ಉತ್ತರ ಪ್ರದೇಶ: ಅತ್ತೆಯನ್ನು ಕೊಲ್ಲಲು ಯತ್ನಿಸಿದ ಸೊಸೆ ಬಂಧನ

Posted By:
Subscribe to Oneindia Kannada

ಲಕ್ನೋ, ಜ. 12: ಹಾಸಿಗೆ ಮೇಲೆ ಕುಳಿತ ಅತ್ತೆಯ ಕೊರಳಿಗೆ ಬಟ್ಟೆ ಸುತ್ತಿ ಉಸಿರುಗಟ್ಟಿಸಲು ಯತ್ನಿಸಿದ ಸೊಸೆಯನ್ನು ಈಗ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಿಜ್ನೋರ್ ನಲ್ಲಿ ನಡೆದ ಈ ಘಟನೆಯ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ ಮೇಲೆ ಈ ಬೆಳವಣಿಗೆ ಕಂಡು ಬಂದಿದೆ.

ಸಂಗೀತಾ ಜೈನ್ ಎಂಬ ಸೊಸೆ 70 ವರ್ಷ ವಯಸ್ಸಿನ ಅತ್ತೆ ರಾಜರಾಣಿ ಜೈನ್ ಎಂಬುವವರನ್ನು ಹಿಗ್ಗಾಮುಗ್ಗಾ ಥಳಿಸಿ, ಕಾಲಿನಿಂದ ಒದ್ದು, ದೈಹಿಕ ಹಿಂಸೆ ನೀಡಿದ್ದಾರೆ. ತನ್ನ ತಾಯಿಗೆ ಪತ್ನಿ ಹಿಂಸೆ ಕೊಡುವ ವಿಷಯ ತಿಳಿದಿದ್ದರೂ ಪತಿ ಸಂದೀಪ್ ಕುಮಾರ್ ಜೈನ್ ಬಳಿ ಯಾವುದೇ ಸಾಕ್ಷಿ ಆಧಾರಗಳಿರಲಿಲ್ಲ. ಆದರೆ, ಸಿಸಿಟಿವಿ ದೃಶ್ಯಗಳು ಈಗ ಲಭ್ಯವಾಗಿದ್ದು, ಸಂಗೀತಾ ಜೈನ್ ಬಂಧನಕ್ಕೆ ಕಾರಣವಾಗಿದೆ.

Horrible Video UP Shocker

ಸೊಸೆ ಸಂಗೀತಾ ಜೈನ್ ಮತ್ತು ಅತ್ತೆ ರಾಜರಾಣಿಜೈನ್ ನಡುವೆ ಮುಂಚಿನಿಂದಲೂ ಕಿತ್ತಾಟ, ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಈ ಹಿಂದೆ ಸಂಗೀತಾ ವಿರುದ್ಧ ಪತಿ ಸಂದೀಪ್ ದೂರು ನೀಡಿದ್ದರು. ಪೊಲೀಸರಿಗೆ ಸಾಕ್ಷಿ ಒದಗಿಸಲು ಆಗಿರಲಿಲ್ಲ. ನಂತರ ಗುಟ್ಟಾಗಿ ಸಿಸಿಟಿವಿ ಕೆಮರಾಗಳನ್ನು ಅಳವಡಿಸಿದ್ದು ಈಗ ಪ್ರಯೋಜನಕ್ಕೆ ಬಂದಿದೆ.

ಲಭ್ಯ ವಿಡಿಯೋದಲ್ಲಿರುವ ಘಟನೆ ನಡೆದಿದ್ದು ಜನವರಿ 1ರಂದು ಎಂದು ತಿಳಿದು ಬಂದಿದೆ. ಅತ್ತೆಯನ್ನು ಸಾಯಿಸಲು ಸಂಗೀತಾ ನಿರ್ಧರಿಸಿ ಸಾಧ್ಯವಾದ ಎಲ್ಲಾ ರೀತಿ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ, ಇಷ್ಟೊಂದು ರೋಷಗೊಂಡು ಹಲ್ಲೆ ಮಾಡಲು ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಪತ್ನಿ ಸಂದೀಪ್ ಗೂ ಈ ಬಗ್ಗೆ ಗೊಂದಲವಿದೆ.

ಒಟ್ಟಾರೆ, ಸಾಮಾಜಿಕ ಜಾಲ ತಾಣಗಳಲ್ಲಿ ಈ ವಿಡಿಯೋ ಪ್ರಸಾರವಾದ ಮೇಲೆ ಸಾರ್ವಜನಿಕರು ಕ್ರಮ ಜರುಗಿಸುವಂತೆ ಪೊಲೀಸರನ್ನು ಒತ್ತಾಯಿಸಿದರು. ವಿಡಿಯೋ ವೀಕ್ಷಿಸಿದ ಪೊಲೀಸರು ಐಪಿಸಿ ಸೆಕ್ಷನ್ 307 ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಸಂಗೀತಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಟಾರ್ಚರ್ ವಿಡಿಯೋ ನೋಡಿ:

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Horrible Video: UP Shocker! Woman beats mother-in-law black and blue, exposed. They were married for last seven years but now they have filed a divorce case in court. The couple has been going through a rough phase and now they will definitely put an end to all their ties.
Please Wait while comments are loading...