Get Updates
Get notified of breaking news, exclusive insights, and must-see stories!

Dairy Milk: ಡೈರಿ ಮಿಲ್ಕ್‌ನಲ್ಲಿ ಜೀವಂತ ಹುಳ: ವಿಡಿಯೋ ವೈರಲ್‌

ಇನ್ನೇನು ಪ್ರೇಮಿಗಳ ದಿನಕ್ಕೆ ಇನ್ನೇರಡು ದಿನವಷ್ಟೇ ಬಾಕಿ ಇದೆ. ನಿಮ್ಮ ಸಂಗಾತಿಗೆ ಪ್ರೀತಿಯ ಉಡುಗೊರೆ ಜೊತೆ ಅವರ ಮೆಚ್ಚಿನ ಚಾಕಲೇಟ್‌ ಕೊಡಬೇಕು ಎಂದು ಕೊಂಡಿದ್ದೀರಾ..? ಹಾಗಿದ್ದರೆ ಈ ಸ್ಟೋರಿ ಓದಿ ಚಾಕಲೇಟ್‌ ಖರೀದಿಸುವ ಮುನ್ನ ಎಚ್ಚರ ವಹಿಸಿ.

ವಾಲೆಂಟೈನ್ಸ್ ಡೇಗೂ ಮುನ್ನಬರುವ ರೋಸ್‌ ಡೇ, ಪ್ರಪೋಸ್‌ ಡೇ, ಪ್ರಾಮಿಸ್‌ ಡೇ, ಹಗ್‌ ಡೇ ಹೀಗೆ ವಿವಿಧ ದಿನಗಳನ್ನು ಪ್ರೇಮಿಗಳು ಆಚರಿಸುತ್ತಾರೆ. ಅದೇ ರೀತಿ ಚಾಕಲೇಟ್‌ ಡೇ ದಿನ ಆಚರಿಸಲು ಚಾಕಲೇಟ್‌ ಖರೀದಿಸಿದ ವ್ಯಕ್ತಿಯೊಬ್ಬರಿಗೆ ಕ್ಯಾಡ್‌ಬರಿ ಡೈರಿ ಮಿಲ್ಕ್‌ನಲ್ಲಿ ಜೀವಂತ ಹುಳ ಪತ್ತೆಯಾಗಿದ್ದು, ಬಾಯಿ ಸಿಹಿ ಮಾಡಬೇಕಿದ್ದ ಚಾಕಲೇಟ್‌ ಆ ದಿನವನ್ನೇ ಕಹಿ ಮಾಡಿದೆ.

Viral Video: Hyderabad Man Who Found Live Worm in Cadbury Dairy Milk

ಫೆಬ್ರವರಿ ಮೊದಲ ವಾರದಲ್ಲಿ ಹೈದರಾಬಾದ್‌ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಖರೀದಿಸಿದ ಕ್ಯಾಡ್‌ಬರಿ ಡೈರಿ ಮಿಲ್ಕ್‌ನಲ್ಲಿ ಜೀವಂತ ಹುಳವೊಂದು ಕಂಡು ಬಂದಿದ್ದು, ರಾಬಿನ್ ಝಾಕಿಯಸ್ ಎಂಬ ಎಕ್ಸ್‌ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಚಾಕಲೇಟ್‌ನಲ್ಲಿ ಜೀವಂತ ಹುಳ ತೆವಳುವುದನ್ನು ಗಮನಿಸಬಹುದು. ಈ ವಿಡಿಯೋ ಹಂಚಿಕೊಂಡಿರುವ ರಾಬಿನ್ ಝಾಕಿಯಸ್ 'ರತ್ನದೀಪ್ ಮೆಟ್ರೋ ಅಮೀರಪೇಟೆಯಲ್ಲಿ ಖರೀದಿಸಿದ ಕ್ಯಾಡ್‌ಬರಿ ಚಾಕೊಲೇಟ್‌ನಲ್ಲಿ ಹುಳು ಹರಿದಾಡುತ್ತಿರುವುದು ಕಂಡುಬಂದಿದೆ. ಅವಧಿ ಮುಗಿಯುವ ಉತ್ಪನ್ನಗಳಿಗೆ ಗುಣಮಟ್ಟದ ಪರಿಶೀಲನೆ ಇದೆಯೇ? ಸಾರ್ವಜನಿಕರ ಆರೋಗ್ಯದ ಅಪಾಯಗಳಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದು, ಡೈರಿ ಮಿಲ್ಕ್ ಇಂಡಿಯಾ ಹಾಗೂ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ಗೆ ಟ್ಯಾಗ್‌ ಮಾಡಿ ಪ್ರಶ್ನಿಸಿದ್ದಾರೆ.

ರಾಬಿನ್ ಝಾಕಿಯಸ್ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಕ್ಯಾಡ್ಬರಿ ಡೈರಿ ಮಿಲ್ಕ್ ರೋಸ್ಟ್ ಆಲ್ಮಂಡ್ ಚಾಕಲೇಟ್‌ ಖರೀದಿಸಿದ ಬಿಲ್‌ ಕೂಡ ಶೇರ್‌ ಮಾಡಲಾಗಿದೆ. ಚಾಕಲೇಟ್‌ನ ಹಿಂಭಾಗದಲ್ಲಿ ಸಣ್ಣ ಹುಳು ಹರಿದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.45 ರೂಪಾಯಿಯ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕಲೇಟ್‌ ಇದಾಗಿದ್ದು, ಈ ಪ್ಯಾಕ್‌ನಲ್ಲಿ ಮುಕ್ತಾಯ ದಿನಾಂಕವೂ ಅಸ್ಪಷ್ಟವಾಗಿ ಕಾಣುತ್ತಿದೆ. ಜೊತೆಗೆ ಇತರ ಸಂಬಂಧಿತ ವಿವರಗಳನ್ನು ಸಹ ಶೇರ್‌ ಮಾಡಲಾಗಿದೆ. ಈ ವಿಡಿಯೋ ಶೇರ್‌ ಆಗುತ್ತಿದ್ದಂತೆ ನೆಟ್ಟಿಗರು ಅಂಗಡಿಯವರ ವಿರುದ್ಧ ಕಿಡಿಕಾರಿದ್ದು, ದಿನಾಂಕ ಮುಗಿದ ತಿನಿಸುಗಳನ್ನು ಮಾರಾಟ ಮಾಡುವುದು ತಪ್ಪು ಎಂದಿದ್ದಾರೆ.

ಗುಲಾಬ್ ಜಾಮೂನ್‌ನಲ್ಲಿ ಜೀವಂತ ಹುಳ

ಇನ್ನು ಈ ಹಿಂದೆ ಚೆನ್ನೈನಲ್ಲಿ ವ್ಯಕ್ತಿಯೊಬ್ಬರು ಖರೀಸಿದ ಗುಲಾಬ್ ಜಾಮೂನ್‌ನಲ್ಲಿ ಜೀವಂತ ಹುಳ ಪತ್ತೆಯಾಗಿತ್ತು. ಟಿಎನ್‌ 38 ಫುಡ್ಡಿ ಎನ್ನುವ ಬ್ಲಾಗರ್‌ರೊಬ್ಬರು ಗುಲಾಬ್‌ ಜಾಮೂನ್‌ ಮೇಲೆ ಬಿಳಿ ಹುಳ ಓಡಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು.ವೈರಲ್‌ ಆದ ವಿಡಿಯೋದಲ್ಲಿ ಗುಲಾಬ್ ಜಾಮೂನ್‌ ಬಾಕ್ಸ್​​ ಕೂಡ ತೋರಿಸಲಾಗಿದ್ದು, ಬಾಕ್ಸ್​​ನಲ್ಲಿ ಚೆನ್ನೈನ ಅಶೋಕ್ ನಗರದಲ್ಲಿರುವ ಅಡ್ಯಾರ್ ಆನಂದ ಭವನದ ಔಟ್‌ಲೆಟ್‌ಅನ್ನು ಉಲ್ಲೇಖಿಸಲಾಗಿತ್ತು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+