ಚಲಿಸುತ್ತಿದ್ದ ಆಂಬುಲೆನ್ಸ್‌ನಿಂದ ಸ್ಟ್ರೆಚರ್ ಸಮೇತ ರಸ್ತೆ ಬಿದ್ದ ರೋಗಿ...Video Viral
Ambulance Video Viral: ಆಂಬ್ಯುಲೆನ್ಸ್ ಎಂದರೆ ಜೀವ ರಕ್ಷಕ. ಅನಾರೋಗ್ಯ, ತುರ್ತು ಪರಿಸ್ಥಿತಿಗಳಲ್ಲಿ ಜನರ ಜೀವ ಉಳಿಸುವ ಆಂಬ್ಯುಲೆನ್ಸ್ ಚಾಲಕರು ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಸೇರಿದ್ದು, ಅಂಗಾಂಗ ರವಾನಿಸಿದ್ದ ಉದಾಹರಣೆ ನೋಡಿದ್ದೇವೆ. ಕೆಲವೊಮ್ಮೆ ಇದೇ ಚಾಲಕರ ನಿರ್ಲಕ್ಷ್ಯತನದಿಂದ ಅಮಾನವೀಯ, ಸಹನೀಯ ಘಟನೆಗಳು ನಡೆದು ಬಿಡುತ್ತವೆ ಎಂಬುದಕ್ಕೆ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ.
ವೈರಲ್ ಆಗುತ್ತಿರುವ ಈ ವಿಡಿಯೋ ತಮಿಳುನಾಡಿನ ಕೂನೂರಿನಲ್ಲಿ ನಡೆದ ಘಟನೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 'ವಿಡಿಯೋ ಮೇಲಿನ ಶಿರ್ಷಿಕೆಯಲ್ಲಿ ತಮಿಳುನಾಡಿನ ಕೂನೂರಿನಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಆಂಬ್ಯುಲೆನ್ಸ್ ವಾಹನ ಬಾಗಿಲು ಆಕಸ್ಮಾತ್ ಆಗಿ ತೆರೆದುಕೊಳ್ಳುತ್ತಿದ್ದಂತೆ ಒಳಗಿದ್ದ ರೋಗಿಯು ಸ್ಟ್ರೆಚರ್ ಸಮೇತ ಜೊತೆಗೆ ರಸ್ತೆಗೆ ಬಿದ್ದ ಘಟನೆ ನಡೆದಿದೆ' ಎಂದು ಬರೆಯಲಾಗಿದೆ.

ವಿಡಿಯೋದಲ್ಲಿ ಏನಿದೆ? ಎಲ್ಲಿಯ ಘಟನೆ ಇದು?
ಆಂಬುಲೆನ್ಸ್ ಚಾಲಕ ವಿಚಲಿತನಾಗದೆ, ಏನು ಆಗಿಯೇ ಇಲ್ಲ ಎಂಬಂತೆ ಸಲೀಸಾಗಿ ವಾಹನ ಮುನ್ನಡೆಸಿಕೊಂಡು ಹೋಗಿದ್ದಾನೆ. ಜೀವ ಉಳಿಸುವ ವಾಹನವು ಇಂಥಹ ಮಹಾ ನಿರ್ಲಕ್ಷ್ಯಕ್ಕೆ ಉದಾಹರಣೆ ಆಗಿದ್ದು ವೈರಲ್ ವಿಡಿಯೋದಲ್ಲಿ ನೀವು ನೋಡಬಹುದಾಗಿದೆ.
ಈ ವಿಡಿಯೋ ತಮಿಳುನಾಡಿನ ಕೂನೂರಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಆಂಬ್ಯುಲೆನ್ಸ್ ವಾಹನ ನೋಡಿದರೆ ಇದು ಭಾರತದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಘಟನೆ ತಮಿಳುನಾಡಿನ ಕುನೂರಿನಲ್ಲಿ ನಡೆದಿದ್ದು ನಿಜ. ಆದರೆ ಹಳೆಯ ಘಟನೆಯನ್ನು ಇಂದಿನ ಭಾರತದ ಅಲ್ಲದ ವಿಡಿಯೋಗೆ ಸೇರಿಸಿ ವೈರಲ್ ಮಾಡಲಾಗಿದೆ. ವಿಡಿಯೋ ಎಲ್ಲಿಯದ್ದಾದರೇನು. ಆಂಬುಲೆನ್ಸ್ ಚಾಲಕರ ಇಂತಹ ನಿರ್ಲಕ್ಷ್ಯ ಜೀವ ಉಳಿಸಿಕೊಳ್ಳಲು ಪರದಾಡುವ ರೋಗಿಗಳಿಗೆ ಮರಣ ಶಾಸನ ಬರೆದು ಬಿಡುತ್ತವೆ.
ಇನ್ನೂ ಈ ವೈರಲ್ ವಿಡಿಯೋಗೆ ಸಾಕಷ್ಟು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವಿಡಿಯೋ ಭಾರತದ್ದಲ್ಲ, ಬ್ರೆಜಿಲ್‌ನದ್ದು ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಇಂತದ್ದೇ ಘಟನೆ ನಿಜವಾಗಿಯೂ ಕೂನೂರಿನಲ್ಲಿ ಸಂಭವಿಸಿದೆ. ಆದರೆ ಈ ವಿಡಿಯೋ ಅದರದ್ದಲ್ಲ. ಬ್ರೇಜಿನಲ್ ನದ್ದು ಎಂದು ಕಾಮೆಂಟ್ ಮೂಲಕ ಸತ್ಯ ತಿಳಿಸಿದ್ದಾರೆ.
तमिलनाडु के कून्नूर में दिल दहला देने वाला वाकया,
— Arzoo Alam (@ArzooAl34714966) November 10, 2025
एम्बुलेंस का दरवाज़ा खुला और मरीज़ स्ट्रेचर समेत सड़क पर गिर गया
लेकिन ड्राइवर को ज़रा भी खबर नहीं हुई, वो आगे बढ़ता रहा
ज़िंदगी बचाने वाली गाड़ी ही लापरवाही की मिसाल बन गई pic.twitter.com/QfFaD3GVAM
ಆಂಬ್ಯುಲೆನ್ಸ್ ಚಾಲಕನು ಇಷ್ಟೊಂದು ಅಜಾಗರೂಕನಾಗಿರಲು ಹೇಗೆ ಸಾಧ್ಯ? ಅವನು ಇದರ ಬಗ್ಗೆ ಎಚ್ಚರದಿಂದಿರಬೇಕು.ಜೀವ ಉಳಿಸುವ ಆಂಬ್ಯುಲೆನ್ಸ್ ನಿರ್ಲಕ್ಷ್ಯಕ್ಕೆ ಉದಾಹರಣೆ ಆಗಿದೆ ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.
ತಮಿಳುನಾಡಿನ ಕೂನೂರಿನಲ್ಲಿ ನಡೆದಿದ್ದೇನು?
ತಮಿಳುನಾಡಿನ ಕೂನೂರಿನಲ್ಲಿ ಆಂಬ್ಯುಲೆನ್ಸ್ ಓಮಿನಿ ವಾಹನವು ರಸ್ತೆಯಲ್ಲಿ ಚಲಿಸುವಾಗ ಇದೇ ರೀತಿ ಒಳಗೆ ಸ್ಟ್ರೆಚ್ಚರ್ ಮೇಲೆ ಮಲಗಿದ್ದ ವ್ಯಕ್ತಿ ಅದರ ಸಮೇತ ರಸ್ತೆಗೆ ಬಿದ್ದಿದ್ದರು. ರಸ್ತೆ ಮೇಲಿನ ಹಂಪ್ ದಾಟುತ್ತಿದ್ದಂತೆ ಸರಿಯಾಗಿ ಹಾಕಿರದ ಓನಿಮಿಯ ಡಿಕ್ಕಿ ಬಾಗಿಲು ತಾನಾಗೇ ತೆರೆದುಕೊಂಡಿದೆ. ನೋಡ ನೋಡುತ್ತಿದ್ದಂತೆ ಸ್ಟ್ರೆಚರ್ ರಸ್ತೆಗೆ ಜಾರಿದೆ. ಈ ವಿಡಿಯೋ ವೈರಲ್ ಆಗಿತ್ತು. ಇದು ಹಳೆಯ ವಿಡಿಯೋ ಆಗಿದ್ದು, ಆ ಘಟನೆಯನ್ನೇ ಈಗಿನ ಬ್ರೇಜಿಲ್ ವಿಡಿಯೋಗೆ ತಳುಕು ಹಾಕಿ ವೈರಲ್ ಮಾಡಲಾಗುತ್ತಿದೆ.
-
Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್ -
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications