ವೈರಲ್ ವಿಡಿಯೋ: ಗಾಯಾಳುಗಳ ನೋಡಿ ಕಣ್ಣೀರಿಟ್ಟ ಪ್ರಧಾನಿ ಮೋದಿ

Recommended Video

      ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಕಣ್ಣೀರಿಟ್ಟ ವಿಡಿಯೋ ವೈರಲ್ | Oneindia Kannada

      ಮೆಡ್ನಪುರ, ಜುಲೈ 16: ಪ್ರಧಾನಿ ನರೇಂದ್ರ ಮೋದಿಯವರು ಆಸ್ಪತ್ರೆಯಲ್ಲಿ ಮಲಗಿರುವ ಗಾಯಾಳುಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕಣ್ಣೀರಿಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ಇತ್ತೀಚೆಗಷ್ಟೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೂ 'ನಾನು ವಿಷಕಂಠ' ಕಣ್ಣೀರಿಟ್ಟಿದ್ದರು. ಇದೀಗ ಪ್ರಧಾನಿ ಮೋದಿ ಸರದಿ!

      ಪಶ್ಚಿಮ ಬಂಗಾಳದ ಮೆಡ್ನಪುರದಲ್ಲಿ ಏರ್ಪಡಿಸಲಾಗಿದ್ದ ನರೇಂದ್ರ ಮೋದಿಯವರ rally ಸಂದರ್ಭದಲ್ಲಿ ಇಲ್ಲಿನ ಟೆಂಟ್ ವೊಂದರ ಭಾಗ ಕುಸಿದ ಪರಿಣಾಮ ಹಲವರು ಗಾಯಗೊಂಡಿದ್ದರು. ಗಾಯಗೊಂಡವರನ್ನು ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ತಮ್ಮ rally ಯ ನಂತರ ಆಸ್ಪತ್ರೆಗೆ ಭೇಟಿ ನೀಡಿದ ಮೋದಿ, ಗಾಯಗೊಂಡವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೋದಿಯವರು ಕಣ್ಣೀರು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ಮೋದಿಯವರು ಭಾಷಣ ಮಾಡುತ್ತಿದ್ದ ಸಮಯದಲ್ಲೇ ಟೆಂಟ್ ವೊಂದು ಮುರಿದುಬಿದ್ದ ಪರಿಣಾಮ, rally ಗೆಂದು ಆಗಮಿಸಿಸದ್ದ ಜನರಲ್ಲಿ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

      ಮೆಡ್ನಪುರದ ಆಸ್ಪತ್ರೆಗೆ ಮೋದಿಯವರು ತೆರಳಿದ್ದ ಸಂದರ್ಭದಲ್ಲಿ ಗಾಯಗೊಂಡ ಮಹಿಳೆಯೊಬ್ಬರು ಪ್ರಧಾನಿ ಮೋದಿಯವರ ಬಳಿ ಆಟೋಗ್ರಾಫ್ ಕೇಳಿದ ಘಟನೆಯೂ ನಡೆಯಿತು. ಮಹಿಳೆ ಸಾಂತ್ವನ ಹೇಳಿದ ಮೋದಿ, ಆಟೋಗ್ರಾಫ್ ನೀಡಿ ಹೊರಬಂದರು.

      Viral Video: Modi tears up by seeing injured people at Midnapore, West Bengal

      ಇದಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ rally ನಡೆಸಿದ್ದ ನರೇಂದ್ರ ಮೋದಿ ಇಲ್ಲಿನ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಇಲ್ಲಿನ ಸರ್ಕಾರ ಯೋಜನೆಗಳನ್ನು ಸ್ವಾರ್ಥಕ್ಕಾಗಿ ಜಾರಿಗೊಳಿಸುತ್ತಿದೆ, ಇಲ್ಲಿ ಹಿಂಸೆಯನ್ನು ಪ್ರಚೋದಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+