ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಎಂದರೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮಾಡಿದಂತಲ್ಲ: ರಾಹುಲ್ ಗಾಂಧಿಗೆ ಬಿಜೆಪಿ ಲೇವಡಿ

|
Google Oneindia Kannada News

ನವದೆಹಲಿ, ನವೆಂಬರ್ 23: ಕೊರೊನಾ ವೈರಸ್ ಲಸಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನಾಲ್ಕು ಪ್ರಮುಖ ವಿಚಾರಗಳನ್ನು ದೇಶಕ್ಕೆ ವಿವರಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪಟ್ಟಿ ನೀಡಿದ್ದಾರೆ. ಇದಕ್ಕೆ ತೀಕ್ಷ್ಣ ತಿರುಗೇಟು ನೀಡಿರುವ ವಿಜ್ಞಾನಿ ಮತ್ತು ಬಿಜೆಪಿ ಮುಖಂಡ ಡಾ. ವಿಜಯ್ ಚೌಥೈವಾಲೆ, ಲಸಿಕೆಯ ಆಯ್ಕೆ ಎನ್ನುವುದು ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಿದಂತೆ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕೊವಿಡ್ ಲಸಿಕೆ ವಿತರಣೆ: ನ.24ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಭೆಕೊವಿಡ್ ಲಸಿಕೆ ವಿತರಣೆ: ನ.24ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಭೆ

1. ಇರುವ ಎಲ್ಲ ಕೋವಿಡ್ ಲಸಿಕೆ ಮಾದರಿಗಳಲ್ಲಿ ಭಾರತ ಸರ್ಕಾರವು ಯಾವುದನ್ನು ಆಯ್ದುಕೊಳ್ಳಲಿದೆ ಮತ್ತು ಏಕೆ?

2. ಲಸಿಕೆಯನ್ನು ಯಾರಿಗೆ ಮೊದಲು ನೀಡಲಾಗುತ್ತದೆ ಮತ್ತು ಲಸಿಕೆಗಳ ಹಂಚಿಕೆಯ ಕಾರ್ಯಯೋಜನೆ ಏನು?

3. ಉಚಿತ ಲಸಿಕೆ ನೀಡಲು ಪಿಎಂ ಕೇರ್ಸ್ ನಿಧಿಯನ್ನು ಬಳಸಲಾಗುತ್ತದೆಯೇ?

4. ಯಾವ ಕಾಲಕ್ಕೆ ಭಾರತದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತದೆ?

Vijay Chauthaiwale Reaction To Rahul Gandhis Questions On Coronavirus Vaccination

ಈ ಎಲ್ಲ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಉತ್ತರ ನೀಡಬೇಕು ಎಂದು ರಾಹುಲ್ ಗಾಂಧಿ ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ.

ಕೊವಿಡ್-19 ಲಸಿಕೆ ಪೈಪೋಟಿ: ಕೊವಿಡ್-19 ಲಸಿಕೆ ಪೈಪೋಟಿ: "Cheap And Best" ಬೆಲೆಗೆ ಸ್ಪುಟಿಕ್-ವಿ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಾ. ವಿಜಯ್ ಚೌಥೈವಾಲೆ, 'ಪ್ರಿಯ ರಾಹುಲ್ ಗಾಂಧಿ, ಲಸಿಕೆಯ ಆಯ್ಕೆ ಮಾಡುವುದು, ನೆಹರೂ ಕುಟುಂಬದ ಸದಸ್ಯ/ಸದಸ್ಯೆಯಾಗಿರುವ ಕಾರಣಕ್ಕೆ ಆತನ/ಆಕೆಯ ಸಾಮರ್ಥ್ಯವನ್ನು ಪರೀಕ್ಷಿಸದೆಯೇ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಅಲ್ಲ. ಹೀಗಾಗಿ ನೀವು ಗೋವಾದಲ್ಲಿ ನಿಮ್ಮ ರಜಾ ದಿನವನ್ನು ಎಂಜಾಯ್ ಮಾಡಿ. ಇದು ನಿಮಗೆ ಅರ್ಥಮಾಡಿಕೊಳ್ಳಲು ಬಹಳ ಸಂಕೀರ್ಣವಾಗಿದೆ' ಎಂದು ಲೇವಡಿ ಮಾಡಿದ್ದಾರೆ.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

English summary
BJP leader Dr Vijay Chauthaiwale said choice of vaccine is not the same as choice of Congress president. He was responded to Rahul Gandhi's questions on Coronavirus vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X