viral video: ನಾಯಿ ಓಡಿಸಲು ಹೋಗಿ ತಾನೇ ಮೂರನೇ ಮಹಡಿಯಿಂದ ಬಿದ್ದು ಸತ್ತ!

ಸಣ್ಣ ಸಣ್ಣ ವಿಷಯಗಳು ಮನುಷ್ಯನ ಸಾವಿಗೆ ಹೇಗೆ ಕಾರಣ ಆಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾದಂತಿದೆ. ನಾಯಿ ಬಂತು ಎಂದು ಅದನ್ನು ಓಡಿಸಲು ಹೋಗಿ ಇಲ್ಲೊಬ್ಬ ವ್ಯಕ್ತಿ ತನ್ನ ಜೀವಕ್ಕೆ ಕುತ್ತು ತಂದುಕೊಂಡಿದ್ದಾನೆ. ನಾಯಿ ಓಡಿಸಲು ಹೋಗಿ ಆಗಬಾರದ್ದೇ ಆಗಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಜನ ಇದಕ್ಕೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅವಸರ ಹಾಗೂ ಮುಂಜಾಗ್ರತೆ ಇಲ್ಲದೆ ಮಾಡುವ ಕೆಲಸಗಳು ಹೇಗೆ ಜೀವಕ್ಕೆ ಕುತ್ತು ತರಬಹುದು ಎನ್ನುವುದಕ್ಕೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿರುವ ಘಟನೆಯೇ ಸಾಕ್ಷಿಯಾಗಿದೆ. ಗೆಳೆಯ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದವರು ಶಾಕ್‌ ಆಗಿದ್ದಾರೆ. ಗೆಳೆಯ ಹುಟ್ಟು ಹಬ್ಬಕ್ಕೆ ಸಾಕ್ಷಿಯಾಗಲು ಬಂದು ತನ್ನ ಸಾವನ್ನು ತಾನೇ ತಂದುಕೊಂಡಿದ್ದಾನೆ. ಹೈದರಾಬಾದ್‌ನ ಹೋಟೆಲ್‌ವೊಂದರಲ್ಲಿ ಉದಯ ಕುಮಾರ್ ಎನ್ನುವ ವ್ಯಕ್ತಿಯ ಗೆಳೆಯ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು.

viral video man try to make dog run fell from the third floor and died

ಈ ಪಾರ್ಟಿಗೆ ಬರ್ತಡೇ ಬಾಯ್‌ನ ಹಲವು ಗೆಳೆಯರು ಸಹ ಅಲ್ಲಿಗೆ ಬಂದಿದ್ದರು. ಹೋಟೆಲ್‌ವೊಂದರಲ್ಲಿ ಈ ಪಾರ್ಟಿ ನಡೆಯುತ್ತಿತ್ತು. ಆದರೆ, ಕಾರಿಡಾರ್‌ನಲ್ಲಿ ನಾಯಿ ಓಡಾಡುವುದನ್ನು ಉದಯ ಕುಮಾರ್‌ ನೋಡಿದ್ದಾನೆ. ಆ ನಾಯಿಯನ್ನು ಅಟ್ಟಾಡಿಸಿಕೊಂಡು ಓಡಿಸಲು ಹೋಗಿದ್ದಾನೆ. ಆದರೆ, ಅವನೇ ಆಯಾ ತಪ್ಪಿ ಮೂರನೇ ಮಹಡಿಯಿಂದ ಕೆಳಕ್ಕೆ ಬಿದಿದ್ದಾನೆ. ಇದರಿಂದ ಕುಮಾರ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಾಲಾಗಿದೆ.

ಘಟನೆಯ ಹಿನ್ನೆಲೆ ಏನು: ಹೈದರಾಬಾದ್‌ನಲ್ಲಿ ಪಾಲಿಟೆಕ್ನಿಕ್‌ನಲ್ಲಿ ಓದುತ್ತಿರುವ ಉದಯ್‌ಕುಮಾರ್‌ (24) ಇಲ್ಲಿನ ಚಂದಾನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ಸ್ನೇಹಿತ ಪಾರ್ಟಿಗೆ ಹೋಗಿದ್ದಾನೆ. ಇಲ್ಲಿ ಅದ್ಧೂರಿಯಾಗಿ ಪಾರ್ಟಿ ನಡಿತ್ತಿತ್ತು. ಈ ಬಿಲ್ಡಿಂಗ್‌ನ ಮೂರನೇ ಮಹಡಿಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆದರೆ, ಪಾರ್ಟಿ ನಡೆಯುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ನಾಯಿಯೊಂದು ಬಂದಿದೆ. ನಾಯಿಯನ್ನು ಹೊರಕ್ಕೆ ಓಡಿಸಲು ಹೋದ ಉದಯ್‌ ಕುಮಾರ್‌ ನಾಯಿ ಹಿಂದೇಯೇ ಜೋರಾಗಿ ಓಡಿದ್ದಾನೆ. ನಾಯಿಯನ್ನು ಅಟ್ಟಾಡಿಸಿಕೊಂಡು ಓಡುವಾಗ ಕಾಲು ಜಾರಿ, ತೆರೆದ ಕಿಟಕಿಯಿಂದ ರಸ್ತೆಯ ಕಡೆಗೆ ಬಿದ್ದಿದ್ದಾನೆ. ಈ ದೃಶ್ಯಗಳು ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

viral video man try to make dog run fell from the third floor and died

ಮೂರನೇ ಮಹಡಿಯಿಂದ ಗೆಳೆಯ ಏಕಾಏಕಿ ಕೆಳಗೆ ಬಿದ್ದಿದ್ದನ್ನು ನೋಡಿ ನೋಡಿ ಇತರ ಗೆಳೆಯರು ಕಂಗಾಲಾಗಿದ್ದಾರೆ. ಮೂರನೇ ಮಹಡಿಯಿಂದ ಅವಸರಲ್ಲಿ ಕೆಳಗೆ ಓಡಿ ಹೋಗಿ ನೋಡುವುದರಲ್ಲೇ ಉದಯ್‌ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯ ಶವವನ್ನು ತೆಲಂಗಾಣದ ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

ಬರ್ತಡೇ ಪಾರ್ಟಿ ದಿನವೇ ದುರಂತ: ಇನ್ನು ಬರ್ತಡೇ ಪಾರ್ಟಿ ದಿನವೇ ದುರಂತವೊಂದು ನಡೆದು ಹೋಗಿದೆ. ಮೂರನೇ ಮಹಡಿಯಿಂದ ಉದಯ್‌ ಕೆಳಗೆ ಬೀಳುತ್ತಿರುವ ದೃಶ್ಯ ಭಯಾನಕವಾಗಿದೆ. ಮಹಡಿಯಲ್ಲಿನ ದೊಡ್ಡ ಕಿಟಕಿಯಿಂದ ಉದಯ್‌ ಕೆಳಕ್ಕೆ ಬಿದ್ದಿದ್ದಾನೆ. ನಾಯಿ ಓಡಿಸಲು ಜೋರಾಗಿ ಓಡಿ ಹೋಗಿದ್ದು, ನಿಯಂತ್ರಣ ಸಿಕ್ಕಿಲ್ಲ. ನಾಯಿ ಮಹಡಿಯಲ್ಲಿ ಬಲಕ್ಕೆ ತಿರುಗಿ ತಪ್ಪಿಸಿಕೊಂಡಿದೆ. ಉದಯ್‌ ಕೆಳಕ್ಕೆ ಬಿದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+