Viral Video: ಓಡುತ್ತಿದ್ದ ರೈಲಿನಲ್ಲೇ ಕೆಟಲ್ ಬಳಸಿದ ಮಹಿಳೆ: ಸುರಕ್ಷತೆಯ ಆತಂಕ! ಕ್ರಮಕ್ಕೆ ಮುಂದಾಯ್ತು ಕೇಂದ್ರ ರೈಲ್ವೆ
Indian Railways Safety Concerns: ಚಲಿಸುತ್ತಿರುವ ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ವಿದ್ಯುತ್ ಕೆಟಲ್ ಬಳಸಿ ತತ್‌ಕ್ಷಣದ ಆಹಾರ ತಿನಿಸು ನೂಡಲ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ರೈಲ್ವೆ ಸುರಕ್ಷತೆ, ಬೆಂಕಿ ಅವಘಡದಂತಹ ಸಂಭನೀಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತವಾಗುವಂತೆ ಮಾಡಿದೆ. ಈ ಮಹಿಳೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ರೈಲ್ವೆಯು ತಿಳಿಸಿದೆ.
ಮನೆ, ಪಿಜಿ, ಹಾಸ್ಟೆಲ್‌ಗಳಲ್ಲಿ ಬ್ಯಾಚುಲರ್ಸ್ ಕೆಟಲ್ ಬಳಕೆ ಮಾಡುವಂತೆ ಚಲಿಸುವ ರೈಲಿನಲ್ಲಿ ಮಹಿಳೆಯೊಬ್ಬರು ಬಳಸಿದ್ದ ಕಾನೂನು ಮತ್ತು ರೈಲ್ವೆ ಇಲಾಖೆಯ ನಿಯಮಗಳ ಪ್ರಕಾರ ಅಪರಾಧವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಮಹಿಳೆಯ ಪತ್ತೆಗೆ ರೈಲ್ವೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ರೈಲಿನಲ್ಲಿ ಅಪಾಯಕಾರಿ ವರ್ತನೆ ತೋರಿದ ಮತ್ತು ನಿಯಮ ಉಲ್ಲಂಘಿಸಿದ ಮಹಿಳೆ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ 147 (1) ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆ ಮರಾಠ ಭಾಷೆಯಲ್ಲಿ ಮಾತನಾಡುತ್ತಾರೆ. ರೈಲು ಬೋಗಿಯಲ್ಲಿ ಮೊಬೈಲ್ ಚಾರ್ಜರ್‌ಗೆಂದು ಮಾಡಿರುವ ಪೋರ್ಟ್‌ನಲ್ಲಿ ವಿದ್ಯುತ್ ಕೆಟಲ್ ವೈಯರ್ ಪ್ಲಗ್ ಮಾಡಿ ನೂಡಲ್ಸ್ ಸಿದ್ಧಪಡಿಸುತ್ತಿರುವುದು ಕಾಣಿಸುತ್ತದೆ. ಅಲ್ಲದೇ ಇದರಲ್ಲಿಯೇ ನಾನು ಚಹಾ ಮಾಡಿಕೊಡುವೆ ಅನ್ನುವ ಮಾತುಗಳ ಸಹ ಕೇಳಿ ಬಂದಿವೆ.
ರೈಲುಗಳ ಒಳಗೆ ಕೆಟಲ್ ಬಳಕೆ ಶಿಕ್ಷಾರ್ಹವಗಿದೆ. ಇದು ಕಾನೂನಿನ ಪ್ರಕಾರ ತಪ್ಪು. ಇಂತಹ ಘಟನೆಗಳಿಂದ ರೈಲ್ವೆಯಲ್ಲಿ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ವಿದ್ಯುತ್ ಕೆಟಲ್ ಕಿಡಿ ಹಾರಿ ಬೋಗಿಗೆ ಹಾನಿಯಾಗುವುದು, ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟಾಗಬಹುದು. ಬೃಹತ್ ಅವಘಡಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರೈಲಿನಲ್ಲಿ ಕೆಟಲ್ ಬಳಕೆ ನಿಷೇಧಿಸಲಾಗಿದ್ದರು, ಈ ಮಹಿಳೆಯು ಬಳಕೆ ಮಾಡಿದ್ದಾರೆ.
Travel Smart, Stay Safe!
— Central Railway (@Central_Railway) November 22, 2025
⚠️ High-voltage appliances like electric kettles can trigger sparks, fire risks, or electrical tripping inside train coaches.
Please do not use such devices and help maintain a safe environment on the train. 🚆#CentralRailway #ResponsibleRailyatri pic.twitter.com/X9jBE5PdEP
ಮಹಿಳೆ ವಿರುದ್ಧ ಸೂಕ್ತ ಕ್ರಮ
ರೈಲ್ವೆ ಇಲಾಖೆ ಇಷ್ಟು ನಿರ್ಲಕ್ಷ್ಯ ವಹಿಸಿತೆ?. ಹೀಗಾದರೆ ಪ್ರಯಾಣಿಕರಿಗೆ ಹೇಗೆ ಸಂಚಾರಕ್ಕೆ ಧೈರ್ಯ ಬರುತ್ತದೆ. ಇಂತಹವುಗಳ ಬಳಕೆಯಿಂದ ಬೋಗಿಯಲ್ಲಿನ ಎಸಿ, ಫ್ಯಾನ್ಸ್, ಸಮರ್ಪಕ ವಿದ್ಯುತ್ ಪೂರೈಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಕಳವಳ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸೆಂಟ್ರಲ್ ರೈಲ್ವೆಯು ತಪ್ಪಿತಸ್ಥ ಮಹಿಳಾ ಪ್ರಯಾಣಿಕಳನ್ನು ಹುಡುಕುತ್ತಿದೆ. ಕೂಡಲೇ ಕಾನೂನಿನ ಪ್ರಕಾಶ ಶಿಕ್ಷೆ ನೀಡುವುದಾಗಿ ತಿಳಿಸಿದೆ. ಜೊತೆಗೆ ಪ್ರಯಾಣಿಕರು ಸುರಕ್ಷಿತ ಹಾಗೂ ಕಾಳಜಿ ಪೂರ್ವ ಪ್ರಯಾಣ ಮಾಡುವಂತೆ ಕರೆ ನೀಡಿದೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ












Click it and Unblock the Notifications