Viral Video: ನ್ಯಾಯಾಲಯದ ವಿಚಾರಣೆ ಸಮಯದಲ್ಲೇ ಮಹಿಳೆಗೆ ಮುತ್ತಿಟ್ಟ ವಕೀಲ, ಇಲ್ಲಿದೆ ವೈರಲ್ ವಿಡಿಯೋ!
Viral Video: ಈಗೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ಹಾಗೂ ಸುದ್ದಿಗಳು ವೈರಲ್ ಆಗುವುದು ಇದೆ. ಇದೀಗ ಗುರುವಾರ ವೈರಲ್ ಆಗಿರುವ ವಿಡಿಯೋದಿಂದ ನ್ಯಾಯಾಂಗದಲ್ಲಿ ನಡೆದಿರುವ ಘಟನೆ ದೇಶದಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ದೆಹಲಿ ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಮುನ್ನ ವಕೀಲರೊಬ್ಬರು ಮಹಿಳೆಯೊಬ್ಬರಿಗೆ ಮುತ್ತಿಟ್ಟಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಕೆಲವೊಂದು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಏಕಾಏಕಿ ವೈರಲ್ ಆಗುವುದು ಇದೆ. ಇಂದು ವೈರಲ್ ಆಗಿರುವ ವಿಡಿಯೋ ಹಲವು ಚರ್ಚೆಗೆ ಕಾರಣವಾಗಿದೆ. ಈಚೆಗೆ ನ್ಯಾಯಾಲಯದಲ್ಲಿ ವಾದ - ವಿವಾದ ನಡೆಯುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಶೌಚಾಲಯದಲ್ಲಿ ಇದ್ದ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಆ ವ್ಯಕ್ತಿ ಬಾತ್‌ರೂಮ್‌ಗೆ ಹೋಗುತ್ತಿದ್ದರೂ ವರ್ಚುಲ್ ಮೂಲಕ ಹಾಜರಿದ್ದರು. ಆ ವ್ಯಕ್ತಿಯ ಮೇಲೆ ಕೋರ್ಟ್ ಕ್ರಮ ತೆಗೆದುಕೊಂಡಿತ್ತು. ಇದೀಗ ಲಾಯರ್ ಎಡವಟ್ಟೊಂದು ವೈರಲ್ ಆಗುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ವೃತ್ತಿಪರ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ದೆಹಲಿ ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಮುನ್ನ ವಕೀಲರೊಬ್ಬರು ಮಹಿಳೆಯೊಬ್ಬರಿಗೆ ಮುತ್ತಿಟ್ಟಿರುವುದು ಆ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಇದೀಗ ವೈರಲ್ ಆಗುತ್ತಿದೆ. ವಕೀಲರೊಬ್ಬರು ಅದೂ ಕೋರ್ಟ್ ಕಲಾಪದ ಸಮಯದಲ್ಲಿ ಈ ರೀತಿ ಮಾಡುತ್ತಿರುವುದಕ್ಕೆ ಜನ ಛೀಮಾರಿ ಹಾಕಿದ್ದಾರೆ. ನ್ಯಾಯಾಲಯದ ಪ್ರೋಟೋಕಾಲ್‌ಗಳ ನಡುವೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದ್ದ ಪ್ರಕರಣವೊಂದರ ಆನ್‌ಲೈನ್ ವಿಚಾರಣೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಘಟನೆಯು ಮಂಗಳವಾರ ನಡೆದಿದೆ ಎಂದು ಹೇಳಲಾಗಿದ್ದು, ಇದೀಗ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿಚಾರಣೆಗೆ ನ್ಯಾಯಾಧೀಶರು ಬರುವ ಮುಂಚೆ ನಡೆದಿರುವ ಘಟನೆಗಳಿವೆ. ಪ್ರಕರಣವೊಂದರ ವಿಚಾರಣೆ ನಡೆಯುವುದಕ್ಕೆ ಕೆಲವೇ ನಿಮಿಷಗಳ ಮುಂಚೆ ವಕೀಲರು ಮಹಿಳೆಯೊಬ್ಬರೊಂದಿಗೆ ಆತ್ಮೀಯವಾಗಿ ವರ್ತಿಸಿದ್ದು ಮುತ್ತನ್ನೂ ಕೊಟ್ಟಿದ್ದಾರೆ. ಈ ವೇಳೆ ಇತರೆ ವಕೀಲರು ಹಾಗೂ ಸಾರ್ವಜನಿಕರು ನ್ಯಾಯಾಧೀಶರ ಆಗಮನಕ್ಕಾಗಿ ಕಾದು ಕುಳಿತಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ ಸೀರೆಯುಟ್ಟ ಮಹಿಳೆಯೊಬ್ಬರು ವಕೀಲರ ಮುಂದೆ ನಿಂತಿರುವುದು ಇದೆ. ನಂತರ ವಕೀಲರು ಆಕೆಯ ಕೈ ಹಿಡಿದು ಹತ್ತಿರಕ್ಕೆ ಎಳೆದುಕೊಳ್ಳುತ್ತಾರೆ. ಮಹಿಳೆ ಹಿಂಜರಿಯುತ್ತಿರುವಂತೆ ತೋರುತ್ತದೆ ಅಲ್ಲದೇ ವಿರೋಧಿಸುವುದಕ್ಕೂ ಪ್ರಯತ್ನಿಸಿದ್ದಾರೆ ಎನ್ನುವಂತಿದೆ. ಆದರೆ ವಕೀಲರು ಆಕೆಗೆ ಮುತ್ತುಕೊಟ್ಟಿದ್ದಾರೆ. ಆದರೆ ವಕೀಲರು ಮುತ್ತುಕೊಟ್ಟ ಮೇಲೆ ನಕ್ಕಿರುವುದು ಸಹ ರೆಕಾರ್ಡ್ ಆಗಿದೆ.
Welcome to Digital India Justice 😂
— ShoneeKapoor (@ShoneeKapoor) October 15, 2025
Court is online… but judge forgot it’s LIVE! ☠️
When tech meets tradition
— and the camera off button loses the case! 🤣 pic.twitter.com/1GbfOFQ6w7
Welcome to Digital India Justice 😂: ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಡಿಜಿಟಲ್ ಇಂಡಿಯಾ ನ್ಯಾಯಕ್ಕೆ ಸುಸ್ವಾಗತ 😂 ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದಕ್ಕೆ ಶುರುವಾಗಿದೆ. ಆದರೆ ಈ ಘಟನೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications