Viral Video: ಸಣ್ಣ ಮಕ್ಕಳ ಕಷ್ಟಕ್ಕೆ ಮಿಡಿದ ಟ್ರಾಫಿಕ್ ಪೊಲೀಸ್, ಇಲ್ಲಿದೆ ಹೃದಯಸ್ಪರ್ಶಿ ವೈರಲ್ ವಿಡಿಯೋ
ಟ್ರಾಫಿಕ್ ಪೊಲೀಸರು ಎಂದರೆ ಇತ್ತೀಚಿನ ದಿನಗಳಲ್ಲಿ ಬಹುತೇಕರಿಗೆ ಒಳ್ಳೆಯ ಅನಿಸಿಕೆ ಇಲ್ಲ. ಬಹುತೇಕ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಂದ ದುಡ್ಡು ತೆಗೆದುಕೊಳ್ಳುತ್ತಾರೆ. ವಿನಾಕಾರಣ ಹಿಂಸೆ ನೀಡುತ್ತಾರೆ ಎನ್ನುವ ಮನೋಭಾವವು ಹಲವರಲ್ಲಿ ಇದೆ. ಇದೀಗ ದೇಶದ ಪ್ರಮುಖ ನಗರವೊಂದರಲ್ಲಿ ಟ್ರಾಫಿಕ್ ಪೊಲೀಸ್‌ವೊಬ್ಬರು ಮಾಡಿರುವ ಕೆಲಸವು ದೇಶದಾದ್ಯಂತ ವೈರಲ್ ಆಗುತ್ತಿದೆ. ಅಲ್ಲದೇ ತಾಯಿ ಹೃದಯದ ಈ ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ಅಲ್ಲಿನ ಸರ್ಕಾರವೂ ಮೆಚ್ಚುಗೆ ಸೂಚಿಸಿದೆ. ಅದೇನು ಎನ್ನುವುದನ್ನು ಇಲ್ಲಿ ನೋಡೋಣ.
ಆಂಧ್ರಪ್ರದೇಶದ ಟ್ರಾಫಿಕ್ ಪೊಲೀಸ್‌ವೊಬ್ಬರು ಮಾನವೀಯತೆ ಮೆರೆದಿದ್ದು, ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಮಾತ್ರವಲ್ಲ ಯಾರಿಗಾದರೂ ಸಹಾಯ ಮಾಡಬೇಕು ಎನ್ನುವ ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ ಎನ್ನಲಾಗುತ್ತಿದೆ. ಇಷ್ಟಕ್ಕೂ ಆ ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ನೋಡೋಣ.

ಆಂಧ್ರಪ್ರದೇಶದ ಟ್ರಾಫಿಕ್ ಪೊಲೀಸರೊಬ್ಬರು ಧಗೆಧಗೆಯ ಬಿಸಿಲಿನಲ್ಲಿ ಚಪ್ಪಲಿ ಇಲ್ಲದೆ ಪರದಾಡುತ್ತಿದ್ದ ಮಕ್ಕಳಿಗೆ ಚಪ್ಪಲಿಯನ್ನು ಕೊಡಿಸಿದ್ದಾರೆ. 10ಕ್ಕೂ ಹೆಚ್ಚು ಮಕ್ಕಳಿಗೆ ಚಪ್ಪಲಿ ಕೊಡಿಸಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಟ್ರಾಫಿಕ್ ಪೊಲೀಸ್ ಅವರ ಈ ಮಾತೃಹೃದಯಿ ಕ್ರಮಕ್ಕೆ ಅಲ್ಲಿನ ಸರ್ಕಾರವೂ ಮೆಚ್ಚುಗೆ ಸೂಚಿಸಿದೆ. ಈ ಸಂಬಂಧ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ಸಚಿವ ನಾರಾ ಲೋಕೇಶ್ ಅವರು ಟ್ವೀಟ್ ಮಾಡಿದ್ದಾರೆ.
ಈ ರೀತಿ ಸಣ್ಣ ಮಕ್ಕಳಿಗೆ ಸಹಾಯ ಮಾಡಿರುವ ವ್ಯಕ್ತಿಯ ಹೆಸರು ವೆಂಕಟರತ್ನಂ ಎಂದು. ಇವರ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವ ಸಚಿವ ನಾರಾ ಲೋಕೇಶ್ ಅವರು, ಹ್ಯಾಟ್ಸ್ ಆಫ್ ವೆಂಕಟರತ್ನಂ ಅವರೇ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ನಿಮ್ಮ ಆತ್ಮೀಯ ನಮಸ್ಕಾರ. ಮಳೆಯಾಗಲಿ ಅಥವಾ ಬಿಸಿಲಾಗಲಿ, ಸಂಚಾರವನ್ನು ನಿಯಂತ್ರಿಸುವ ನಿಮ್ಮ ಕರ್ತವ್ಯವನ್ನು ನೀವು ಜಾಗರೂಕತೆಯಿಂದ ಮಾಡುತ್ತಿದ್ದೀರಿ. ಪೆನಮಲೂರು ಸಂಚಾರ ಹೆಡ್ ಕಾನ್ಸ್‌ಟೇಬಲ್ ವೆಂಕಟರತ್ನಂ ಅವರು ಒತ್ತಡದ ಹಾಗೂ ಮಹತ್ವದ ಕೆಲಸದ ನಡುವೆಯೂ ಮಕ್ಕಳಿಗೆ ಸಹಾಯ ಮಾಡಿರುವ ಗುಣಕ್ಕೆ ಹ್ಯಾಟ್ಸ್ ಆಫ್.
హ్యాట్సాఫ్ వెంకటరత్నం గారు
— Lokesh Nara (@naralokesh) September 21, 2025
స్పందించిన మీ మనసుకు సెల్యూట్
ఎండనక, వాననక అప్రమత్తంగా ట్రాఫిక్ని నియంత్రించే విధి నిర్వహణ. అటెన్షన్, టెన్షన్లు ఉన్నా పెనమలూరు ట్రాఫిక్ హెడ్ కానిస్టేబుల్ వెంకటరత్నం గారు స్పందించిన తీరుకు హాట్సాఫ్.
చెప్పుల్లేకుండా ఎండలో నడిచి వెళ్తున్న స్కూల్… pic.twitter.com/d2YiMD8xOm
ಶಾಲಾ ಮಕ್ಕಳು ಬಿಸಿಲಿನಲ್ಲಿ ಶೂಗಳಿಲ್ಲದೆ ನಡೆಯುವುದನ್ನು ನೋಡಿ ಅವರು ಮರುಗಿದ್ದರು. ಅವರೆಲ್ಲರನ್ನೂ ಶೂ ಅಂಗಡಿಗೆ ಕರೆದೊಯ್ದು ಸರಿಯಾದ ಗಾತ್ರದ ಚಪ್ಪಲಿಗಳನ್ನು ಖರೀದಿಸಿದರು. ವೆಂಕಟರತ್ನಂ ಅವರು, ಮಕ್ಕಳು ಶೂ ಧರಿಸಿ ನಡೆಯುತ್ತಿದ್ದಂತೆ ಅವರ ಮುಖದಲ್ಲಿ ನಗು ಮೂಡಿದೆ. ಈ ನಗುವನ್ನು ನೋಡಿ ತೃಪ್ತಿ ಮತ್ತು ಮಕ್ಕಳು "ಧನ್ಯವಾದಗಳು ಸರ್" ಎಂದು ಹೇಳುವ ಉಡುಗೊರೆಯನ್ನು ಕೊಟ್ಟಿದ್ದಾರೆ. ಎಷ್ಟು ಅದ್ಭುವಾಗಿದೆ ಈ ಮನೋಹರ ದೃಶ್ಯ. ಎಷ್ಟು ಅಮೂಲ್ಯ.. ನಿಮಗೆ ನಮಸ್ಕಾರ ವೆಂಕಟರತ್ನಂ ಅವರೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications