ವಿಡಿಯೋ ವೈರಲ್: ಚಳಿಯಲ್ಲಿ ಮುದುಡಿ ಮಲಗಿದ್ದ ಮಗುವಿಗೆ ನಾಯಿ ಮಾಡಿದ್ದೇನು?

ಪುಟ್ಟ ಮಗುವೊಂದು ಚಳಿಯಲ್ಲಿ ಮುದುರಿಕೊಂಡು ಗಾಢವಾಗಿ ನಿದ್ರಿಸುತ್ತಿದೆ... ಬಳಿಗೆ ಬಂದ ನಾಯಿಯೊಂದು ಅದಕ್ಕೆ ಹೊದಿಕೆ ಹಾಕಿ ಅದನ್ನು ಬೆಚ್ಚಗೆ ಮಾಡುತ್ತಿದೆ...

ಕ್ಯೂಟ್ ಕ್ಯೂಟ್ ಅನ್ನಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಗ್ ಬಿ ಇದನ್ನು ಅಮಿತಾಬ್ ಬಚ್ಚನ್ ಸಹ ರೀಟ್ವೀಟ್ ಮಾಡಿದ್ದಾರೆ.

ನಾಯಿಗಳು ಮನುಷ್ಯನ ಅತ್ಯಂತ ಆಪ್ತ ಸ್ನೇಹಿತರು ಅನ್ನೋ ಮಾತಿದೆ. ಅದರಲ್ಲೂ ಸಾಕು ನಾಯಿಗಳಿಗೆ ಮನೆಯ ಮಕ್ಕಳೆಂದರೆ ಅಚ್ಚುಮೆಚ್ಚು... ಪ್ರಾಣವನ್ನು ಒತ್ತೆ ಇಟ್ಟಾದರೂ ಸರಿ ಮನೆಜನರ ರಕ್ಷಣೆಗೆ ಮುಂದಾಗುವ ನಾಯಿಗಳು, ಆ ಮನೆಯ ಪುಟ್ಟ ಮಕ್ಕಳಲನ್ನು ಎಷ್ಟೆಲ್ಲ ಜತನದಿಂದ ಕಾಪಿಡುತ್ತವೆ ಎಂಬುದನ್ನು ಈ ವಿಡಿಯೋ ಸಾಕ್ಷಿಯಾಗಿದೆ.

ಇತ್ತೀಚೆಗಷ್ಟೇ ಪ್ರವಾಹದಲ್ಲಿ ಮುಳುಗುತ್ತಿದ್ದ ಮನೆಜನರನ್ನು ಕಾಪಾಡಲು ನಾಯಿಯೂ ಪ್ರವಾಹಕ್ಕೆ ಹಾರಿದ ಘಟನೆಯೊಂದು ಸುದ್ದಿಯಾಗಿತ್ತು. ಮಾಲೀಕನ ಪ್ರಾಣ ಉಳಿಸುವುದಕ್ಕಾಗಿ ತನ್ನ ಪ್ರಾಣವನ್ನೂ ಒತ್ತೆ ಇಟ್ಟ ಹಲವು ನಾಯಿಗಳ ನಿಯತ್ತಿನ ಕತೆಯನ್ನೂ ಕೇಳಿದ್ದೇವೆ.

Viral Video: Dog Nurtures A Baby Who Is Sleeping

ಪ್ರಾಣಿ ಎನ್ನಿಸದೆ ಕುಟುಂಬದ ಸದಸ್ಯರಲ್ಲಿ ಒಂದಾಗಿ ಬದುಕುವ ನಾಯಿಗಳ ಇಂಥ ನಡವಳಿಕೆ ಪ್ರಾಣಿಗಳಲ್ಲೂ ಇರುವ ಮಾನವೀಯ ಅಂತಃಕರಣಕ್ಕೆ ಸಾಕ್ಷ್ಯವೆನ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+