ವಿಡಿಯೋ: ಭಾರತೀಯ ಸೈನ್ಯದ ಟ್ರಕ್ ಮೇಲೆ ಕಲ್ಲೆಸೆತ

Subscribe to Oneindia Kannada

ಶ್ರೀನಗರ, ಏಪ್ರಿಲ್, 18: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರು ಮತ್ತು ಭಾರತೀಯ ಸೇನೆ ನಡುವೆ ಪ್ರತಿದಿನ ಘರ್ಷಣೆ ನಡೆಯುತ್ತಿದೆ. ಹುಡುಗಿಯೊಬ್ಬಳ ಮೇಲೆ ಸೈನಿಕರು ಅತ್ಯಾಚಾರ ನಡೆಸಿದ್ದಾರೆ ಎಂಬ ಪ್ರಕರಣದ ನಂತರ ಆರಂಭವಾದ ಘರ್ಷಣೆ ನಿಯಂತ್ರಣಕ್ಕೆಬಂದಿಲ್ಲ.

ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾ ಟೌನ್ ನಲ್ಲಿ ಸೈನಿಕರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಇದಾದ ಮೇಲೆ ನಿಜವಾದ ಆರೋಪಿಗಳನ್ನು ಬಂಧಿಸಿ ಅದನ್ನು ಬಿಟ್ಟು ಎಲ್ಲ ಸೈನಿಕರ ಮೇಲೆ ಆರೋಪ ಮಾಡಬೇಡಿ ಎಂಬ ಮಾತುಗಳು ಕೇಳಿಬಂದಿದ್ದವು.[ಹುತಾತ್ಮ ಯೋದನ ಸ್ಮರಿಸಿದ ಭಾರತ]

army

ಸೈನ್ಯದ ವಾಹನದ ಮೇಲೆ ಸ್ಥಳೀಯರು ಯಾವ ರೀತಿಯಾಗಿ ಕಲ್ಲು ಎಸೆದು ಆಕ್ರೋಶ ಹೊರಹಾಕುತ್ತಿದ್ದಾರೆ ಎಂಬುದನ್ನು ಈ ವಿಡಿಯೋ ಹೇಳುತ್ತದೆ. ಸೈನ್ಯದ ಟ್ರಕ್ ಮೇಲೆ ದಾಳಿ ಮಾಡಿರುವರ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಇಬ್ಬರು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.[ಹಿಮದಡಿ ಸಿಕ್ಕಿದ್ದರೂ ಬದುಕಿ ಬಂದಿದ್ದ ಹನುಮಂತಪ್ಪ]

ಮುಂದುವರಿದ ಪ್ರತಿಭಟನೆ: ಈ ಹಿಂದೆ ಹಂದ್ವಾರ ಹಾಗೂ ಕುಪ್ವಾರದಲ್ಲಿ ನಡೆಸಲಾಗಿದ್ದ ಪ್ರತಿಭಟನೆಯಲ್ಲಿ ಈ ವರೆಗೂ 5 ಮಂದಿ ಸಾವನ್ನಪ್ಪಿದ್ದರು. ಇದೀಗ ಮತ್ತೆ ಹಂದ್ವಾರ, ಕ್ರಾಲ್ಗುಂಡ್ ಮತ್ತು ತ್ರೆಹ್ಗಾಮ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 150ಕ್ಕೂ ಹೆಚ್ಚು ಯುವಕರು ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮ್ಮಿ ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸ್ಥಳೀಯ ನಾಗರಿಕರು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿಕೊಂಡು ಬನ್ನಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After massive clashes between the security personnels and the Kashmiri locals over the alleged molestation of girl in Handwara town, now on Monday, April 18, the video that is surfaced and going viral on social media allegedly shows an Indian Army truck being attacked by locals. In that video, it is clearly seen that the agitated mob are throwing stones and hitting sticks (Lathies) on the magnetic Army truck which forced the Army personnel to take back the truck.
Please Wait while comments are loading...