ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು!

Recommended Video

      ಮಧ್ಯಪ್ರದೇಶದಲ್ಲಿ ವಿದ್ಯಾರ್ಥಿ ಕಾಲಿಗೆ ಬಿದ್ದ ಗುರುಗಳ ವಿಡಿಯೋ ವೈರಲ್ | Oneindia Kannada

      ಮಂಡ್ಸೌರ್(ಮಧ್ಯಪ್ರದೇಶ), ಸೆಪ್ಟೆಂಬರ್ 28: ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಕಾಲಿಗೆ ಬೀಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ಮಧ್ಯಪ್ರದೇಶದ ಮಂಡ್ಸೌರ್ ನ ರಾಜೀವ್ ಗಾಂಧಿ ಸ್ನಾತಕೋತ್ತರ ಕಾಲೇಜಿನ ಅಧ್ಯಾಪಕರೊಬ್ಬರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನ ವಿದ್ಯಾರ್ಥಿಗಳ ಪಾದ ಮುಟ್ಟಿ ಕ್ಷಮೆ ಕೋರಿದ್ದಾರೆ!

      ಸೆಪ್ಟೆಂಬರ್ 26 ರಂದು ಕಾಲೇಜಿನ ಎದುರು ವಿದ್ಯಾರ್ಥಿಗಳು 'ಭಾರತ್ ಮಾತಾ ಕೀ ಜೈ' ಎಂಬ ಘೋಷಣೆ ಕೂಗುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಈ ಅಧ್ಯಾಪಕರು ಆದೇಶಿಸಿದ್ದರು. ಇದರಿಂದ ಕೋಪಗೊಂಡ ವುದ್ಯಾರ್ಥಿಗಳು, 'ಕ್ಷಮೆ ಕೇಳುವಂತೆ' ಅವರನ್ನು ಒತ್ತಾಯಿಸಿದ್ದರು. ಇದರಿಂದ ಬೇಸರಗೊಂಡ ಅಧ್ಯಾಪಕರು, ಕಾಲೇಜಿನ ಆವರಣದಲ್ಲಿ ಸಿಕ್ಕ ಎಲ್ಲಾ ವಿದ್ಯಾರ್ಥಿಗಳ ಕಾಲಿಗೂ ಬಿದ್ದು, ಕ್ಷಮೆ ಯಾಚಿಸಿದ ಈ ವಿಡಿಯೋ ವೈರಲ್ ಆಗಿದೆ.

      Viral video from Madhya Pradesh: Professor touches students feet as apology

      ಆದರೆ, ಮಕ್ಕಳು 'ಭಾರತ್ ಮಾತಾ ಕೀ ಜೈ' ಎಂಬ ಘೋಷಣೆ ಕೂಗುವುದನ್ನು ಅವರು ವಿರೊಧಿಸಿರಲಿಲ್ಲ. ಕಾಲೇಜಿನ ಎದುರು ಬಹಳ ಗಲಾಟೆ ಕೇಳಿಬರುತ್ತಿದ್ದರಿಂದ ಗಲಾಟೆ ಮಾಡದಂತೆ ಅವರು ಮನವಿ ಮಾಡಿದ್ದರು ಅಷ್ಟೇ. ಈ ಘಟನೆಯಿಂದ ತೀವ್ರ ನೋವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ರವೀಂದ್ರ ಸೋಹ್ನಿ ವಿಷಾದ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+