ಅವರ ಟ್ವಿಟ್ಟರ್ ಪ್ರೊಫೈಲ್‌ನಿಂದ ತಿಳಿದುಕೊಳ್ಳಲಾಗಿದೆ.

ಈ ವಿಡಿಯೋವನ್ನು ಇದೀಗ ಹಲವು ಇನ್‌ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು ವೈರಲ್ ಆಗಿದೆ. ಕೆಲವು ನೆಟ್ಟಿಗರು ವೈದ್ಯರ ಮಾತನ್ನು ಒಪ್ಪುವುದನ್ನು ನೋಡಬಹುದಾದರೆ, ಇತರರು ಅವರು ಹಸುವಿನ ಸಗಣಿ ತಿನ್ನುವ ವಿಡಿಯೊದಿಂದ ವಾಕರಿಕೆ ಪಡೆಯುವುದನ್ನು ಕಾಣಬಹುದು.ಬಳಕೆದಾರರು ತಮಾಷೆಯಾಗಿ ಹೇಳಿದರು, "ಡಾಕ್ಟರ್ ಅಂಕಲ್ ಸಗಣಿಯ ಮೇಲೆ ಚೀಸ್, ಬೆಣ್ಣೆ, ಚಾಕೊಲೇಟ್ ಸಾಸ್ ಹಾಕಿಕೊಂಡಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಇನ್ನೂ ರಿಚ್ ಆಗ್ತಾಯಿತ್ತು" ಎಂದಿದ್ದಾರೆ.

"ಇಂಡಿಯನ್ ಮೆಡಿಕಲ್ ಕೌನ್ಸಿಲ್ ಇದನ್ನು ಗಮನಿಸಬೇಕು ಮತ್ತು ವೈದ್ಯಕೀಯ ವೃತ್ತಿಯನ್ನು ಅಭ್ಯಾಸ ಮಾಡಲು ಅವರ ಪರವಾನಗಿಯನ್ನು ರದ್ದುಗೊಳಿಸಬೇಕು. ಮಕ್ಕಳ ವೈದ್ಯರಾಗಿ ಅವರು ಸಣ್ಣ ಮುಗ್ಧ ಮಕ್ಕಳಿಗೆ ಗೋಬರ್ ಅನ್ನು ಶಿಫಾರಸು ಮಾಡಬಾರದು" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

"ಓ ದೇವರೇ. ನನಗೆ ಪದಗಳ ಕೊರತೆಯಿದೆ" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರ," ಡಾಕ್ಟರ್ ಅವರು ಹಸುವಿನ ಸಗಣಿಯನ್ನು ಎಷ್ಟು ಸುಲಭವಾಗಿ ತಿಂದರೆಂದರೆ ಇಷ್ಟು ಸುಲಭವಾಗಿ ರಾಜ್ಮಾ ಚಾವಲ್(ರಾಜ್ಮಾ ಅನ್ನ) ಕೂಡ ತಿನ್ನಲು ಸಾಧ್ಯವಿಲ್ಲ" ಎಂದು ಬರೆದಿದ್ದಾರೆ.

ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ:

English summary
A doctor has eaten cow dung and posted a bizarre video on the social network. Some have appreciated the physician's behavior.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion