ಮರಿಯನ್ನು ಉಳಿಸಲು ಹಾವಿನೊಂದಿಗೆ ಹೋರಾಟ, ಇಲಿಗೆ ಹೆದರಿ ಹಾವು ಓಟ!

ನವದೆಹಲಿ, ಮೇ.30: ತಾಯಿ ಪ್ರೀತಿಯೇ ಹಾಗೆ. ಹೆತ್ತ ಕರುಳಿನ ಪ್ರೀತಿಯ ಮುಂದೆ ಮತ್ಯಾವುದೂ ಪವರ್ ಫುಲ್ ಎನಿಸುವುದಿಲ್ಲ. ಪ್ರೀತಿ, ಮಮತೆ, ಕಾಳಜಿ ಮತ್ತು ತ್ಯಾಗಕ್ಕೆ ಮತ್ತೊಂದು ಹೆಸರೇ ತಾಯಿ ಎನ್ನುವುದಕ್ಕೆ ಇದೊಂದು ಘಟನೆಯೇ ಬೆಸ್ಟ್ ಎಕ್ಸಾಂಪಲ್.

ಪುಟ್ಟ ಇಲಿಯನ್ನು ತಿನ್ನುವುದಕ್ಕಾಗಿ ಹಾವೊಂದು ದಾಳಿ ಇಡುತ್ತದೆ. ಈ ವೇಳೆ ಅದೆಲ್ಲಿಂದ ಬಂತೋ ತಾಯಿ ಇಲಿಯು ಹಾವಿನ ಜೊತೆಗೆ ಕಾದಾಟಕ್ಕೆ ಇಳಿಯುತ್ತದೆ. ಹಾವಿನ ಬೆನ್ನು ಬೀಳುವ ಇಲಿಯ ರೋಷಾವೇಶವನ್ನು ಕಂಡು ಸ್ವತಃ ಹಾವೇ ಅಲ್ಲಿಂದ ಕಾಲು ಕೀಳುತ್ತದೆ.

Viral News: Mother Rat Fight With Snake To Protect Baby

40 ಸೆಕೆಂಡ್ ಗಳ ವಿಡಿಯೋದಲ್ಲಿ ತನ್ನ ಮರಿಯನ್ನು ಕಾಪಾಡಿಕೊಳ್ಳಲು ತಾಯಿ ಇಲಿಯು ಅದೆಂಥಾ ಹೋರಾಟವನ್ನು ನಡೆಸಿತು ಎಂದು ಎದ್ದು ಕಾಣುತ್ತದೆ. ಈ ವಿಡಿಯೋ ಇದೀಗ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ತಾಯಿ ಪ್ರೀತಿಗೆ ಸರಿಸಾಟಿ ಇಲ್ಲ ಎಂದು ಟ್ವೀಟ್:

ರಸ್ತೆಯ ಬದಿಯಲ್ಲೇ ನಡೆದ ಹಾವು ಮತ್ತು ಇಲಿಯ ಕಾದಾಟದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಸುಸಂತ್ ನಂದಾ ಎಂಬುವವರು ತಾಯಿ ಪ್ರೀತಿಗೆ ಇದೊಂದು ಉದಾಹರಣೆ ಎಂದು ಬರೆದುಕೊಂಡಿದ್ದಾರೆ. ಇಲಿಯು ಹಾವನ್ನು ಹೆದರಿಸಲು ಸಾಧ್ಯವೇ ಎಂದುಕೊಳ್ಳಬಹುದು. ಆದರೆ ನಂತರದಲ್ಲಿ ಗೊತ್ತಾಗುತ್ತದೆ, ತಾಯಿಯು ತನ್ನ ಮಗುವಿನ ಪ್ರಾಣ ರಕ್ಷಣೆಗೆ ಎಂಥಾ ಹೋರಾಟವನ್ನಾದರೂ ಮಾಡಬಹುದು. ಭೂಮಿಯಲ್ಲಿ ತಾಯಿಗಿಂತ ಮತ್ತೊಂದು ದೊಡ್ಡ ಅಸ್ತ್ರವಿಲ್ಲ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+